ಪ್ರಕಾಶ್ ರಾಜ್ ಗೆ ಮದ್ರಾಸ್ ಹೈಕೋರ್ಟ್ ನಿಂದ ನೋಟೀಸ್ ಜಾರಿ

ಚೆನ್ನೈ, ಫೆ  ೨೮ :   ದಕ್ಷಿಣ ಭಾರತದ  ಪ್ರಸಿದ್ದ  ಸಿನಿಮಾ  ನಟ ಪ್ರಕಾಶ್  ರಾಜ್  ಅವರಿಗೆ   ಮದ್ರಾಸ್ ಹೈಕೋರ್ಟ್   ಗುರುವಾರ  ನೋಟಿಸ್ ಜಾರಿ ಮಾಡಿದೆ.

 ಪ್ರಕಾಶ್‌ರಾಜ್   ಕನ್ನಡ,  ತಮಿಳು, ತೆಲುಗು, ಮಲಯಾಳಂ  ಮಾತ್ರವಲ್ಲದೆ,   ಬಾಲಿವುಡ್ ನಲ್ಲೂ  ತಮ್ಮ  ಛಾಪು  ಮೂಡಿಸಿದ್ದಾರೆ.    ಪ್ರಕಾಶ್  ರಾಜ್   ಕೇವಲ ನಟ ಮಾತ್ರವಲ್ಲ,   ನಿರ್ಮಾಪಕ, ನಿರ್ದೇಶಕ ಕೂಡಾ ಆಗಿದ್ದಾರೆ.  

ತಮಿಳಿನಲ್ಲಿ ಧೋನಿ ಮತ್ತು ಅನ್ ಸಮಯಲ್ ಅರೈಲ್  ನಂತಹ   ಚಿತ್ರಗಳನ್ನು  ಸ್ವಯಂ ನಿರ್ದೇಶಿಸಿ,  ನಿರ್ಮಾಣದ ಹೊಣೆಯನ್ನು ಹೊತ್ತಿದ್ದರು.

ಪ್ರಕಾಶ್ ರಾಜ್  ಅವರು ನಡಿಗರ್ ಎಂಬ   ಚಿತ್ರವನ್ನು ನಿರ್ಮಿಸಿದ್ದಾರೆ. ಇದು  ತಮಿಳಿನಲ್ಲಿ  ನಿರ್ಮಿಸಿದ  ’ಅನ್ ಸಮಯಲ್  ಅರೈಲ್ ’ ಚಿತ್ರದ  ರಿಮೇಕ್  ಆಗಿದೆ.   ಈ ಚಿತ್ರ   ನಿರ್ಮಾಣಕ್ಕೆ   ಬಾಲಿವುಡ್   ಫೈನಾನ್ಶಿಯರ್  ಒಬ್ಬರಿಂದ   ೫ ಕೋಟಿ ರೂ. ಸಾಲ  ಪಡೆದುಕೊಂಡಿದ್ದರು   ಎನ್ನಲಾಗಿದೆ.   

ಅದಕ್ಕಾಗಿ  ಅವರು ಫೈನಾನ್ಸಿಯರ್ ಗೆ   ಚೆಕ್   ನೀಡಿದ್ದರು, ಅದು ಬ್ಯಾಂಕ್ ನಲ್ಲಿ ಬೌನ್ಸ್  ಆಗಿತ್ತು.    ಇದರಿಂದಾಗಿ   ಫೈನಾನ್ಸಿಯರ್   ಪ್ರಕಾಶ್ ರಾಜ್ ವಿರುದ್ದ   ಹೈಕೋರ್ಟ್ ಗೆ  ಅರ್ಜಿ  ಸಲ್ಲಿಸಿದರು.   ಗುರುವಾರ  ಆರ್ಜಿ  ಆಲಿಸಿದ   ನ್ಯಾಯಾಲಯ     ನಟ ಪ್ರಕಾಶ್  ರಾಜ್  ಏಪ್ರಿಲ್ ೨ ರಂದು ನ್ಯಾಯಾಲಯದ ಮುಂದೆ   ಹಾಜರಾಗುವಂತೆ  ನೋಟೀಸ್ ಜಾರಿ ಮಾಡಿದೆ.