ವಿಜಯಪುರ 04: ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ವ್ಯವಹಾರ ಅಧ್ಯಯನ ಮತ್ತು ಸಂಶೋಧನ ಕೇಂದ್ರವು ಹಾಗೂ ಬಾಗಲಕೋಟೆಯ ನಗರದ ಎ. ಎಸ್. ಪಾಟೀಲ ಕಾರ್ಮರ್ಸ್ ಕಾಲೇಜಿನ ವ್ಯವಹಾರ ಅಧ್ಯಯನ ಮತ್ತು ಸಂಶೋಧನ ಕೇಂದ್ರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಈ ಸಂದರ್ಭದದಲ್ಲಿ ಮಾತನಾಡಿದ ಸಂಶೋಧನ ಕೇಂದ್ರದ ಮುಖ್ಯಸ್ಥ ಡಾ. ಮುರಗೇಶ ಪಟ್ಟಣಶೆಟ್ಟಿ, ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಭವಿಷ್ಯದ ಹಿತದೃಷ್ಟಿಯಿಂದ ಇತರ ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳುವುದು ಉತ್ತಮ ಕೆಲಸ ಇದಾಗಿದೆ. ಸಂಸ್ಥೆಗಳು ಅದರ ಸರಿಯಾದ ಉಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಂಪನಿಯ ಸ್ಥಾಪಕ ಶ್ಯಾಮಸುಂದರ ಸೇಡಂಕರ್ ಮಾತನಾಡಿ, ವ್ಯವಹಾರ ಅಧ್ಯಯನದ ವಿದ್ಯಾರ್ಥಿಗಳಿಗೆ ಕೈಗಾರಿಕೆ ವೀಕ್ಷಣೆ, ಪ್ರೊಜೇಕ್ಟ್, ನೇಮಕಾತಿ ಹಾಗೂ ಇಂಟರ್ನಶಿಪಗಾಗಿ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶಗಳು ಹೆಚ್ಚಾಗುವುದರ ಜೊತೆಗೆ ಭದ್ರತೆಯೂ ಸಿಗಲಿದೆ ಎಂದು ಹೇಳಿದರು.
ಬಿಟ್ ಬೈಟ್ ಪುಡ್ಸ್ ನ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಸಹಸಂಸ್ಥಾಪಕ ಸಿದ್ದಣ್ಣ ಕಣಕಾಲಮಠ ಮತ್ತು ವ್ಯವಹಾರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಚಿದಾನಂದ ಬ್ಯಾಹಟ್ಟಿ ಅವರು ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕಾಲೇಜಿನ ಸಹಪ್ರಾಧ್ಯಾಪಕಿ ಡಾ: ಅಶ್ವಿನಿ ಯರನಾಳ, ಸಹಾಯಕ ಪ್ರಾಧ್ಯಾಪಕರಾದ ಮಹಾಂತೇಶ ಕನಮಡಿ, ಗಂಗಾಧರ ಮಮದಾಪುರ ಮತ್ತು ವಿನಯ ಡರ್ಬಿ ಉಪಸ್ಥಿತರಿದ್ದರು.