ವೃಕ್ಷಥಾನ್ ಹೆರಿಟೇಜ್ ರನ್‌-2024ಕ್ಕೆ ದಿನಗಣನೆ

Countdown to Vriksathon Heritage Run-2024

ವಿಜಯಪುರ, ಡಿ. 16: ವೃಕ್ಷಥಾನ್ ಹೆರಿಟೇಜ್ ರನ್‌-2024ಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಈ ಓಟಕ್ಕೆ ಬೆನ್ನೆಲುಬಾಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸೇರಿದಂತೆ ಹಲವರು ಜನರು, ಸಂಘ- ಸಂಸ್ಥೆಗಳು ಈ ಬಾರಿಯೂ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ.   

ವರ್ಷದಿಂದ ವರ್ಷಕ್ಕೆ ವೃಕ್ಷಥಾನ್ ಹೆರಿಟೇಜ್ ರನ್ ಖ್ಯಾತಿ ಹೆಚ್ಚಾಗುತ್ತಿದೆ.  ಅಲ್ಲದೇ, ಇದಕ್ಕೆ ಪ್ರಾಯೋಜಕತ್ವ ನೀಡುತ್ತಿದ್ದಾರೆ.  ಸಚಿವ ಎಂ. ಬಿ. ಪಾಟೀಲ ಅವರು ರೂ. 10 ಲಕ್ಷ ನೀಡಿದ್ದಾರೆ.  ಅದೇ ರೀತಿ, ಕೂಡಗಿ ಎನ್‌.ಟಿ.ಪಿ.ಸಿ ರೂ. 15 ಲಕ್ಷ ನೀಡಿ ಮುಖ್ಯ ಪ್ರಾಯೋಜಕರಾಗಿದ್ದಾರೆ.   

ಮಂಗಲಂ ಪೈಪ್ಸ್‌ ನವರು ರೂ. 1.50 ಲಕ್ಷ, ಜಿಓಸಿಸಿ ಬ್ಯಾಂಕಿನವರು ರೂ. 1 ಲಕ್ಷ, ಶ್ರೀ ಸಾಯಿ ಬಸವ ಶುಗರ್ಸ್‌ ನವರು ರೂ. 1 ಲಕ್ಷ ಹಾಗೂ ರೋಟರಿ ಕ್ಲಬ್ ವಿಜಯಪುರ ಉತ್ತರ ಅವರು ರೂ. 50 ಸಾವಿರ ಪ್ರಾಯೋಜಕತ್ವವನ್ನು ನೀಡಿದ್ದಾರೆ ಎಂದು ವೃಕ್ಷ ಅಭಿಯಾನ ಪ್ರತಿಷ್ಠಾನದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.