ಲೋಕದರ್ಶನ ವರದಿ
ಬೆಳಗಾವಿ.-ನ.11- ವಿದೇಶಿ ಸಂಸ್ಕೃತಿಯ ಪ್ರಭಾವದಿಂದ ನಮ್ಮ ಸಮಾಜ ಸಂಸ್ಕೃತಿಯಿಂದ ದೊರಾಗುತ್ತಿದೆ. ನಮ್ಮ ಧರ್ಮ ಯಾವತ್ತು ಸಂಸ್ಕೃತಿಯನ್ನ ಪಾಲಿಸಿ ಬೆಳಸಬೇಕು, ಸಂಸ್ಕೃತಿಯಿಲ್ಲದ ಸಮಾಜ ಹಾಗೂ ದೇಶ ಸಾಧ್ಯವಿಲ್ಲ, ಶಿಕ್ಷಣ, ಸಂಸ್ಕೃತಿಯಿಂದ ಮಾತ್ರ ಸಮಾಜ ಹಾಗೂ ದೇಶದ ಅಭಿವೃದ್ದಿ ಸಾಧ್ಯ. ಆದ್ದರಿಂದಲೆ ಕೆ.ಎಲ್.ಇ ಹಾಗೂ ಕನರ್ಾಟಕ ಲಿಂಗಾಯುತ ಅಭಿವೃದ್ದಿ ಸಂಸ್ಥೆಯಂತಹ ಹಲವು ಸಂಸ್ಥೆಗಳು ಕನರ್ಾಟಕದಲ್ಲಿ ಶಿಕ್ಷಣ, ಸಂಸ್ಕೃತಿ ಜ್ಯೋತಿ ಬೆಳಗಿಸಿ ಸಮಾಜ ಹಾಗು ದೇಶವನ್ನ ಸಧೃಡಪಡಿಸುವ ಕೆಲಸಗಳನ್ನ ಮಾಡಿವೆ, ನಾವು ಸಮಾಜದ ಎಲ್ಲರನ್ನ ನಮ್ಮವರಂತೆ ಕಾಣಬೇಕು. ನಾವು ಸಮಾಜವನ್ನ ಸಂಸ್ಕಾರಯುತವನ್ನಗಿ ಮಾಡಿ ಇತರೆ ಸಮಾಜಕ್ಕೆ ಮಾದರಿಯಾಗಬೇಕು, ನಮ್ಮ ಆಚಾರ-ವಿಚಾರಗಳನ್ನ ಕೈಬಿಡದೆ ಪಾಲಿಸಿ ನಮ್ಮ ಧರ್ಮವನ್ನು ರಕ್ಷಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗು ವಿರೋಧಪಕ್ಷದ ಮುಖ್ಯ ಸಚೇತಕರು ಆಗಿರುವ ಮಹಾಂತೇಶ ಕವಟಗಿಮಠ ಹೇಳಿದರು ಅವರು ಇಂದು ನಗರದ ರಾಮತೀರ್ಥನಗರದಲ್ಲಿ ವೀರಭದ್ರೇಶ್ವರ ಪ್ರತಿಷ್ಠಾನ ನಡೆಸುತ್ತಿರುವ ವೀರಶೈವ ಬಡ ಜಂಗಮ ಪ್ರತಿಭಾನ್ವಿತ ವಿದ್ಯಾಥರ್ಿಗಳ ಉಚಿತ ಶಿಕ್ಷಣ ಮತ್ತು ಪ್ರಸಾದ ನಿಲಯದ ಎರಡನೆ ವಾಷರ್ಿಕೋತ್ಸವದ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಸಾನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ದಸ್ವಾಮೀಜಿ ಮಾತನಾಡಿ ಶೈವಧರ್ಮದವರು ತಮ್ಮ ಆಚಾರ ವಿಚಾರವನ್ನ ಬಿಡದೆ ತಾವು ಕಲಿತು ಸಮಾಜಕ್ಕೂ ಕಲಿಸಿ ಈ ಮುಖಾಂತರ ಉತ್ತಮ ಗುರುಗಳಾಗಬೇಕು ಈ ಮುಖಾಂತರ ಸಮಾಜವನ್ನ ಸಂಸ್ಕಾರಗೊಳಿಸಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಅಥಿತಿಗಳಾದ ಖ್ಯಾತ ಲೆಕ್ಕ ಪರಿಶೋಧಕ ಶಿವಕುಮರ ಎಸ್.ಸಂಭರಗಿಮಠ, ರಾಜ್ಯ ಸಹಕಾರಿ ಪತ್ತಿನ ಸಂಘಗಳ ಮಹಾಮಂಡಳದ ಉಪಾಧ್ಯಕ್ಷ ಡಾ.ಸಂಜಯ ಹೊಸಮಠ, ಆರ್.ಎಫ್.ಓ ಮಹೇಶ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನ ವೀರಭದ್ರೇಶ್ವರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರಮೋದ ಕುಮೊರ ವಕ್ಕೊಂದಮಠ ವಹಿಸಿದ್ದರು.
ಉಚಿತ ಶಿಕ್ಷಣ ಹಾಗೂ ಪ್ರಸಾಧಕ್ಕಾಗಿ ಧನಸಹಾಯ ನೀಡಿದ ಮಹಾಂತೇಶ ಕವಟಗಿಮಠ, ಸಂಭರಗಿಮಠ, ಇತರೆ ದಾನಿಗಳನ್ನ ಸತ್ಕರಿಸಲಾಯಿತು.
ಶಿಕ್ಷಣ, ಪ್ರಸಾದ ನಿಲಯದಲ್ಲಿ ಅನುಕೂಲತೆಗಳನ್ನು ಕುರಿತು ವಿದ್ಯಾಥರ್ಿಗಳು ಹಾಗೂ ಪಾಲಕರು ತಮ್ಮ ಅನಸಿಕೆಗಳನ್ನು ಹಂಚಿಕೊಂಡರು.
ಸಮಾರಂಭದಲ್ಲಿ ಜಿಲ್ಲೆಯ ಅನೇಕ ಜಂಗಮರು, ಅರ್ಚಕರು, ಹಾಗೂ ಪೊರೋಹಿತರು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ನಿಲಯದ ಉಪಾಧ್ಯಕ್ಷರಾದ ಹೊಸಮಠ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಪೂಜಾ ಹಾಗೂ ಪೂಣರ್ಿಮ ಹಿರೇಮಠ ಪ್ರಾಥರ್ಿಸಿದರು.
ಕೊನೆಯಲ್ಲಿ ಐ.ಡಿ ಹಿರೇಮಠ ವಂದಿಸಿದರು.