ಕೋವಿಡ್ -19; ಬ್ರಿಜಿಲ್ ಮೇಲೆ ಪ್ರಯಾಣ ನಿರ್ಬಂಧ ವಿಧಿಸಿದ ಅಮೆರಿಕಾ

ವಾಷಿಂಗ್ಟನ್, ಮೇ 25, ಅತಿ ಹೆಚ್ಚು  ಕೋವಿಡ್ -19 ಪ್ರಕರಣಗಳು ವರದಿಯಾಗುತ್ತಿರುವ ಬ್ರಿಜಿಲ್  ದೇಶದ  ವಿರುದ್ದ  ಅಮೆರಿಕಾ ಪ್ರಯಾಣ ನಿರ್ಬಂಧವನ್ನು ವಿಧಿಸಿದೆ. ಶ್ವೇತ ಭವನ ಭಾನುವಾರ  ಈ ನಿರ್ಧಾರ ಪ್ರಕಟಿಸಿದೆ. ಅಮೆರಿಕಾ ದೇಶದ  ಜನರ   ಆರೋಗ್ಯ  ರಕ್ಷಣೆ  ಉದ್ದೇಶದಿಂದ   ಅಧ್ಯಕ್ಷ  ಡೋನಾಲ್ಡ್  ಟ್ರಂಪ್ ಕಠಿಣ ನಿರ್ಧಾರ   ಕೈಗೊಂಡಿದ್ದು,  ಬ್ರಿಜಿಲ್ ನಲ್ಲಿ  14 ದಿನಗಳಿಗಿಂತ   ಹೆಚ್ಚುದಿನಗಳ ಕಾಲ ತಂಗಿರುವ    ಜನರು ಅಮೆರಿಕಾ ಪ್ರವೇಶಿಸುವುದನ್ನು  ನಿರ್ಬಂಧಿಸಿ ಆದೇಶಹೊರಡಿಸಿದ್ದಾರೆ ಎಂದು ಶ್ವೇತ ಭವನ ಹೇಳಿಕೆಯಲ್ಲಿ ತಿಳಿಸಿದೆ.ಬ್ರಿಜಿಲ್ ನಲ್ಲಿರುವ  ವಿದೇಶಿಯರು  ನಮ್ಮ ದೇಶದಲ್ಲಿ ಸೋಂಕು  ಹರಡುವುದನ್ನು ತಡೆಯಲು  ಈ ಕ್ರಮ ಕೈಗೊಳ್ಳಲಾಗಿದೆ. ಆದರೆ,  ಈ ನಿರ್ಬಂಧ ಉಭಯ ದೇಶಗಳ ನಡುವಣ ವ್ಯಾಪಾರ, ವಾಣಿಜ್ಯದ ಹರಿವಿನ ಮೇಲೆ  ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.