ಹಳ್ಳಿ ಸ್ವಾವಲಂಬಿಯಾದರೆ ದೇಶದ ಸಮೃದ್ಧಿ

ಲೋಕದರ್ಶನವರದಿ

ಗುಳೇದಗುಡ್ಡ10: ನಮ್ಮದು ಹಳ್ಳಿಗಳ ದೇಶ. ನಮ್ಮ ದೇಶಕ್ಕೆ  ಹಳ್ಳಿಗಳು ಬಲಿಷ್ಠವಾಗಬೇಕು. ಹಳ್ಳಿಗಳ ಉದ್ಧಾರವೇ ದೇಶದ ಉದ್ಧಾರ. ಅಂದಾಗ ಮಾತ್ರ ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗುತ್ತದೆ. ಹಳ್ಳಿಗಳು ಸ್ವಾವಲಂಬಿಗಳಾದರೆ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಬಾದಾಮಿ ಶಾಸಕ ಸಿದ್ದರಾಮಯ್ಯ ಹೇಳಿದರು.

ಅವರು ಶುಕ್ರವಾರ ಸಮೀಪದ ಲಾಯದಗುಂದಿಯಲ್ಲಿ ನೂತನ ರಾಜೀವಗಾಂಧಿ ಸೇವಾ ಕೇಂದ್ರ, ನೂತನ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟಿಸಿ, ತಮ್ಮ ಅಧಿಕಾರಾವಧಿಯಲ್ಲಿ ಹೊಸದಾಗಿ ಗ್ರಾಮ ಪಂಚಾಯತಿಗಳನ್ನು ಮಾಡಿ ಅವುಗಳಿಗೆ ಸಾಕಷ್ಟು ಅನುದಾನ   ಬಿಡುಗಡೆ ಮಾಡಿದ್ದೇವೆ. 

   ಅಲ್ಲದೇ ತಮ್ಮ ಅವಧಿಯಲ್ಲಿ ಎಸ್.ಸಿ., ಎಸ್.ಟಿ.ಗೆ ಸಂಬಂಧಿಸಿ ಹೊಸ ಕಾನೂನು ಮಾಡಿ ಅವರಿಗೆ ಸಾಕಷ್ಟು ಅನುದಾನ ಕೊಡಿಸುವಲ್ಲಿ ನಮ್ಮ ಸರ್ಕಾರ  ಕೆಲಸ ಮಾಡಿದೆ ಎಂದರು.

ಕೇಂದ್ರ ಸಕರ್ಾರ ಕೂಡಾ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಹೆಚ್ಚು ಅನುದಾನ ಕೊಡಬೇಕು. ಅಂದಾಗ ಮಾತ್ರ ಹಳ್ಳಿಗಳು ಹೆಚ್ಚು ಹೆಚ್ಚು ಅಭಿವೃದ್ಧಿ ಹೊಂದಲು ಸಾಧ್ಯ. ಆದರೆ ಆ ಕೆಲಸವನ್ನು ಕೇಂದ್ರ ಮಾಡುತ್ತಿಲ್ಲ ಎಂದು ಅರೋಪಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ಶರಣು ಸಜ್ಜನ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿಗಳನ್ನು ನೀಡಿದರು. ಅವರುಗಳ ಪರಿಹಾರಕ್ಕೆ ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ  ಹೇಳಿದರು.

       ಮಾಜಿ ಶಾಸಕರಾದ ಬಿ.ಬಿ.ಚಿಮ್ಮನಕಟ್ಟಿ, ಎಸ್.ಜಿ.ನಂಜಯ್ಯನಮಠ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮುಖಂಡರಾದ ಮಹೇಶ ಹೊಸಗೌಡರ, ಎಂ.ಬಿ.ಹಂಗರಗಿ, ಜಿಪಂ ಸದಸ್ಯ ಆಸಂಗೆಪ್ಪ ನಕ್ಕರಗುಂದಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ, ಮಲ್ಲಣ್ಣ ಯಲಿಗಾರ, ಮಹಾಂತೇಶ ಲಕ್ಕುಂಡಿ, ಗ್ರಾಪಂ ಉಪಾಧ್ಯಕ್ಷೆ ಶರಣವ್ವ ಹಾದಿಮನಿ, ಮಾಜಿ ಅಧ್ಯಕ್ಷ ಗಂಗಾಧರ ಜೋಗುಳದ, ಚಂದ್ರವ್ವ ಪೂಜಾರಿ, ಬಸಮ್ಮ ಮನ್ನೂರಿ, ರೇಣುಕಾ ರೇವಡಿ, ನಾಗಪ್ಪ ಗೌಡ್ರ, ಬಸವರಾಜ ಬಂಡಿವಡ್ಡರ, ಮಹಾಂತೇಶ ಅಚನೂರ, ಫಕೀರವ್ವ ಗೌಡರ, ಶಿವಪ್ಪ ದಂಡಿನ, ಬಸವರಾಜ ಗೋನಾಳ, ಬಸವರಾಜ ದಂಡಿನ, ಬಸವರಾಜ ರೇವಡಿ, ಮಲ್ಲು ಹುನಕುಂಟಿ, ಬಸಯ್ಯ ಜಂಗಮರ ಸೇರಿದಂತೆ ಇನ್ನೂ ಅನೇಕರು  ಇದ್ದರು.