ಗೋ ಪೂಜೆ, ಧಾರ್ಮಿಕ ಆಚರಣೆ, ದೇಶದ ಸಂಸ್ಕೃತಿ ರಕ್ಷಣೆ ಮಾಡಬೇಕು:ವಿರೂಪಾಕ್ಷ ಮಹಾಸ್ವಾಮಿಗಳು
Cow worship, religious practices, and the country's culture should be protected: Virupaksha Mahaswam
ಘಟಪ್ರಭಾ 04 : ಭಾರತ ದೇಶದಲ್ಲಿ ಗೋ ಪೂಜೆ, ಗುರು ಹಿರಿಯರಿಗೆ ಗೌರವ ಕೊಡುವದು ಸೇರಿದಂತೆ ಧಾರ್ಮಿಕ ಆಚರಣೆಗಳನ್ನು ಮುಂದುವರೆಸಿಕೊಂಡು ಹೋಗುವ ಮೂಲಕ ಭಾರತ ದೇಶದ ಧಾರ್ಮಿಕ ಪರಂಪರೆಯನ್ನು ಇಂದಿನ ಪೀಳಿಗೆಯ ಜನತೆ ಮುಂದುವರೆಸಿಕೊಂಡು ಹೋಗಬೇಕು ಅಂದರೆ ಮಾತ್ರ ದೇವರು ಧರ್ಮದ ಅರಿವು ಮುಂದಿನ ಪೀಳಿಗೆಗೂ ಸಹ ಮುಂದುವರೆಯುತ್ತದೆ ಎಂದು ಘಟಪ್ರಭಾ ಹೊಸಮಠದ ಮ ನಿ ಪ್ರ ಸ್ವ ವಿರುಪಾಕ್ಷ ಮಹಾಸ್ವಾಮಿಗಳು ಹೇಳಿದರು. ಅವರು ಇತ್ತೀಚೆಗೆ ಘಟಪ್ರಭಾದಲ್ಲಿ ಶ್ರೀ ಶಿವ ಪಾರ್ವತಿ ಭಜನಾ ಮಂಡಳಿ, ಜೈ ಜವಾನ್ ಜೈ ಕಿಸಾನ್ ಕೃಷಿ ಗ್ರಾಮೀಣ ಅಭಿವೃದ್ಧಿ ಸಂಘ ಖನಗಾಂವ ನಬಾಪುರ, ಮತ್ತು ಏಳು ಮಕ್ಕಳ ಮಕ್ಕಳ ಎಲ್ಲಮ್ಮ ದೇವಸ್ಥಾನ ಕಮೀಟಿಯವರು ಗುರು ಬಸಯ್ಯಾ ಕಪೂರ ಮಠ ಅವರ ಹುಟ್ಟು ಹಬ್ಬದ ನಿಮಿತ್ತವಾಗಿ ಹಮ್ಮಿಕೊಂಡಿದ್ದ ಗೋ ಪೂಜೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ದ ಸಾನಿಧ್ಯ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಗೋಕಾಕ ಜ್ಞಾನ ಮಂದಿರದ ಪೂಜ್ಯ ಸುವರ್ಣಾ ಮಾತಾಜಿ ಮತ್ತು ಜೈ ಜವಾನ್ ಜೈ ಕಿಸಾನ್ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಂಘದ ಸ್ಥಾಪಕ ಅಧ್ಯಕ್ಷರಾದ ಈಶ್ವರ ಭಾಗೋಜಿ ಮಾತನಾಡಿ ಮಹಿಳೆಯರು, ದೇವರು ಧರ್ಮ ಗುರು ಹಿರಿಯರಿಗೆ ಗೌರವ ಕೊಡುವದು, ಮತ್ತು ಮೂಢನಂಬಿಕೆಗಳನ್ನು ಹೋಗಲಾಡಿಸಲು ಮತ್ತು ಮಹಿಳೆಯರು ಸ್ವಾವಲಂಬನೆ ಬದುಕು ಸಾಗಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಶ್ರೀ ಗುರು ಬಸಯ್ಯಾ ಕಪೂರಮಠ ಅವರನ್ನು ಸಾಮೂಹಿಕವಾಗಿ ಸನ್ಮಾನ ಮಾಡಿ ಗೌರವಿಸಿ ಅಭಿನಂದಿಸಲಾಯಿತು.ಶಿಕ್ಷಕರಾದ ಎಮ್ ಆರ್ ನಡುವಿನಮನಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು ಶ್ರೀಮತಿ ಪೂರ್ಣಿಮಾ ತವಗ,ಶಿವ ಪಾರ್ವತಿ ಭಜನಾ ಮಂಡಳಿಯ ಅಧ್ಯಕ್ಷರಾದ ಪ್ರೇಮಾ ಮಠಪತಿ, ಗುರುಪಾದ ಚಚಡಿ, ನಾಗರಾಜ್ ಚಚಡಿ, ಪತ್ರಿಕಾ ವರದಿಗಾರರಾದ ರಮೇಶ್ ಜಿರ್ಲಿ, ಗುರುರಾಜ್ ಗೌಡಾಡಿ, ಅರುಣ ಮಾನೆ ಸೇರಿದಂತೆ ನಾಗರಿಕರು ಮಹಿಳೆಯರು, ದಾಸ ಸಾಹಿತ್ಯ ಭಜನಾ ಮಂಡಳಿಗಳ ಸದಸ್ಯರು ಸೇರಿದಂತೆ ಎಲ್ಲರೂ ಭಾಗವಹಿಸಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 