ಕೊರೊನಾ ವೈರಸ್ ಭೀತಿಯಿಂದ ನ್ಯಾಯಾಲಯದ ಕಲಾಪ ಸ್ಥಗಿತ

ಹುನಗುಂದ೧೯: ಕೊರೊನಾ ವೈರಸ್ ಭೀತಿಯಿಂದ ನ್ಯಾಯಾಲಯದ ಕಲಾಪ ಸ್ಥಗಿತ. ತುರ್ತು  ಪ್ರಕರಣಗಳನ್ನಷ್ಟೇ ನಡೆಸಲು ತೀರ್ಮಾನಿಸಿದ್ದು. ಇಲ್ಲಿನ ನ್ಯಾಯಾಲಯದಲ್ಲಿ ಇಂದಿನಿಂದ ವಕೀಲರು, ಕಕ್ಷಿದಾರರಿಗೆ ಹಾಗೂ ನ್ಯಾಯಾಲಯ ಸಿಬ್ಬಂದಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತಿದೆ ಎಂದು ಪ್ರಧಾನ ದಿವಾಣಿ ನ್ಯಾಯಾಧೀಶರಾದ ಬಿ. ಮೋಹನಬಾಬು ಹೇಳಿದರು.                   

                               ನಗರದ ನ್ಯಾಯಾಲಯದಲ್ಲಿ ಜಿಲ್ಲಾ ಹಾಗೂ ತಾಲೂಕಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ದೇಶದ ಜನತೆಗೆ ಜೀವ ಬೆದರಿಕೆಯನ್ನು ಒಡ್ಡಿರುವ ಭಯಾನಕ ಕೊರೊನಾ ರೋಗದ ಬಗ್ಗೆ ಮುಂಜಾಗ್ರತ ಕ್ರಮವಾಗಿ ನ್ಯಾಯಾಲಯ ಆವರಣದಲ್ಲಿ ನ್ಯಾಯಾಧೀಶರು ಸೇರಿದಂತೆ  ಒಟ್ಟು 157 ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ಆರೋಗ್ಯ ತಪಾಸಣೆ ಕೇಂದ್ರವು ಒಂದು ವಾರದ ವರೆಗೆ ಕಾರ್ಯನಿರ್ವಹಿಸಲಿದೆ. ನಾಗರಿಕರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು. ವಕೀಲರು ಹಾಗೂ ಕಕ್ಷಿಗಾರರೂ ನ್ಯಾಯಾಲಯಕ್ಕೆ ಹಾಜರಾಗುವ ಅವಶ್ಯಕತೆ ಇಲ್ಲ ರಾಜ್ಯ ಉಚ್ಚ ನ್ಯಾಯಾಲಯದ ಆದೇಶ ಬರುವವರೆಗೂ ಕಲಾಪಗಳು ನಡೆಯುವದಿಲ್ಲ ಎಂದರು .                    

     ಹುನಗುಂದದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹತ್ತು ಕೊಠಡಿಗಳ ಹೈಸೋಲೇಸನ್  ವಾರ್ಡ ತೆರೆದು ಅಗತ್ಯ ಉಪಕರಣ ನೀಡಲಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಶಾಂತ ತುಂಬಗಿ ಹೇಳಿದರು. ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಕುಸಮಾ ಮಾಗಿ ನ್ಯಾಯಾಲಯದಲ್ಲಿನ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಾ.ವಿನಾಯಕ ನವಲಿಹಿರೇಮಠ, ಡಾ.ಜಗದೀಶ ಹಿರೇಮಠ, ವಕೀಲರ ಸಂಘದ ಅಧ್ಯಕ್ಷ ಬಿ.ಎ.ಆವಟಿ, ಉಪಾಧ್ಯಕ್ಷ ಎ.ಪಿ.ಗಾಣಿಗೇರ, ಪ್ರಧಾನ ಕಾರ್ಯದಶರ್ಿ ಎನ್.ಎಲ್. ತಹಶೀಲ್ದಾರ, ಕಾರ್ಯದಶಿ ವಿ.ಎಸ್.ಬಂಡಿ, ಹಿರಿಯ ವಕೀಲರಾದ ಎಸ್.ಎಸ್.ತಾರಿವಾಳ, ಕೆ.ಎಂ.ಸಾರಂಗಮಠ, ಎಸ್.ಎನ್.ಹುನಕುಂಟಿ, ಎನ್.ಜಿ. ಮಡಿಕಾರ, ಸಿ.ಬಿ.ಸಜ್ಜನ, ಎಂ.ಆರ್.ಮಾರನಕೊಳ್ಳ, ಎಸ್.ಜಿ.ರಾಂಪೂರ, ಎಂ.ಐ.ಕತ್ತಿ, ಮಾಧವ ದೆಶಪಾಂಡೆ, ಜಿ.ಎಂ,ವಸ್ತ್ರದ, ಎಚ್.ಎಸ್.ತಳ್ಳಿಕೇರಿ, ವಾದೀರಾಜ ದೇಶಪಾಂಡೆ, ವಿ.ಎಸ್.ಕಪನೂರ, ಬಿಜಕಲ್ಲ, ಐಹೊಳ್ಳಿ, ಚಲವಾದಿ ಸೇರಿದಂತೆ ಇತರರು ಉಪಸ್ಥಿತರಿದ್ದು ವಕೀಲರು ಹಾಗೂ ನ್ಯಾಯಾಲಯ ಸಿಬ್ಬಂದಿ ತಪಾಸಣೆ ಮಾಡಿಸಿಕೊಂಡರು.