ಕೊಪ್ಪಳ 21: ಅನಧಿಕೃತ ಮರಳು ಗಣಿಗಾರಿಕೆ/ ಸಾಗಾಣಿಕೆ ಕಟ್ಟುನಿಟ್ಟಾಗಿ ತಡೆಗಟ್ಟುವ ನಿಟ್ಟಿನಲ್ಲಿ ಆಯಾ ತಾಲೂಕು ಮರಳು ಮಾನಿಟರಿಂಗ್ ಸಮಿತಿಯ ಸದಸ್ಯರನ್ನೊಳಗೊಂಡ ತಂಡವನ್ನು ಮಾಡಿ ಮೊಬೈಲ್ ಸ್ಕ್ವಾಡ್ಗಳನ್ನು ರಚಿಸಿ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ರವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನಿಡಿದರು.
ಜಿಲ್ಲಾ ಟಾಸ್ಕ್ಫೋಸರ್್ (ಗಣಿ) ಸಮಿತಿ, ಜಿಲ್ಲಾ ಮರಳು ಮಾನಿಟರಿಂಗ್ ಸಮಿತಿ ಹಾಗೂ ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ಲೈಸೆನ್ಸ್ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರದ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು (ಆಗಸ್ಟ್. 19) ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬಳಗೇರಿ ಗ್ರಾಮದ ಸವರ್ೆ ನಂ. 220/1, 220/2, 220/3, 220/5, 220/7 ಮತ್ತು 220/8 ರ 9-20 ಎಕರೆ ಪ್ರದೇಶದಲ್ಲಿ ಮಂಜೂರಾಗಿರುವ ಮರಳು ಪರವಾನಿಗೆ ಸಂಖ್ಯೆ: ಕೆಪಿಎಲ್ಎನ್ಎಸ್ಪಿಒಎಸ್-01 ಪ್ರದೇಶದಲ್ಲಿ ಉತ್ಪಾದನೆಯಾಗುವ ಮರಳಿನ ಮಾರಾಟ ಮೌಲ್ಯವನ್ನು ನಿರ್ಧರಿಸಲಾಗಿದ್ದು, ಲೋಕೋಪಯೋಗಿ ಇಲಾಖೆ ಎಸ್ಆರ್ ದರದನುಸಾರ ಪ್ರತಿ ಮೆಟ್ರಿಕ್ ಟನ್ಗೆ ರೂ. 866/- ಗಳನ್ನು ನಿಗದಿಪಡಿಸಿ, ಈ ಮೌಲ್ಯಕ್ಕೆ ಮರಳು ಮಾರಾಟ ಮಾಡಬೇಕು. ಜಿಲ್ಲಾ ಮರಳು ಮಾನಿಟರಿಂಗ್ ಸಮಿತಿ ವತಿಯಿಂದ ಜಿಲ್ಲೆಯ ವಿವಿಧೆಡೆ ಜಪ್ತು ಮಾಡಲಾಗಿರುವ ಹಾಗೂ ಇನ್ನು ಮುಂದೆ ಜಪ್ತು ಮಾಡಲಾಗುವ ಮರಳನ್ನು ಜಿಲ್ಲಾ ಕಾರ್ಫಸ್ ಫಂಡ್ನಡಿಯಲ್ಲಿ ಸಾಗಾಣಿಕೆ ಮಾಡಿ ಆಯಾ ತಾಲೂಕಿನ ಲೋಕೋಪಯೋಗಿ ಇಲಾಖೆಯ ಪರಿವೀಕ್ಷಣಾ ಮಂದಿರಗಳ ಆವರಣಗಳಲ್ಲಿ ಸಂಗ್ರಹಿಸಬೇಕು. ಕೊಪ್ಪಳ ತಾಲೂಕಿನ ಹಿರೇಹಳ್ಳ ವ್ಯಾಪ್ತಿಯ ಅಕ್ಕಪಕ್ಕದಲ್ಲಿ ನಡೆಯುತ್ತಿರುವ ಅನಧಿಕೃತ ಮರಳು ಗಣಿಗಾರಿಕೆಯ ಪ್ರದೇಶಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳ ಸಹಯೋಗದಲ್ಲಿ ಪರಿಶೀಲಿಸಿ, ಸ್ಥಳ ಪಂಚನಾಮೆ ಮಾಡಿಕೊಂಡು ಗಣಿಗಾರಿಕೆ ಮಾಡಿರುವ ಪ್ರಮಾಣವನ್ನು ಭೂವಿಜ್ಞಾನಿಗಳಿಂದ ಅಂದಾಜಿಸಿ ನಿಯಮಾನುಸಾರ ಕಾನೂನು ರೀತ್ಯ ಕ್ರಮ ಜರುಗಿಸಲು ಹಾಗೂ ಈ ಸವರ್ೆ ನಂಬರಿನಲ್ಲಿ ಸಾಗಾಣಿಕೆಯಾಗಿರುವ ಮರಳಿನ ಪ್ರಮಾಣದ ಮೌಲ್ಯಕ್ಕೆ ದಂಡ ವಿಧಿಸಿ, ಪಟ್ಟಾದಾರರ ಪಹಣಿ ಪ್ರತಿಯ ಕಲಂ-11 ರಲ್ಲಿ ಭೋಜ ನಮೂದಿಸಬೇಕು ಎಂದರು.
ಗ್ರಾನೈಟ್ (ಅಲಂಕಾರಿಕಾ ಶಿಲಾ) ಮತ್ತು ಕಟ್ಟಡ ಕಲ್ಲು; ಗ್ರಾನೈಟ್ ಕಲ್ಲು ಗಣಿ ಲೈಸೆನ್ಸ್ ಮಂಜೂರಾತಿ ಕೋರಿ ಸಲ್ಲಿಸಿರುವ ಅಜರ್ಿಗಳನ್ನು ಈಗಾಗಲೇ ಈ ಹಿಂದಿನ ಜಿಲ್ಲಾ ಟಾಸ್ಕ್ಫೋಸರ್್ (ಗಣಿ) ಸಮಿತಿ ಸಭೆಯಲ್ಲಿ ತೀರ್ಮಾನ ನಿಸಿದನುಸಾರ ಒಟ್ಟು 10 ಅಜರ್ಿತ ಪ್ರದೇಶಗಳಲ್ಲಿ ಈಗಾಗಲೇ 10 ರಿಂದ 15 ವರ್ಷಗಳ ಹಿಂದೆಯೇ ಇಲಾಖೆಯಿಂದ ಯಾವುದೇ ಪರವಾನಗಿಯನ್ನು ಪಡೆಯದೇ ಗಣಿಗಾರಿಕೆ ಕಾರ್ಯ ನಿರ್ವಹಿಸಿರುವುದು ಕಂಡುಬಂದಿದ್ದು, ಈ ಕೃತ್ಯಕ್ಕಾಗಿ ಒಟ್ಟು 10 ಅಜರ್ಿದಾರರಿಗೆ 4.45 ಕೋಟಿ ದಂಡವನ್ನು ವಿಧಿಸಿ ನೋಟಿಸ್ ಜಾರಿ ಮಾಡಲಾಗಿರುತ್ತದೆ. ಈ ನೋಟಿಸ್ ಜಾರಿ ಆದಾಗ್ಯೂ ಈವರೆಗೂ ಯಾವುದೇ ದಂಡವನ್ನು ಪಾವತಿಸಿಲ್ಲದ ಕಾರಣ ಈ ಮೊತ್ತವನ್ನು ಪಟ್ಟಾದಾರರ ಪಹಣಿ ಪ್ರತಿಯ ಕಲಂ-11 ರಲ್ಲಿ ಭೋಜವಾಗಿ ನಮೂದಿಸಬೇಕು. ಈ ಅಜರ್ಿದಾರರಿಗೆ 07 ದಿನಗಳ ಕಾಲಾವಕಾಶ ನೀಡಿ ಮತ್ತೊಮ್ಮೆ ಅಂತಿಮ ನೋಟಿಸ್ ಜಾರಿ ಮಾಡಬೇಕು. ಉಳಿದಂತೆ 09 ಅಜರ್ಿತ ಪ್ರದೇಶದಲ್ಲಿ ಈಗಾಗಲೇ ಅನಧಿಕೃತ ಕಲ್ಲು ಗಣಿಗಾರಿಕೆ ನಡೆಸಿ ಈ ಗುಂಡಿಗಳನ್ನು ಗಣಿ ತ್ಯಾಜ್ಯ ಮತ್ತು ಮಣ್ಣಿನಿಂದ ಮುಚ್ಚಿರುವುದು ಕಂಡುಬಂದಿದ್ದು, ಅಲ್ಲದೇ ಮತ್ತೊಮ್ಮೆ ಅಂತಿಮ ನೋಟಿಸ್ ಜಾರಿ ಮಾಡಿ ಎಂದರು.
ಜಿಲ್ಲೆಯಲ್ಲಿ ಒಟ್ಟು 08 ಅಜರ್ಿಗಳು ಕಟ್ಟಡ ಕಲ್ಲು ಗಣಿ ಗುತ್ತಿಗೆ ನವೀಕರಣಕ್ಕಾಗಿ ಸ್ವೀಕೃತವಾಗಿದ್ದು, ಈ ಗುತ್ತಿಗೆಗಳನ್ನು ನಿಯಮಾನುಸಾರ ನವೀಕರಣ ಮಾಡುವ ಪೂರ್ವದಲ್ಲಿ ಗುತ್ತಿಗೆ ಪ್ರದೇಶದ ಕಲ್ಲು ಗಣಿ ಗುತ್ತಿಗೆ ಪ್ರದೇಶಗಳ ``ಡಿ.ಜಿ.ಪಿ.ಎಸ್ & ಟೋಟಲ್ ಸೆಕ್ಷನ್' ಸಹಾಯದಿಂದ ಸವರ್ೇ ಕಾರ್ಯ ಕೈಗೊಂಡಿದ್ದು, ಈ ಕಾರ್ಯದನುಸಾರ ಗುತ್ತಿಗೆ ಪ್ರದೇಶದಲ್ಲಿ ನಿರ್ವಹಿಸಿರುವ ಗಣಿಗಾರಿಕೆಯ ಪ್ರಮಾಣವನ್ನು ಅಂದಾಜಿಸಿದೆ. ಈ ಪ್ರಮಾಣದಲ್ಲಿ ನಿಯಮಿತವಾಗಿ ರಾಜಧನ ಪಾವತಿಸಿ ಸಾಗಾಣಿಕೆಯಾದ ಪ್ರಮಾಣವನ್ನು ಹೊರತುಪಡಿಸಿ ಉಳಿದ ಪ್ರಮಾಣಕ್ಕೆ ನಿಯಮಾನುಸಾರ ರಾಜಧನದ 5 ಪಟ್ಟು ದಂಡವಾಗಿ ರೂ. 28.13 ಕೋಟಿಗಳನ್ನು ವಿಧಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿದರ್ೇಶನಾಲಯದ ಸಹಮತಿಯನ್ನು ಕೋರಲಾಗಿದ್ದು, ಈ ಪತ್ರದನುಸಾರ ದಂಡ ವಿಧಿಸಿರುವ ಮೊತ್ತದ ಪೈಕಿ ಶೇ. 25 ರಷ್ಟು ಮೊತ್ತವನ್ನು ಪಾವತಿಸಿಕೊಂಡು ಕಲ್ಲು ಗಣಿ ಗುತ್ತಿಗೆಗಳ ಅವಧಿಯನ್ನು ವಿಸ್ತರಿಸಲು ನಿಯಮಾನುಸಾರ ಕ್ರಮ ಜರುಗಿಸಿ ಹಾಗೂ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಗಣಿಕಾರ್ಯ ಪ್ರಾರಂಭಿಸಿದ ನಂತರ ಉಳಿದ ಬಾಕಿ ಮೊತ್ತವನ್ನು 03 ಸಮ ಕಂತುಗಳಲ್ಲಿ ಪಾವತಿಸಿಕೊಳ್ಳಲು ನಿದರ್ೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬೆಂಗಳೂರು ಇವರು ಪತ್ರ ಮುಖೇನ ತಿಳಿಸಿರುವುದರನ್ವಯ ಈ ದಂಡದ ಮೊತ್ತವನ್ನು ಪಾವತಿಸಲು ಸೂಚಿಸಿ ನೋಟಿಸ್ ಜಾರಿ ಮಾಡಲು ಹಿರಿಯ ಭೂವಿಜ್ಞಾನಿಗಳಿಗೆ ಸೂಚಿಸಿದರು.
ಕಲ್ಲು ಪುಡಿ ಘಟಕಗಳು: ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಸ್ತುತ 42 ಕಲ್ಲುಪುಡಿ ಘಟಕಗಳು ಫಾರಂ-ಸಿ ಲೈಸನ್ಸ್ ಪಡೆದು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳ ಪೈಕಿ ಒಟ್ಟು 28 ಜಲ್ಲಿ ಕ್ರಷರ್ ಘಟಕಗಳ ಮಾಲೀಕರು ಪ್ರಸ್ತುತ ಯಾವುದೇ ಕಟ್ಟಡ ಕಲ್ಲು ಗಣಿ ಗುತ್ತಿಗೆಯನ್ನು ಹೊಂದಿರುವುದಿಲ್ಲವಾದ್ದರಿಂದ ಅಕ್ರಮ ಮೂಲಗಳಿಂದ ಕಚ್ಚಾ ಖನಿಜವನ್ನು ಪಡೆದು ಕಾರ್ಯನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಪ್ರಯುಕ್ತ ಇದು ಕನರ್ಾಟಕ ಕಲ್ಲುಪುಡಿ ಘಟಕಗಳ ನಿಯಂತ್ರಣ ನಿಯಮಾವಳಿ-2012 ರ ನಿಯಮ 3-ಸಿ(1), 3-ಸಿ(2), 3-ಸಿ(3) ಉಲ್ಲಂಘನೆಯಾಗಿದ್ದು, ಕನರ್ಾಟಕ ಕಲ್ಲುಪುಡಿ ಘಟಕಗಳ ನಿಯಂತ್ರಣ ಅಧಿನಿಯಮ -2011 ರ ಕಲಂ 16(2) ರಂತೆ ದಂಡನಾರ್ಹವಾಗಿರುತ್ತದೆ. ಇಂತಹ ಪ್ರಕರಣಗಳಲ್ಲಿ ಕಲಂ 17 ರಂತೆ ವ್ಯಾಪ್ತಿಯ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಕಲಂ 9 ರಂತೆ ಕ್ರಮವಹಿಸಬೇಕಾಗಿರುತ್ತದೆ. ಜೆಸ್ಕಾಂ ಸಂಸ್ಥೆ ನೀಡುವ ವಿದ್ಯುತ್ ಬಿಲ್ಲುಗಳನ್ನು ಆಧರಿಸಿ ಅನಧಿಕೃತ ಕ್ರಷರ್ ಚಾಲನೆಯನ್ನು ಧೃಢೀಕರಿಸಿಕೊಂಡು ಮುಂದಿನ ಕಾನೂನು ಕ್ರಮವಹಿಸುವಂತೆ ಸೂಚಿಸಿದರು.
ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಚಾಲನೆಯಲ್ಲಿರುವ ಕ್ರಷರ್ ಘಟಕಗಳು ಮತ್ತು ನಿಯಮಾವಳಿ ಉಲ್ಲಂಘನೆ ಮಾಡುವ ಅಧಿಕೃತ ಕ್ರಷರ್ ಘಟಕಗಳ ವಿರುದ್ದ ಕಾನೂನು ಕ್ರಮ ವಹಿಸಲು ಕಲಂ 9(1)(ಘಿ) ರಂತೆ ಪ್ರಾಧಿಕಾರದ ಸದಸ್ಯ ಇಲಾಖೆಗಳ ಸಕ್ಷಮ ಅಧಿಕಾರಿಗಳಿಗೆ ಅನಧಿಕೃತ ಗಣಿಗಾರಿಕೆ/ ಸಾಗಾಣಿಕೆಯನ್ನು ನಿರ್ಬಂಧಿಸಲು ಸಕರ್ಾರವು ಹೊರಡಿಸಿರುವ ಅಧಿಕಾರ ಪ್ರತ್ಯಾಯೋಜನೆ ಅಧಿಸೂಚನೆಯ ಮಾದರಿಯಲ್ಲಿ ಸದಸ್ಯ ಇಲಾಖೆಗಳಿಗೆ ಅಧಿಕಾರ ಪ್ರತ್ಯಾಯೋಜಿಸಬೇಕು. ರಾಷ್ಟ್ರೀಯ ಹೆದ್ದಾರಿ-13ರ ಕಾಮಗಾರಿಯನ್ನು ನಿರ್ವಹಿಸಿದ್ದ ಮೆ: ಓರಿಯಂಟಲ್ ಸ್ಟ್ರಕ್ಚರಲ್ ಇಂಜಿನಿಯರಿಂಗ್ ಪ್ರೈ ರವರಿಗೆ ಅನಧಿಕೃತ ಮುರ್ರಂ ಹಾಗೂ ಕಟ್ಟಡ ಕಲ್ಲು ಗಣಿಗಾರಿಕೆಗಾಗಿ ವಿಧಿಸಲಾಗಿರುವ ದಂಡದ ಮೊತ್ತ ರೂ. 75,88,650/- ಗಳನ್ನು ಪಾವತಿಸಿಲ್ಲದ ಪ್ರಯುಕ್ತ ಲೋಕಾಯುಕ್ತರವರು 2019ರ ಜೂನ್. 19 ರಂದು ನೀಡಿರುವ ಆದೇಶದಲ್ಲಿ ಈ ಕಂಪನಿಗಳ ವಿರುದ್ಧ ಸಿವಿಲ್ ಸೂಟ್ (ಅತಟ ಖಣಣ) ದಾಖಲಿಸಲು ಸೂಚಿಸಿರುವಂತೆ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೆಯೇ ನಿಯಮಬಾಹಿರವಾಗಿ ಮುರ್ರಂ ಗಣಿಗಾರಿಕೆ ನಡೆಸುತ್ತಿರುವ ಮೆ:ಬಿಎಸ್ಪಿಸಿಎಲ್ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಿ ಕಾನೂನು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಕೆ. ಸುಕುಮಾರ್ ರವರು ಮಾತನಾಡಿ, ಅನಧಿಕೃತ ಮರಳು ಗಣಿಗಾರಿಕೆ/ ಸಾಗಾಣಿಕೆ ಕಟ್ಟುನಿಟ್ಟಾಗಿ ತಡೆಗಟ್ಟುವ ನಿಟ್ಟಿನಲ್ಲಿ ಆಯಾ ತಾಲೂಕು ಮರಳು ಮಾನಿಟರಿಂಗ್ ಸಮಿತಿಯ ಸದಸ್ಯರನ್ನೊಳಗೊಂಡ ಅಧಿಕಾರಿಗಳ ತಂಡವನ್ನು ಮಾಡಿ ಮೊಬೈಲ್ ಸ್ಕ್ವಾಡ್ಗಳನ್ನು ರಚಿಸಿ ಕ್ರಮ ಜರುಗಿಸಬೇಕಿರುವುದರಿಂದ ಈ ಕುರಿತು ಸಹಾಯಕ ಆಯುಕ್ತರು ಮೇಲುಸ್ತುವಾರಿ ವಹಿಸಬೇಕು. ಈ ಕಾರ್ಯಕ್ಕೆ ಸದಸ್ಯರೊಂದಿಗೆ ಗೃಹ ರಕ್ಷಕ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಅವಶ್ಯಕತೆ ಇದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ವತಿಯಿಂದ ಒಟ್ಟು 08 ಸಂಖ್ಯೆ ಗೃಹ ರಕ್ಷಕ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಬೇಕಾಗಿದೆ ಎಂದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ದಿಲೀಪ್ ಕುಮಾರ್ ಮಾತನಾಡಿ, ಆಗಸ್ಟ್. 08 ರಂದು ಕುಷ್ಟಗಿ ತಾಲೂಕಿನ ಪುರ್ತಗೇರಿ ಗ್ರಾಮದ ಮೆ: ಮಾತಾ ಒವರ್ಸೀಸ್ ಪ್ರೈ ಲಿ., ಕಂಪನಿಯವರ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಸಂಭವಿಸಿದ ಅವಘಡದಲ್ಲಿ ಒಬ್ಬ ಕಾಮರ್ಿಕ ಮೃತಪಟ್ಟ ಪ್ರಯುಕ್ತ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಕಲ್ಲು ಗಣಿ ಗುತ್ತಿಗೆಯನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಡಲಾಗಿದೆ. ಡೈರೆಕ್ಟರ್ ಜನರಲ್ ಆಪ್ ಮೈನ್ಸ್ ಸೇಫ್ಟಿ ಇವರಿಂದ ಗಣಿ ಸುರಕ್ಷತೆ ಹಾಗೂ ಈ ಪ್ರದೇಶದಲ್ಲಿ ವ್ಶೆಜ್ಞಾನಿಕವಾಗಿ ಗಣಿಗಾರಿಕೆ ಮುಂದುವರೆಸುವುದರ ಬಗ್ಗೆ ವರದಿ ಪಡೆಯಬೇಕು ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಘುನಂದನ್ ಮೂತರ್ಿ, ಉಪವಿಭಾಧಿಕಾರಿ ಸಿ.ಡಿ. ಗೀತಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.