ನವದೆಹಲಿ, ಜೂನ್ ೧೦, ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ಐದು ಸಾವಿರದ ೯೯೧ ಮಂದಿ ಕೊರೊನಾ ಸೋಂಕಿತರು ಗುಣಮುಖ ಹೊಂದಿದ್ದು, ಈವರೆಗೆ ಒಟ್ಟು ಚೇತರಿಕೆ ಹೊಂದಿದವರ ಸಂಖ್ಯೆ ೧ ಲಕ್ಷದ ೩೫ ಸಾವಿರದ ೨೦೬ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸೋಂಕಿನಿಂದ ಚೇತರಿಕೆಹೊಂದುತ್ತಿರುವವರ ಪ್ರಮಾಣ ೪೮.೮೮ಕ್ಕೆ ತಲುಪಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೧ ಲಕ್ಷದ ೩೩,೬೩೨ರಷ್ಟಿದ್ದು, ಇದೇ ಮೊದಲ ಬಾರಿಗೆ ಕೊರೊನಾ ಸಕ್ರಿಯ ಪ್ರಕರಣಗಳಿಗಿಂತಲೂ ಚೇತರಿಕೆ ಹೊಂದಿದವರ ಪ್ರಮಾಣವೇ ಹೆಚ್ಚಾಗಿದೆ.ಕಳೆದ ೨೪ ಗಂಟೆಗಳಲ್ಲಿ ೯,೯೮೫ ಹೊಸ ಪ್ರಕರಣಗಳು ಪತ್ತೆಯಾಗಿದ್ದು. ಇದರೊಂದಿಗೆ ದೇಶದಲ್ಲಿ ಕೊರೊನಾ ಸೋಂಕು ದೃಢ ಪ್ರಕರಣಗಳ ಸಂಖ್ಯೆ ೨ ಲಕ್ಷದ ೭೬, ೫೮೩ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಸಚಿವಾಲಯ ಹೇಳಿದೆ.
ಕಳೆದ ೨೪ ಗಂಟೆಗಳಲ್ಲಿ ೨೭೯ ಮಂದಿ ಮೃತಪಟ್ಟಿದ್ದು, ದೇಶಾದ್ಯಂತ ಈವರೆಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ ೭,೭೪೫ಕ್ಕೆ ತಲುಪಿದೆ. ದೇಶದಲ್ಲಿ ಸೋಂಕಿನಿಂದ ಸಾವನ್ನಪ್ಪುತ್ತಿರುವರ ಪ್ರಮಾಣ ಶೇ ೨.೮೦ರಷ್ಟಿದೆ. ಈ ನಡುವೆ ಕಳೆದ ೨೪ ಗಂಟೆಗಳಲ್ಲಿ ೧ ಲಕ್ಷದ ೪೫ ಸಾವಿರದ ೨೧೬ ಕೊರೊನಾ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಈವರೆಗೆ ದೇಶದಲ್ಲಿ ಪರೀಕ್ಷೆಗಳ ಸಂಖ್ಯೆ ೫೦ ಲಕ್ಷದ ೬೧ ಸಾವಿರದ ೩೩೨ಕ್ಕೆ ತಲುಪಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ- ಐಸಿಎಂಆರ್ ಹೇಳಿದೆ.ಸರ್ಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳಿಗೆ ಕೋವಿಡ್ -೧೯ ಪರೀಕ್ಷೆ ನಡೆಸಲು ಅನುಮತಿ ಕಲ್ಪಿಸುವ ಮೂಲಕ ಪರೀಕ್ಷಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. ಪ್ರಸ್ತುತ ದೇಶದ್ಯಾಂತ ೮೨೩ ಪ್ರಯೋಗಾಲಯಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಲ್ಲಿ ೫೯೦ ಸರ್ಕಾರಿ ಪ್ರಯೋಗಾಲಯಗಳು, ೨೨೩ ಖಾಸಗಿ ಪ್ರಯೋಗಾಲಯಗಳು ಸೇರಿವೆ ಎಂದು ಐಸಿಎಂ ಆರ್ ಹೇಳಿದೆ.