ಕೊಪ್ಪಳ 19: ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ನಿಮಿತ್ತ ಮೇ. 23 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಜಿಲ್ಲಾಡಳಿತ ಭವನದ ಆಡಿಟೋರಿಮ್ ಹಾಲ್ನಲ್ಲಿ ಭಾನುವಾರದಂದು ಮೈಕ್ರೋ ಅಬ್ಸರ್ವರ್ಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು.
ತರಬೇತಿ ಕಾಯರ್ಾಗಾರದ ಅಧ್ಯಕ್ಷತೆ ವಹಿಸಿದ ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ರವರ ಮಾತನಾಡಿ, ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ರ ನಿಮಿತ್ತ ಕೊಪ್ಪಳ ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಮೇ. 23 ರಂದು ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ. ಇದಕ್ಕಾಗಿ ಜಿಲ್ಲಾಡಳಿತ ಸಜ್ಜುಗೊಂಡಿದೆ. ಪೊಲೀಸ್ ಭದ್ರತೆ ಹಾಗೂ ಮತ ಎಣಿಕೆಗೆ ಬೇಕಾಗುವ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮತ ಎಣಿಕಾ ಕಾರ್ಯವು ನಗರದ ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆಸಲಾಗುತ್ತದೆ. ಮತ ಎಣಿಕೆ ಕಾರ್ಯದಲ್ಲಿ ಆಯೋಗವು ನೀಡಿರುವ ಮಾರ್ಗಸೂಚಿಯನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು.
ಈಗಾಗಲೆ ಮತ ಎಣಿಕೆ ಕೇಂದ್ರ ಸಜ್ಜುಗೊಂಡಿದೆ. ವಿಧಾನಸಭಾ ಕ್ಷೇತ್ರಗಳವಾರು ಮತ ಎಣಿಕೆ ನಡೆಯಲಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಬರುವ ವಿಧಾನಸಭಾ ಕ್ಷೇತ್ರಗಳಾದ ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಹಾಗೂ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಮತ್ತು ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುಗರ್ಾ, ಕೊಪ್ಪಳ ಸೇರಿದಂತೆ ಈ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಪ್ರತಿ ಕ್ಷೇತ್ರಕ್ಕೆ 14 ಟೆಬಲ್ಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಒಟ್ಟು 112 ಟೇಬಲ್ ಅಳವಡಿಸಲಾಗಿದೆ. ಪ್ರತಿ ಒಂದು ಮತ ಎಣಿಕಾ ಟೇಬಲ್ಗೆ ಒಬ್ಬರಂತೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಮೈಕ್ರೋ ಅಬ್ಸರ್ಬರ್ಗಳನ್ನು ನೇಮಿಸಲಾಗಿದೆ. ಮತ್ತು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಇನ್ನೂ ಎರಡು ಮೈಕ್ರೋ ಅಬ್ಸರ್ವರ್ಗಳನ್ನು ಸಹ ನೇಮಿಸಿದ್ದು, ಅವರು ಡಾಟಾ ಎಂಟ್ರಿ ವಿಭಾಗದಲ್ಲಿ ಕಾರ್ಯನಿರ್ವಹಿಸುವರು. ಮತ ಎಣಿಕೆಯಲ್ಲಿ ಮೈಕ್ರೋ ಅಬ್ಸರ್ವರ್ಗಳ ಪಾತ್ರ ಪ್ರಮುಖವಾಗಿದ್ದು, ಮೈಕ್ರೋ ಅಬ್ಸರ್ವರ್ಗಳು ತಮಗೆ ನೀಡಲಾಗಿರುವ ಟೇಬಲ್ನಲ್ಲಿ ನಡೆಯುವ ಮತ ಎಣಿಕಾ ಕಾರ್ಯದ ಬಗ್ಗೆ ತೀವ್ರ ನಿಗಾವಹಿಸಬೇಕು. ಹಾಗೂ ಡಾಟಾ ಎಂಟ್ರಿಯ ಬಗ್ಗೆ ಪರಿಶೀಲಿಸಿ ವೀಕ್ಷಕರಿಗೆ ಮಾಹಿತಿ ನೀಡಬೇಕು ಎಂದರು.
ಗಂಗಾವತಿ ತಹಶೀಲ್ ಕಾಯರ್ಾಲಯದ ಶಿರಸ್ತೆದಾರ ಎಂ. ಗುರುರಾಜರವರು ಮೈಕ್ರೋ ಅಬ್ಸರ್ವರ್ಗಳಿಗೆ ತರಬೇತಿಯನ್ನು ನೀಡಿದರು. ಅಪರ ಜಿಲ್ಲಾಧಿಕಾರಿ ಬಾಲಚಂದ್ರ, ಸಹಾಯಕ ಚುನಾವಣಾಧಿಕಾರಿಗಳಾದ ಶಬಾನ್ ಎಂ. ಶೇಖ್, ಎಂ.ಪಿ. ಶೆಲ್ಲಿಕೇರಿ, ಎಸ್.ಪಿ. ಮುಳ್ಳೊಳ್ಳಿ, ವೀರಣ್ಣ ಆಶಾಪುರ, ಎಂ.ಡಿ. ಅಲಿ ಮಹಾಂತೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.