ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಪಡೆಗೆ ತಿರುಗೇಟು ಕೊಟ್ಟ ಕ್ರಿಕೆಟ್ ಆಸ್ಟ್ರೇಲಿಯಾ

ಸಿಡ್ನಿ: ಮೊಹ್ಮದ್ ಶಮಿ ಅವರ ಮಾರಕ ದಾಳಿಯ ಹೊರತಾಗಿಯೂ ಭರ್ಜರಿ ಬ್ಯಾಟಿಂಗ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ ಟೀಂ ಇಂಡಿಯಾಕ್ಕೆ  ತಿರುಗೇಟು ಕೊಟ್ಟಿದೆ. 

ಸಿಡ್ನಿಯಲ್ಲಿ ನಡೆದ ಮೂರನೇ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಕ್ರಿಕೆಟ್ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್ಮನ್ಗಳದ ಶಾಟರ್್ ಮತ್ತು ಬ್ರಿಯಾಂಟ್ ಅವರ ಅರ್ಧ ಶತಕದ ನೆರವಿನಿಂದ ಉತ್ತಮ ಆರಂಭ ಪಡೆಯಿತು. 

ನಂತರ ಮಧ್ಯಮ ಕ್ರಮಾಂಕದಲ್ಲಿ ಕಾರ್ಡರ್ (38), ವೈಟ್ಮನ್ (35), ಉಪ್ಪಾಳ್ (5), ಮೆಲರ್ೊ (3)ರನ್ ಗಳಿಸಿದ್ರು. ನೀಲ್ಸನ್ (55), ಹಾಡರ್ಿ 67 ಅರ್ಧ ಶತಕ ಬಾರಿಸಿ ಟೀಂ ಇಂಡಿಯಾ ಬೌಲರ್ಗಳ ಬೆವರಿಳಿಸಿದ್ರು. 

ದಿನದಾಟದ ಅಂತ್ಯದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 351 ರನ್ ಗಳಿಸಿತು. ಟೀಂ ಇಂಡಿಯಾ ಪರ ಮೊಹ್ಮದ್ ಶಮಿ 3 ವಿಕೆಟ್ ಪಡೆದು ಮಿಂಚಿದ್ರು. ಉಮೇಶ್ ಯಾದವ್ ಮತ್ತು ಆರ್.ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು.