ಬಾಗಲಕೋಟ14
: ಹಾಕಿ ರಾಷ್ಟ್ರೀಯ ಕ್ರೀಡೆಯಾಗಿದ್ದರೂ ಕ್ರೀಕೆಟ್ ಆಟಕ್ಕೆ ಸಿಗುವ ಮಾನ್ಯತೆ ಹಾಕಿಗೆ ಸಿಗುತ್ತಿಲ್ಲ. ಇದನ್ನು ಹೋಗಲಾಡಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿ.ಪಂ
ಸಿಇಓ ಗಂಗೂಬಾಯಿ ಮಾನಕರ ವಿಷಾದ ವ್ಯಕ್ತಪಡಿಸಿದರು.
ಬಿವಿವಿ ಸಂಘದ ಮೈದಾನದಲ್ಲಿ ಜರುಗುದ
ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಯ ಸಮಾರೋಪ
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಆಟದಲ್ಲಿ ಸೋಲು- ಗೆಲವು ಸಾಮಾನ್ಯವಾಗಿದ್ದು ಸೋತವರು ನಿರಾಶರಾಗದೆ ಹೆಚ್ಚಿನ ಪ್ರಯತ್ನ ಮಾಡುವುದರ ಮೂಲಕ ಮುಂಬರುವ ದಿನಗಳಲ್ಲಿ
ಜಯಶಾಲಿಯಾಗಲಿ ಎಂದು ಹರಸಿ ವಿಜೇತ
ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದರು. ಅವರು ಕ್ರೀಡೆಗೆ ಸಕರ್ಾರದಿಂದ
ಉತ್ತಮ ಪ್ರೋತ್ಸಾಹ ಸಿಗುತ್ತಿದ್ದು ಇಂತಹ ರಾಜ್ಯ ಮಟ್ಟದ
ಹಾಕಿ ಪಂದ್ಯವನ್ನು ಆಯೋಜಿಸಿದ ಬಿ.ವಿ.ವಿ
ಸಂಘದ ಎಲ್ಲ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬಿ.ವಿ.ವಿ
ಸಂಘದ ಗೌರವ ಕಾರ್ಯದಶರ್ಿ ಮಹೇಶ
ಅಥಣಿ ಮಾತನಾಡಿ ಬಿ.ವ್ಹಿ.ವ್ಹಿ.ಸಂಘದ ಕಾಯರ್ಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠರವರು ಕೇವಲ ಪಠ್ಯಗಳಿಗಷ್ಟೇ ಅಲ್ಲದೇ
ಇಂತಹ ಕ್ರೀಡಾಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತ ಬಂದಿದ್ದು ಈ ಕ್ರೀಡಾಕೂಟವು ಬಿ.ವ್ಹಿ.ವ್ಹಿ. ಸಂಘವು
ಆಯೋಜಿಸಿದ ಆರನೇ ಕ್ರೀಡಾಕೂಟವಾಗಿದೆ. ಬಿ.ವ್ಹಿ.ವ್ಹಿ. ಸಂಘದ
ಮೈದಾನದಲ್ಲಿ ಹಾಕಿ ಆಡಿದ ಅನೇಕ
ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಆಡಿ ನಗರಕ್ಕೆ ಕೀತರ್ಿ
ತಂದಿದ್ದಾರೆ. ಅದೇ ರೀತಿ ಈ
ಕ್ರೀಡಾಕೂಟದಲ್ಲಿ ಜಯಗಳಿಸಿದ ತಂಡಗಳು ರಾಷ್ಟ್ರಮಟ್ಟದಲ್ಲಿಯೂ ಪ್ರಶಸ್ತಿ ಪಡೆಯಲಿ ಎಂದು ಹೇಳಿದರು. ಕ್ರೀಡಾಕೂಟ
ಯಶಸ್ವಿಯಾಗಲು ಹಗಲಿರುಳು ಕಾರ್ಯನಿರ್ವಹಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.
ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ
ಪ್ರಾಚಾರ್ಯರಾದ ಡಾ.ಪಿ. ಎಸ್.
ಆಲೂರ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಬಸವೇಶ್ವರ ಕಲಾ ಮಹಾವಿದ್ಯಾಲಯದ ವಿದ್ಯಾಥರ್ಿನಿಯರು
ಪ್ರಾಥರ್ಿಸಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಎಸ್.ಬಿ.ಪೂಜಾರಿ
ಇವರು ವಂದಿಸಿದರು.
ಇದೇ ಸಂದರ್ಭದಲ್ಲಿ ವಿಜೇತ ಹಾಗೂ ರನ್ನಸರ್್ ಅಪ್ ತಂಡಗಳಿಗೆ ಅತ್ಯಾಕರ್ಷಕ ಪಾರಿತೋಷಕಗಳನ್ನು ಅತಿಥಿಗಳು ವಿತರಿಸಿದರು. ಕ್ರೀಡಾಧ್ವಜ ಅವರೋಹಣದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ರಾಜ್ಯ
ಮಟ್ಟದ ಹಾಕಿ ಕ್ರೀಡಾಕೂಟ
ಬಾಲಕಿಯರ
ವಿಭಾಗದಲ್ಲಿ ಕೊಡಗು, ಬಾಲಕರ ವಿಭಾಗದಲ್ಲಿ ಬೆಂಗಳೂರಿನ ದಕ್ಷಿಣ ಜಯಶಾಲಿ
ಬಾಗಲಕೋಟ
: ಬಸವೇಶ್ವರ ವಿದ್ಯಾವರ್ದಕ ಸಂಘದ ಮೈದಾನದಲ್ಲಿ ನಡೆದ
ಎರಡನೇ ದಿನದಲ್ಲಿ ರಾಜ್ಯ ಮಟ್ಟದ ಹಾಕಿ ಕ್ರೀಡಾಕೂಟದ ಪಂದ್ಯಾವಳಿಯ
ಬಾಲಕಿಯರ ವಿಭಾಗದಲ್ಲಿ ಕೊಡಗು ಹಾಗೂ ಬಾಲಕರ ವಿಭಾಗದಲ್ಲಿ
ಬೆಂಗಳೂರು ದಕ್ಷಿಣ ತಂಡಗಳು ಫೈನ್ ಪಂದ್ಯದಲ್ಲಿ ಜಯಶಾಲಿಗಾಳಾಗಿವೆ.
ಬಾಲಕಿಯರ ವಿಭಾಗದಲ್ಲಿ ಕೊಡಗು-ಮೈಸೂರು ತಂಡಗಳ ನಡುವೆ ನಡೆದ ಫೈನಲ್ ಹಣಾಹಣಿಯಲ್ಲಿ
ಕೊಡಗು ತಂಡ 3-1 ಗೋಲುಗಳಿಂದ ಮೈಸೂರು ತಂಡವನ್ನು ಸೋಲಿಸಿ ಜಯದ ನಗೆ ಬೀರಿದರೆ,
ಬಾಲಕರ ವಿಭಾಗದಲ್ಲಿ ಕೊಡಗು-ಬೆಂಗಳೂರು ದಕ್ಷಿಣ ತಂಡಗಳ
ನಡುವೆ ನಡೆದ ಫೈನಲ್ ಹಣಾಹಣಿಯಲ್ಲಿ
ಬೆಂಗಳೂರು ದಕ್ಷಿಣ ತಂಡ 2-1 ಗೋಲುಗಳಿಂದ ಕೊಡಗು ತಂಡವನ್ನು ಸೋಲಿಸಿ ಜಯದ
ನಗೆ ಬೀರಿತು.
ಸೆಮಿಫೈನಲ್
ಪದ್ಯಂದ ಫಲಿತಾಂಶ
ಬಾಲಕೀಯರ ವಿಭಾಗದ ಸೆಮಿಪೈನಲ್ನಲ್ಲಿ ಕೊಡಗು- ಚಿಕ್ಕೋಡಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಡಗು
ತಂಡ 10-0 ಗೋಲುಗಳಿಂದ ಚಿಕ್ಕೋಡಿ ತಂಡವನ್ನು ಸೋಲಿಸಿ ಪೈನಲ್ ಹಂತ ತಲುಪಿದರೆ, ಮೈಸೂರು
ತಂಡ ಬಳ್ಳಾರಿ ತಂಡವನ್ನು 6-0 ಗೋಲುಗಳಿಂದ ಸೋಲಿಸಿ ಫೈನಲ್ ಹಂತವನ್ನು ತಲುಪಿತು. ಬಾಲಕರ ವಿಭಾಗದ ಸೆಮಿಪೈನಲ್ನಲ್ಲಿ ಕೊಡಗು-ಶಿವಮೊಗ್ಗ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಡಗು
ತಂಡ 3-0 ಗೋಲುಗಳಿಂದ ಶಿವಮೊಗ್ಗ ತಂಡವನ್ನು ಸೋಲಿಸಿ ಪೈನಲ್ ಹಂತ ತಲುಪಿದರೆ, ಬೆಂಗಳೂರು
ದಕ್ಷಿಣ ತಂಡ ಬಳ್ಳಾರಿ ತಂಡವನ್ನು 10-0 ಗೋಲುಗಳಿಂದ ಸೋಲಿಸಿ ಫೈನಲ್ ಹಂತವನ್ನು ತಲುಪಿತು.
ಜಯಶಾಲಿಯಾದ ತಂಡಗಳಿಗೆ ಬಿ.ವ್ಹಿ.ವ್ಹಿ.ಸಂಘದ ಕಾಯರ್ಾಧ್ಯಕ್ಷರಾದ ಡಾ.
ವೀರಣ್ಣ ಚರಂತಿಮಠ, ಗೌರವ ಕಾರ್ಯದಶರ್ಿಗಳಾದ ಮಹೇಶ
ಎನ್. ಅಥಣಿ, ವೈದ್ಯಕೀಯ ಮಹಾವಿದ್ಯಾಲಯಗಳ ಕಾಯರ್ಾಧ್ಯಕ್ಷ ಸಿದ್ದಣ್ಣ ಶೆಟ್ಟರ, ಕಾಲೇಜುಗಳ ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷ ಅಶೋಕ ಎಂ.ಸಜ್ಜನ
ಬೇವೂರ, ಜಿಲ್ಲಾ ಪದವಿ ಪೂರ್ವ ಹಾಗೂ
ವೃತ್ತಿ ಶಿಕ್ಷಣ ಇಲಾಖೆಯ ಉಪನಿದರ್ೇಶಕರಾದ ಎಸ್.ಬಿ.ಪೂಜಾರಿ, ಪ್ರಾಚಾರ್ಯರಾದ ಪಿ.ಎಸ್.ಆಲೂರ ಶುಭ
ಕೋರಿದ್ದಾರೆ.