ಹಾವೇರಿ08: ಕೋರಂ ಕೊರತೆ ಕಾರಣ ಬುಧವಾರ ನಿಗಧಿಯಾಗಿದ್ದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಮುಂದೂಡಲಾಯಿತು.
ಕಳೆದ ಜುಲೈ 21ರ ಶನಿವಾರ ಕೋರಂ ಕೊರತೆಯಿಂದ ಮುಂದೂಡಲಾಗಿದ್ದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯನ್ನು ಎರಡನೆಯ ಬಾರಿಗೆ ಆಗಸ್ಟ್ 08 ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ನಿಗಧಿಪಡಿಸಲಾಗಿತ್ತು. ಆದರೆ ಇಂದು ಸಹ ನಿಗಧಿತ ಸಂಖ್ಯೆಯ ಸದಸ್ಯರು ಸಭೆಗೆ ಹಾಜರಾಗದ ಕಾರಣ ಎರಡನೆಯ ಬಾರಿಗೆ ಸಭೆಯನ್ನು ಮುಂದೂಡಲಾಯಿತು.
ಇಂದಿನ ಸಭೆಗೆ 20 ಜನ ಸದಸ್ಯರು ಮಾತ್ರ ಹಾಜರಾದರು. ಸಭೆ ನಡೆಸಲು ಕನಿಷ್ಠ 25 ಸದಸ್ಯರು ಹಾಜರಾಗಬೇಕಾಗಿತ್ತು. ಕಳೆದ ಸಭೆಯಲ್ಲಿ 12 ಜನ ಸದಸ್ಯರು ಮಾತ್ರ ಸಭೆಗೆ ಹಾಜರಾಗಿದ್ದರು. ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಸತತ ಮೂರು ಸಭೆಗೆ ಗೈರು ಹಾಜರಾದರೆ ಸದಸ್ಯತ್ವ ರದ್ದಾಗುವ ನಿಯಮವಿದೆ.
ಇದರ ಮಧ್ಯೆ ಜಿಲ್ಲಾ ಪಂಚಾಯತ ಸದಸ್ಯರಾದ ಏಕನಾಥ ಬಾನುವಳ್ಳಿ, ಬಸವನಗೌಡ ದೇಸಾಯಿ, ಎಸ್.ಕೆ.ಕರಿಯಣ್ಣನವರ ಹಾಗೂ ಎಂ.ಆರ್.ರಾಥೋಡ್ ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿ ಜಿಲ್ಲಾ ಪಂಚಾಯತ್ನ 2018-19ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಕೆಲ ಪಟ್ಟಣ ವ್ಯಾಪ್ತಿಯ ಕಾಮಗಾರಿಗಳು ಸೇರಿವೆ. ಕ್ರಿಯಾ ಯೋಜನೆ ಮಂಜೂರಾತಿಗಾಗಿ ಆಗಸ್ಟ್ 8 ರಂದು ಸಭೆ ಕರೆಯಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕ್ರಿಯಾ ಯೋಜನೆಗೆ ಮಂಜೂರಾತಿ ನೀಡಲು ಬರುವುದಿಲ್ಲ. ಕಾರಣ ಆಗಸ್ಟ್ 8ರಂದು ಕರೆದ ಜಿ.ಪಂ.ಸಾಮಾನ್ಯ ಸಭೆಯನ್ನು ಮುಂದೂಡುವಂತೆ ಮನವಿ ಮಾಡಿಕೊಂಡಿದ್ದರು.
ಈ ಕುರಿತಂತೆ ಸ್ಪಷ್ಟನೆ ನೀಡಿರುವ ರಾಜ್ಯ ಚುನಾವಣಾ ಆಯೋಗ ಆಗಸ್ಟ್ 8ರ ಹಾವೇರಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ನಡೆಸಲು ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಆದರೆ ಈ ಸಭೆಯಲ್ಲಿ ನಗರ ಪ್ರದೇಶದ ಮತದಾರರ ಮೇಲೆ ಪ್ರಭಾವಬೀರುವಂತಹ ಕಾಮಗಾರಿಗಳಿಗೆ ಮಂಜೂರಾತಿ ನೀಡುವ ನಿರ್ಣಯವನ್ನು ಕೈಗೊಳ್ಳದಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿಗಳಿಗೆ ನಿದರ್ೆಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಭೆ ನಡೆಸಲು ನಿರ್ಧರಿಸಲಾಗಿತ್ತು.
ಆಕ್ಷೇಪಣೆ ಸಲ್ಲಿಸಿದ ಕೆಲ ಸದಸ್ಯರು ಸಭಾಂಗಣಕ್ಕೆ ಆಗಮಿಸಿದರಾದರೂ ಸಹಿ ಮಾಡದೆ ದೂರ ಉಳಿದರು. ಆರಂಭದಲ್ಲಿ 18 ಜನ ಸಭೆಗೆ ಹಾಜರಾಗಿ ಸಹಿಮಾಡಿದರು. ಸಭೆ ಮುಂದೂಡುವ ಸಂದರ್ಭದಲ್ಲಿ ಮತ್ತಿಬ್ಬರು ಸದಸ್ಯರು ಹಾಜರಾಗಿ ಸಂಖ್ಯೆ 20ಕ್ಕೆರಿದರು ಸಭೆ ನಡೆಸುವಷ್ಟು ಹಾಜರಾತಿ ಇಲ್ಲದ ಕಾರಣ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಸಭೆ ಮುಂದೂಡಿರುವ ಕುರಿತಂತೆ ಘೋಷಿಸಿದರು.
ಈ ಸಂದರ್ಭದಲ್ಲಿ ಶಿವರಾಜ ಹರಿಜನ ಮತ್ತಿತರ ಸದಸ್ಯರು ನಮಗೆ ಸಭೆಗೆ ಭಾಗವಹಿಸುವ ಆಸಕ್ತಿ ಇದೆ. ಕೋರಂ ಕೊರತೆ ಕಾರಣದಿಂದ ಸಭೆಯನ್ನು ಮುಂದೂಡಿದರೆ ಕ್ರಿಯಾಯೋಜನೆ ಅನುಮೋದನೆಗೊಳ್ಳದೆ ಅಭಿವೃದ್ಧಿ ಕಾರ್ಯ ಕುಂಟಿತವಾಗುತ್ತದೆ ಎಂದು ಆಕ್ಷೇಪಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ದೀಪಾ ಅತ್ತಿಗೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಶ್ರೀಮತಿ ಶಿಲ್ಪಾ ನಾಗ್, ಉಪ ಕಾರ್ಯದಶರ್ಿ ಜಿ.ಗೋವಿಂದಸ್ವಾಮಿ ಇತರರು ಉಪಸ್ಥಿತರಿದ್ದರು.
ಕೋರಂಗೆ ಬೇಕಾದ ಸದಸ್ಯರು: 34 ಸದಸ್ಯ ಬಲದ ಹಾವೇರಿ ಜಿಲ್ಲಾ ಪಂಚಾಯತ್ ಸಭೆಗೆ ಆಹ್ವಾನಿತರಾದ ಆರು ಜನ ಶಾಸಕರು ಮತ್ತು ಏಳು ತಾಲೂಕು ಪಂಚಾಯತಿ ಅಧ್ಯಕ್ಷರು, ಇಬ್ಬರು ಲೋಕಸಭಾ ಸದಸ್ಯರು ಒಳಗೊಂಡಂತೆ 49ಜನ ಸದಸ್ಯರೆಂದು ಪರಿಗಣಿಸಲಾಗುತ್ತಿದೆ. ಕೋರಂ ಭತರ್ಿಯಾಗಲು ಕನಿಷ್ಠ 25ಜನ ಸಭೆಗೆ ಹಾಜರಾಗಬೇಕು. ಆದರೆ ಈ ದಿನ ಕೇವಲ 20 ಜನ ಸದಸ್ಯರು ಹಾಜರಾಗಿದ್ದರು.