ಕೋವಿಡ್ 19 ಸೋಂಕು ಹಿನ್ನೆಲೆ: ಸರ್ಕಾರಿ ನೌಕರರಿಗೆ ಬಯೋಮೆಟ್ರಿಕ್ ನಿಂದ ವಿನಾಯಿತಿ

ನವದೆಹಲಿ, ಮೇ 19, ಮೇ ೩೧ರವರೆಗೆ ಲಾಕ್‌ಡೌನ್ ವಿಸ್ತರಿಸಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಕಚೇರಿ ಹಾಜರಾತಿಗೆ ಬಯೋಮೆಟ್ರಿಕ್ ಬಳಕೆಯನ್ನು ಮುಂದಿನ ಆದೇಶದವರೆಗೆ ಅಮಾನತ್ತಿಡಲಾಗಿದೆ. ಕೇಂದ್ರ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆ ಸಚಿವಾಲಯ ಈ ವಿಷಯ ತಿಳಿಸಿದ್ದು, ಕೋವಿಡ್ 19 ಸೋಂಕು ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದ್ದು, ಸಿಬ್ಬಂದಿಯ ಹಾಜರಾತಿಯನ್ನು ಉಪಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ದಾಖಲಾತಿಯನ್ನು ಪರಿಶೀಲಿಸಬೇಕು. ದಿನಬಿಟ್ಟು ದಿನ ಶೇಕಡ ೫೦ರಷ್ಟು ಸಿಬ್ಬಂದಿ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಹಾಜರಾತಿ ಅಗತ್ಯವಿಲ್ಲದ ಅಧಿಕಾರಿಗಳು ಮನೆಯಿಂದಲೇ ದೂರ ಸಂಪರ್ಕ ವ್ಯವಸ್ಥೆ ಮೂಲಕ  ಕಚೇರಿ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳುವಂತೆ ಸೂಚಿಸಲಾಗಿದೆ.