ಸಿದ್ಧರಾಮೇಶ್ವರರಿಂದ ಕಾಯಕಕ್ಕೆ ಗೌರವ: ಸಚಿವ ಸುರೇಶ ಅಂಗಡಿ

ಬೆಳಗಾವಿ: 14: 12ನೇ ಶತಮಾನದಲ್ಲಿ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ ಶಿವಯೋಗಿ ಸಿದ್ಧರಾಮೇಶ್ವರರು ಕಾಯಕದ ಮೂಲಕವೇ ಸಮಾಜದ ಒಳಿತು ಬಯಸಿದವರು ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ ಅಂಗಂಡಿ ಅವರು ಹೇಳಿದರು

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ  ಕುಮಾರ ಗಂಧರ್ವ ಕಲಾಮಂದಿರದಲ್ಲಿ (ಜ.14) ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಉತ್ಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.

12 ನೇ ಶತಮಾನದಲ್ಲಿ ಮೂಡ ನಂಬಿಕೆಯನ್ನು ಬಿಟ್ಟು ಕಾಯಕವನ್ನು ಅವಲಂಬಿಸಿ ಸಮಾಜದ ಬಗ್ಗೆ ಚಿಂತನೆ ಮಾಡತ್ತಿದ್ದರು ಎಂದು  ಹೇಳಿದರು.

ಅಂಬೇಡ್ಕರ್, ಶಿವಯೋಗಿ ಹಾಗೂ ಬಸವಣ್ಣನವರು ಜಾತಿ ಭಾಷೆಗೆ ಸಿಮೀತವಾಗಿರದೆ ತಮ್ಮನ್ನು ಸಮಾಜದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ಹೇಳಿದರು.

ಬಡವರಿಗೆ ಅನ್ನವನ್ನು  ಕೊಡುವ ಕಾರ್ಯವನ್ನು ಶಿವಯೋಗಿಗಳು ಮಾಡುತಿದ್ದರು ಎಂದು ಸುರೇಶ ಅಂಗಡಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಆರ್.ಪಿ.ಡಿ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಚ್.ಬಿ.ಕೋಲಕಾರ ಅವರು, ಸೊನ್ನಲಿಗೆಯಲ್ಲಿ ಮಲ್ಲಿಕಾಜರ್ುನ ದೇವಾಲಯವನ್ನು ಹಾಗೂ ಬೃಹತ್ ಕೆರೆಯನ್ನು ಕಟ್ಟಿಸಿದ್ದ ಕೀತರ್ಿ ಶಿವಯೋಗಿಗಳಿಗೆ ಸಲ್ಲುತ್ತದೆ ಎಂದು  ಅವರು ಹೇಳಿದರು.

ಶಿವಯೋಗಿಗಳ ವಚನಗಳು ಅಭಿವ್ಯಕ್ತಿಯ ಸ್ವರೂಪದ್ದಾಗಿದ್ದು, ನೇರವಾಗಿ ಹಾಗೂ ಸರಳ ರೂಪದಲ್ಲಿವೆ ಎಂದು ಹೇಳಿದರು. ವಚನಕಾರರಿಗೆ ವಯಸ್ಸಿನ ಭೇದವಿಲ್ಲ ಆದರೆ ಅಭಿಮತದ ಭೇದವಿದೆ ಎಂದು ಹೇಳಿದರು.ಪ್ರಾರಂಭದಲ್ಲಿ ಸೋಮಲಿಂಗಪ್ಪ ಜಾಲಿಹಾಳ ಮತ್ತು ತಂಡದವರಿಂದ ವಚನ ಗಾಯನ ಕಾರ್ಯಕ್ರಮ ನಡಸಿಕೊಟ್ಟರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕರಾದ ವಿದ್ಯಾವತಿ ಭಜಂತ್ರಿ, ಉಪವಿಭಾಗಾಧಿಕಾರಿಗಳಾದ ಅಶೋಕ ತೇಲಿ, ಬೆಳಗಾವಿ ಉತ್ತರ ವಲಯದ ಶಾಸಕರಾದ ಅನಿಲ್ ಬೆನಕೆ ಹಾಗೂ ಜಿಲ್ಲಾ ಭೋವಿ ವಡ್ಡರ ಸಮಾಜದ ಅಧ್ಯಕ್ಷರಾದ ಕೆ.ಎಸ್.ಮಮದಾಪೂರ ಉಪಸ್ಥಿತರಿದ್ದರು.

ಭಾವಚಿತ್ರದ ಭವ್ಯ ಮೆರವಣಿಗೆ:

ಇದಕ್ಕೂ ಮುಂಚೆ ನಗರದ ಪ್ರಮುಖ ಬೀದಿಗಳಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು, ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು.ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕರಾದ ವಿದ್ಯಾವತಿ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.

ಮೆರವಣಿಗೆಯು ಕಿತ್ತೂರು ಚೆನ್ನಮ್ಮ ವೃತ್ತ, ಜಿಲ್ಲಾ ಆಸ್ಪತ್ರೆ ರಸ್ತೆ, ಅಂಬೇಡ್ಕರ್ ರಸ್ತೆ ಮಾರ್ಗವಾಗಿ ಕುಮಾರ್ ಗಂಧರ್ವ ರಂಗಮಂದಿರ ತಲುಪಿತು.