ಹಾವೇರಿ: ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ಇದೇ ಡಿ. 9ರ ಬೆಳಿಗ್ಗೆ 8 ಗಂಟೆಯಿಂದ ದೇವಗಿರಿಯ ಸಕರ್ಾರಿ ಇಂಜನೀಯರಿಂಗ್ ಕಾಲೇಜಿನಲ್ಲಿ ಆರಂಭಗೊಳ್ಳಲಿದ್ದು ಮತ ಎಣಿಕೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.
ಮತ ಎಣಿಕೆ ಸಿದ್ಧತೆ ಕುರಿತಂತೆ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು ಮತ ಎಣಿಕೆ ವಿವರವನ್ನು ತ್ವರಿತವಾಗಿ ಭಿತ್ತರಿಸಲು ಸುತ್ತುವಾರು ವಿವರನ್ನು ಸುವಿಧಾ ಆ್ಯಪ್ನಲ್ಲಿ ಅಪ್ಲೋಡ್ ಮಾಡಲಾಗುವುದು ಎಂದು ಹೇಳಿದರು.
ಎಣಿಕೆಗೆ 14 ಟೇಬಲ್: ರಾಣೆಬೆನ್ನೂರು ಮತ್ತು ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ತಲಾ 14 ಟೇಬಲ್ಗಳು, ಇ.ವಿ.ಎಂ.ನ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಸೇವಾ ಮತಪತ್ರ (ಇಟಿಬಿಎಸ್) ಮತ್ತು ಅಂಚೆ ಮತಪತ್ರಗಳ ಎಣಿಕೆಗೆ ಪ್ರತ್ಯೇಕ ಟೇಬಲ್ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಹಿರೇಕೆರೂರಿನ 229 ಮತಗಟ್ಟೆಗಳ ಮತ ಎಣಿಕೆಗೆ 17 ಸುತ್ತು ಹಾಗೂ ರಾಣೇಬೆನ್ನೂರಿನ 266 ಮತಗಟ್ಟೆಗಳ ಮತ ಎಣಿಕೆಗೆ 19 ಸುತ್ತು ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಎಣಿಕೆಗೆ 110 ಸಿಬ್ಬಂದಿ ನೇಮಕ: ಪಾರದರ್ಶಕ ಹಾಗೂ ವ್ಯವಸ್ಥಿತ ಮತ ಎಣಿಕೆಗೆ ಈಗಾಗಲೇ ಸಿಬ್ಬಂದಿಗಳಿಗೆ ತರಬೇತಿಗಳನ್ನು ನೀಡಲಾಗಿದೆ. ಎಣಿಕೆ ಕಾರ್ಯಕ್ಕಾಗಿ ಒಟ್ಟು 2 ಮತ ಎಣಿಕೆ ಕೊಠಡಿಗಳನ್ನು ಸ್ಥಾಪಿಸಲಾಗಿದೆ.
ಮತದಾನ ವಿವರ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ 1,72,369(ಶೇ.73.93) ಹಾಗೂ ಹಿರೇಕೆರೂರು ಕ್ಷೇತ್ರದಲ್ಲಿ 1,45,001 (ಶೇ.79.03) ಮತದಾನವಾಗಿದೆ. ಹಿರೇಕೆರೂರು ಕ್ಷೇತ್ರದಲ್ಲಿ 24 ಅಂಚೆ ಮತದಾನ ಪತ್ರಗಳು ಹಾಗೂ 11 ಸೇವಾ ಮತದಾನ ಪತ್ರಗಳು ಹಾಗೂ ರಾಣೇಬೆನ್ನೂರಿನಲ್ಲಿ 17 ಅಂಚೆ ಮತದಾನ ಪತ್ರಗಳು 28 ಸೇವಾ ಮತದಾನ ಮತಪತ್ರಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.
ಮೊಬೈಲ್ ನಿಷೇಧ: ಪ್ರತಿ ಎಣಿಕೆ ಕೊಠಡಿಯಲ್ಲಿಯೂ ಪ್ರದರ್ಶಕದ ವ್ಯವಸ್ಥೆ ಮಾಡಲಾಗಿದ್ದು ಪ್ರತಿ ಸುತ್ತಿನ ಒಟ್ಟು ಮತಗಳನ್ನು ಪ್ರದಶರ್ಿಸಲಾಗುತ್ತದೆ. ಎರಡು ವಿಧಾನಸಭಾ ಕ್ಷೇತ್ರಗಳಿಗೆ ಎಣಿಕೆ ಸಿಬ್ಬಂದಿಗಳಿಗೆ ಪ್ರತ್ಯೇಕ ಎರಡು ಬಣ್ಣಗಳ ಪಾಸುಗಳನ್ನು ನೀಡಲಾಗಿದೆ. ಏಜೆಂಟರಾಗಲಿ ಬೇರೆ ಕೊಠಡಿಗೆ ಹೋಗದಂತೆ ನಿರ್ಭಂಧಿಸಲಾಗಿದೆ. ಎಲ್ಲಾ ಸಿಬ್ಬಂದಿಗಳಿಗಾಗಿ ಮತ್ತು ಎಣಿಕೆ ಏಜೆಂಟರಿಗಾಗಿ ಮೊಬೈಲ್, ಇತರೇ ವಿದ್ಯುನ್ಮಾನ ಉಪಕರಣಗಳು, ಬೆಂಕಿಪಟ್ಟಣ, ಸಿಗರೇಟ್, ತಂಬಾಕು ಉತ್ಪನ್ನಗಳನ್ನು, ಬ್ಲೇಡ್, ಆಯುಧ, ಎಲೆ ಅಡಿಕೆ, ಗುಟಕಾ, ಮುಂತಾದವುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಯಾವುದೇ ಮಾಧ್ಯಮದವರಿಗೆ ಮೊಬೈಲ್ನ್ನು ಎಣಿಕೆ ಕೇಂದ್ರದ ಒಳಗೆ ತೆಗೆದುಕೊಂಡು ಹೋಗಲು ಅನುಮತಿ ಇರುವುದಿಲ್ಲ. ಅದರಂತೆ ಚುನಾವಣಾ ಆಯೋಗದ ನಿದರ್ೇಶನದಂತೆ ಎಣಿಕೆ ಕೊಠಡಿ ಒಳಗಡೆ ಫೋಟೋ ತೆಗೆಯುವುದನ್ನು ಅಥವಾ ವಿಡಿಯೋ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸುವಿಧಾ ಎಂಬ ತಂತ್ರಾಂಶದ ಮೂಲಕ 2 ಕ್ಷೇತ್ರಗಳ ಪ್ರತಿ ಸುತ್ತುಗಳ ಎಣಿಕೆಯ ವಿರವರಗಳನ್ನು ಸಹ ಮಾಧ್ಯಮದವರಿಗೆ ನೀಡಲಾಗುವುದು. ಮಿಡಿಯಾ ಕೊಠಡಿಯಲ್ಲಿ ಮಾತ್ರ ಮೊಬೈಲ್ ಬಳಸಬಹುದಾಗಿದೆ ಎಂದು ತಿಳಿಸಿದರು.
ಭದ್ರತೆಗೆ 262 ಸಿಬ್ಬಂದಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಅವರು ಭದ್ರತೆ ಕುರಿತಂತೆ ಮಾಹಿತಿ ನೀಡಿ ಮತ ಎಣಿಕೆ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಗೆ 262 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಎರಡು ಕೆ.ಎಸ್.ಆರ್.ಪಿ. ತುಕಡಿ, ಮೂರು ಡಿಎಆರ್ ತುಕಡಿ, ಒಂದು ರೈಲ್ವೆ ಪೊಲೀಸ್ ಪೋಸರ್್ ಕಂಪನಿ, ಒಂದು ಅಗ್ನಿಶಾಮ ತಂಡ ನಿಯೋಜಿಸಲಾಗಿದೆ. ಚುನಾವಣೆಗೆ ನಿಯೋಜಿತ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಹೊರತುಪಡಿಸಿ ಬೇರೆಯವರಿಗೆ ಮತ ಎಣಿಕೆ ಕೇಂದ್ರದ ಆವರಣಕ್ಕೆ ವಾಹನಗಳ ಪ್ರವೇಶ ಇರುವುದಿಲ್ಲ. ಅಂದು ಬೆಳಿಗ್ಗೆ 5-30 ಗಂಟೆಯಿಂದಲೇ ಎಣಿಕೆ ಕೇಂದ್ರವನ್ನು ಪೊಲೀಸ್ ಸಿಬ್ಬಂದಿಗಳು ಆವರಿಸಿರುತ್ತಾರೆ. ಅಧಿಕೃತ ಪಾಸ್ ಇದ್ದವರಿಗೆ ಮಾತ್ರ ಎಣಿಕೆ ಕೇಂದ್ರದೊಳಗೆ ಪ್ರವೇಶಕ್ಕೆ ಅವಕಾಶವಿದೆ ಎಂದು ವಿವರಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಹಿರೇಕೆರೂರು ಚುನಾವಣಾಧಿಕಾರಿ ಕರಲಿಂಗಣ್ಣನವರ, ರಾಣೇಬೆನ್ನೂರು ಚುನಾವಣಾಧಿಕಾರಿ ದೇವರಾಜ ಎ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ಚುನಾವಣಾ ತಹಶೀಲ್ದಾರ ಪ್ರಶಾಂತ ನಾಲವಾರ ಉಪಸ್ಥಿತರಿದ್ದರು.