ಹಾವೇರಿ: ಮೇ 23: ರಾಜ್ಯ ಸಕರ್ಾರದ ಹೊಸ ಬಜೆಟ್ ಘೋಷಿತ ಕಾರ್ಯಕ್ರಮಗಳ ಆರಂಭ ಹಾಗೂ ರಾಜ್ಯ ಸಕರ್ಾರ ಘೋಷಿಸಿರುವ ಆಥರ್ಿಕ ಪ್ಯಾಕೇಜ್ ಅಡಿ ಪರಿಹಾರ ಒದಗಿಸಲು ಫಲಾನುಭವಿಗಳ ಗುರುತಿಸುವ ಕೆಲಸ ಆರಂಭಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿಡಿಯೋ ಸಂವಾದದ ಮೂಲಕ ತಾಲೂಕಾ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಲಾಕ್ಡೌನ್ನಿಂದ ತೊಂದರೆಗೊಳಗಾದ ವಿವಿಧ ವೃತ್ತಿಪರ ಸಮುದಾಯಗಳಿಗೆ ಸಕರ್ಾರ ಹಲವು ಪ್ರೋತ್ಸಾಹದಾಯಕ ನೆರವನ್ನು ಘೋಷಿಸಿದೆ. ಇವರಿಂದ ಅಜರ್ಿ ಸ್ವೀಕರಿಸಿ ಪರಿಹಾರ ತಲುಪಿಸುವ ನಿಟ್ಟಿನಲ್ಲಿ ತಹಶೀಲ್ದಾರಗಳು ಹಾಗೂ ಯೋಜನೆಗಳ ವ್ಯಾಪ್ತಿಗೆ ಬರುವ ಅಧಿಕಾರಿಗಳು ಕ್ರಮವಹಿಸುವಂತೆ ಸೂಚನೆ ನೀಡಿದರು.
ಹೂ ಬೆಳೆಗಾರರು, ತರಕಾರಿ ಹಾಗೂ ಹಣ್ಣು ಬೆಳೆಗಾರರಿಗೆ ಕೋವಿಡ್ ಸಂದರ್ಭದಲ್ಲಿ ನಷ್ಟ ಅನುಭವಿಸಿದ ಕಾರಣ ಪರಿಹಾರ ಘೋಷಿಸಿದೆ. ಈಗಾಗಲೇ ಸಮಿತಿಯನ್ನು ರಚಿಸಿ ನಷ್ಟದ ವಿವರ ಸಂಗ್ರಹಿಸಲು ಸೂಚನೆ ನೀಡಲಾಗಿದೆ. ಈ ಕುರಿತಂತೆ ತೋಟಗಾರಿಕಾ, ಕೃಷಿ , ಕಂದಾಯ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಅಗಸ ವೃತ್ತಿಯಲ್ಲಿರುವ ಜನರಿಗೆ ಹಾಗೂ ಕ್ಷೌರಿಕ ವೃತ್ತಿ, ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ತಲಾ ಐದು ಸಾವಿರ ರೂ. ಒಂದು ಬಾರಿ ಪರಿಹಾರ ಘೋಷಣೆಮಾಡಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಈ ಕುರಿತಂತೆ ಮಾಹಿತಿ ಸಂಗ್ರಹಿಸಿ ಅರ್ಹರಿಗೆ ಅಗತ್ಯ ಪರಿಹಾರ ನೀಡುವ ನಿಟ್ಟಿನಲ್ಲಿ ತಹಶೀಲ್ದಾರಗಳೊಂದಿಗೆ ಸಮನ್ವಯ ಸಾಧಿಸುವಂತೆ ಸೂಚನೆ ನೀಡಿದರು.ಕೈಗಾರಿಕೆ, ಸಣ್ಣ ಕೈಗಾರಿಕೆಗಳಿಗೆ ನೆರವು, ನೇಕಾರರಿಗೆ , ರೈತರಿಗೆ ಬಡ್ಡಿರಹಿತ ಸಾಲ ಸೇರಿದಂತೆ ಹಲವು ಪರಿಹಾರ ಯೋಜನೆಗಳನ್ನು ಸಕರ್ಾರ ಪ್ರಕಟಿಸಿದೆ. ಇದೇ ಮಾದರಿಯಲ್ಲಿ ಕೇಂದ್ರ ಸಕರ್ಾರವು ಹಲವು ಪ್ರೋತ್ಸಾಹದಾಯಕ ನೆರವು ಪ್ರಕಟಿಸಿದೆ. ಈ ಕುರಿತಂತೆ ಸಂಬಂಧಿಸಿದ ಇಲಾಖೆಗಳು ಫಲಾನುಭವಿಗಳನ್ನ ನೊಂದಾಯಿಸಿ ನೆರವು ಒದಗಿಸುವ ಕಾರ್ಯವನ್ನು ಮಾಡುವಂತೆ ಸೂಚನೆ ನೀಡಿದರು.ರಾಜ್ಯ ಸಕರ್ಾರ 2020-21ನೇ ಸಾಲಿನ ಬಜೆಟ್ ಘೋಷಿತ ಯೋಜನೆಗಳ ಅನುಷ್ಠಾನಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ನೀರಾವರಿ, ಕೃಷಿ, ತೋಟಗಾರಿಕೆ, ಲೋಕೋಪಯೋಗಿ, ಸೂಚನೆ ನೀಡಿದರು.ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಅವರು ಮಾತನಾಡಿ, ರಾಜ್ಯ ಸಕರ್ಾರ ಕೋವಿಡ್ ಹಿನ್ನೆಲೆಯಲ್ಲಿ ಆಟೋ ಚಾಲಕರು, ಅಗಸರು, ಕ್ಷೌರಿಕರಿಗೆ ಘೋಷಿಸಿರುವ ಪರಿಹಾರ ಮೊತ್ತ ಪಡೆಯಲು ಆನ್ಲೈನ್ ಅಜರ್ಿ ಸಲ್ಲಿಸಲು ಅನುಕೂಲವಾಗುವಂತೆ ಎನ್.ಐ.ಸಿ. ಮೂಲಕ ಸಾಫ್ಟವೇರ್ ಅಭಿವೃದ್ಧಿಮಾಡಿ ಈ ಸಂಜೆಯೊಳಗೆ ಎಲ್ಲ ತಹಶೀಲ್ದಾರಗಳಿಗೆ ಹಾಗೂ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ಒದಗಿಸಲಾಗುವುದು. ಯೋಜನೆಯ ಲಾಭಪಡೆಯಲು ಇರುವ ಅರ್ಹತೆ, ಸಲ್ಲಿಸಬೇಕಾದ ದಾಖಲೆ ಹಾಗೂ ವಿವರಗಳ ಕುರಿತಂತೆ ತಿಳಿಸಲಾಗುವುದು. ತ್ವರಿತವಾಗಿ ಈ ಕುರಿತಂತೆ ಫಲಾನುಭವಿಗಳ ನೊಂದಣಿ ಹಾಗೂ ಯಾವುದೇ ಗೊಂದಲ ವಿಲ್ಲದೆ ಪರಿಹಾರ ಪಾವತಿಗೆ ಸಿದ್ಧತೆಮಾಡಿಕೊಳ್ಳಬೇಕೆಂದು ಸೂಚನೆ ನೀಡಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ವಾತರ್ಾಧಿಕಾರಿ ಬಿ.ಆರ್.ರಂಗನಾಥ್, ನಗರಾಭಿವೃದ್ಧಿ ಕೋಶದ ರವೀಂದ್ರ ಕುಂದಗೋಳ, ಲೋಕೋಪಯೋಗಿ ಇಲಾಖೆ ಅಭಿಯಂತರ ಭಾವನಾಮೂತರ್ಿ, ನಿಮರ್ಿತಿ ಕೇಂದ್ರದ ಯೋಜನಾ ನಿದರ್ೆಶಕ ತಿಮ್ಮೇಶ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ, ತೋಟಗಾರಿಕೆ ಇಲಾಖೆ ಉಪನಿದರ್ೆಶಕ ಪ್ರದೀಪ, ಕೃಷಿ ಇಲಾಖೆ ಉಪನಿದರ್ೆಶಕ ಕರಿಯಲ್ಲಪ್ಪ, ತಹಶೀಲ್ದಾರ ಶಂಕರ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.