ಕೃಷಿ-ಋಷಿ ಇಲ್ಲದೆ ದೇಶ ಬೆಳಗುವುದಿಲ್ಲ: ಪೂಜ್ಯ ರಾಮಲಿಂಗಯ್ಯ ಶ್ರೀ
Country cannot shine without Krishi-rishi: Pujya Ramalingaiah Shri
ತಾಳಿಕೋಟಿ 16: ಜಗತ್ತಿನಲ್ಲಿ ಧರ್ಮ ಬೆಳಗಲು ಋಷಿ ಇರಬೇಕು ಅದೇ ರೀತಿ ದೇಶ ಉದ್ಧಾರವಾಗಬೇಕಾದರೆ ಅಲ್ಲಿ ಕೃಷಿ ಚೆನ್ನಾಗಿದ್ದು ಕೃಷಿಕ ಸಂತೋಷದಿಂದರಬೇಕು. ಇವೆರಡು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಬೇಡ ಜಂಗಮ ಸಮಾಜದ ತಾಲೂಕ ಗೌರವ ಅಧ್ಯಕ್ಷರಾದ ಜ್ಯೋತಿಷ್ಯ ರತ್ನ ಪರಮ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.
ಮಂಗಳವಾರ ತಾಲೂಕಿನ ಕೊಡಗಾನೂರ ಗ್ರಾಮದ ಹತ್ತಿರ ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಯ ಅಂತಿಮ ಹಂತದ ಕಾಮಗಾರಿ ಪೂರ್ಣಗೊಳಿಸುವಂತೆ 38 ಗ್ರಾಮಗಳ ರೈತರು ನಡೆಸುತ್ತಿರುವ ನಾಲ್ಕನೇ ದಿನದ ಹೋರಾಟಕ್ಕೆ ಬೆಂಬಲ ಸೂಚಿಸಿ ಅವರು ಮಾತನಾಡಿದರು. ರೈತ ದೇಶಕ್ಕೆ ಅನ್ನ ನೀಡುವ ಅನ್ನದಾತ ಅವನು ಯಾರ ಮುಂದೆಯೂ ಕೈಚಾಚಿ ಅಂಗಾಲಾಚಿ ದಯನೀಯವಾಗಿ ತನ್ನ ಬೇಡಿಕೆಗಳನ್ನು ಇಡುವ ಅಗತ್ಯವಿಲ್ಲ ಅವನ ಬಳಿ ಧರ್ಮದ ಬಾರಕೋಲು ಇದೆ ಅದನ್ನು ಕೈಯಲ್ಲಿ ಹಿಡಿದು ಎದ್ದೇಳುವ ಅಗತ್ಯವಿದೆ ಆಗ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ನಿಮ್ಮ ಈ ಹೋರಾಟವನ್ನು ಬೆಂಬಲಿಸಲು ನಾವೆಲ್ಲರೂ ಮಠಗಳನ್ನು ತೊರೆದು ಬಂದಿದ್ದೇವೆ ಮುಂದಿನ ದಿನಗಳಲ್ಲಿ ನೀವು ನಡೆಸುವ ಹೋರಾಟಗಳಿಗೆ ನೂರಾರು ಮಠಾಧೀಶರನ್ನು ಕರೆತಂದು ನಿಮಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದರು.
ಧರಣಿ ನಿರತರನ್ನು ಉದ್ದೇಶಿಸಿ ಮಠಾಧೀಶರಾದ ಷ.ಬ್ರ.ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು, ಸಿದ್ದರಾಮ ಶಿವಾಚಾರ್ಯರು, ಕೊಡಗಾನೂರದ ಕುಮಾರ ಶ್ರೀಗಳು ಮಾತನಾಡಿ ಜನಪ್ರತಿನಿಧಿಗಳ ನಿರ್ಲಕ್ಷ ಧೋರಣೆಯನ್ನು ಖಂಡಿಸಿ ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸಬೇಕು ಇಲ್ಲದೆ ಹೋದಲ್ಲಿ ರೈತರು ನಡೆಸುವ ಮುಂದಿನ ಎಲ್ಲ ಹೋರಾಟಗಳಿಗೆ ಎಲ್ಲ ಮಠಾಧೀಶರು ಬೀದಿಗಿಳಿಯ ಬೇಕಾಗುತ್ತದೆ ಎಂದು ಎಚ್ಚರಿಸಿದರು. ನಾಲ್ಕನೇ ದಿನದ ಇಂದಿನ ಹೋರಾಟಕ್ಕೆ ಮಠಾಧೀಶರೊಂದಿಗೆ ಡಿಎಸ್‌ಎಸ್ ಅಂಬೇಡಕರ್ ದಾರಿ ಹಾಗೂ ಕರ್ನಾಟಕ ರೈತ ಸಂಘ ಹಸಿರು ಸೇನೆ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದರು. ಜಿಪಂ ಮಾಜಿ ಸದಸ್ಯ ಬಸನಗೌಡ ವಣಕಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿವೃತ್ತ ಶಿಕ್ಷಕ ಬಸವರಾಜ ಗೊರಜಿ ನಿರೂಪಿಸಿದರು. ಸಾಸನೂರದ ಪೂಜ್ಯ ಮಹಾಂತಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ್ ಕುಲಕರ್ಣಿ ನೇತೃತ್ವ ವಹಿಸಿದ್ದರು. ಧರಣಿಯಲ್ಲಿ ಪ್ರಗತಿಪರ ರೈತ ಮುಖಂಡರಾದ ಪ್ರಭುಗೌಡ ಬಿರಾದಾರ ಅಸ್ಕಿ, ಶಿವಪುತ್ರ ಚೌಧರಿ,ಸುರೇಶಕುಮಾರ ಇಂಗಳಗೇರಿ, ಗುರುರಾಜ ಪಡಶೆಟ್ಟಿ, ಶಂಕರಗೌಡ ದೇಸಾಯಿ, ಮಲ್ಲನಗೌಡ ಬಿರಾದಾರ, ಆನಂದ ಗೌಡ ಪಾಟೀಲ, ರಾಯನಗೌಡ ನೀರಲಗಿ, ಬಲವಂತರಾಯಗೌಡ ನಡಹಳ್ಳಿ ಹಾಗೂ ರೈತರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 