ಕಾರವಾರ ಜಿಲ್ಲೆಯಲ್ಲಿ 94 ಜನರಿಗೆ ಕೋವಿಡ್

Covid

ಉತ್ತರ ಕನ್ನಡ ಜಿಲ್ಲೆಯಲ್ಲಿ ೯೪ ಜನರಿಗೆ ಕೋವಿಡ್ ಪಾಜಿಟಿವ್ :
೧೦೫ ಜನ ಗುಣಮುಖ ;
ಯಾವುದೇ ಸಾವು ನೋವಿಲ್ಲ  



ಕಾರವಾರ ಅ.21 :  ಉತ್ತರ ಕನ್ನಡ ಜಿಲ್ಲೆಯಲ್ಲಿ  ಬುಧುವಾರ ೯೪ ಜನರಿಗೆ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಸಂಖ್ಯೆ  ಆತಂಕಕ್ಕೆ ಕಾರಣವಾಗಿದೆ.  ಇದೇ ದಿನ ೧೦೫ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.  
ಕೋವಿಡ್ ಬಾಧಿತರು : ಕೋವಿಡ್ ಪಾಜಿಟಿವ್  ಪೀಡಿತರು  ಕಾರವಾರದಲ್ಲಿ ೬ ಜನರಿಗೆ , ಅಂಕೋಲಾ ೫,  ಕುಮಟಾದಲ್ಲಿ ೮, ಹೊನ್ನಾವರದಲ್ಲಿ ೭,  ಭಟ್ಕಳದಲ್ಲಿ ೦,  ಶಿರಸಿಯಲ್ಲಿ ೧೦, ಸಿದ್ದಾಪುರ ೨, ಯಲ್ಲಾಪುರದಲ್ಲಿ ೧, ಮುಂಡಗೋಡಿನಲ್ಲಿ ೪೯ , ಹಳಿಯಾಳದಲ್ಲಿ ೫, ಹಾಗೂ ಜೋಯಿಡಾದಲ್ಲಿ ೧ ಜನರಿಗೆ ಕೋವಿಡ್  ಸೋಂಕು ದೃಢಪಟ್ಟಿದೆ.
೧೦೫ ಜನ  ಗುಣಮುಖರಾಗಿ ಬಿಡುಗಡೆ : ಕಾರವಾರದಲ್ಲಿ ೮ ಜನರಿಗೆ , ಅಂಕೋಲಾ ೫,  ಕುಮಟಾದಲ್ಲಿ ೧೧, ಹೊನ್ನಾವರದಲ್ಲಿ ೨೯, ಭಟ್ಕಳದಲ್ಲಿ ೦,  ಶಿರಸಿಯಲ್ಲಿ ೧೪, ಸಿದ್ದಾಪುರ ೦, ಯಲ್ಲಾಪುರದಲ್ಲಿ ೦, ಮುಂಡಗೋಡಿನಲ್ಲಿ ೩೮ , ಹಳಿಯಾಳದಲ್ಲಿ ೦, ಹಾಗೂ ಜೋಯಿಡಾದಲ್ಲಿ ೦ ಜನ ಕೋವಿಡ್ ನಿಂದ  ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯ ೧೨೩೧೨ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ೧೦೯೪೨ ಜನ ಗುಣಮುSರಾಗಿದ್ದಾರೆ.  ಜಿಲ್ಲೆಯಲ್ಲಿ ಕೋವಿಡ್ ನಿಂದ ಒಟ್ಟು ಸಾವಿನ  ಸಂಖ್ಯೆ ೧೬೦ .