ಅನಾಣ್ಯೀಕರಣದಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಡಾ. ಸುನೀತಾ

ಲೋಕದರ್ಶನವರದಿ

ರಾಣೇಬೆನ್ನೂರು10:   ಅನಾಣ್ಯೀಕರಣದಿಂದ ಭ್ರಷ್ಟಾಚಾರ ಮತ್ತು ಭಯೋತ್ಪಾದನೆಗೆ ಕಡಿವಾಣ ಬಿದ್ದಂತಾಗಿದೆ. ಆಥರ್ಿಕ ವ್ಯವಸ್ಥೆಯಲ್ಲಿದ್ದ ಶೇ 99 ರಷ್ಟು ಕಪ್ಪುಹಣ ಕಡಿಮೆಯಾಗಿ ಭ್ರಷ್ಟಾಚಾರ, ಲಂಚಾವತಾರ ಮತ್ತು ಭಯೋತ್ಪಾದನೆಯನ್ನು ಪರಿಣಾಮಕಾರಿಯಾಗಿ ಕಡಿವಾಣ ಹಾಕಲು ಸಾಧ್ಯವಾಯಿತು ಎಂದು ಚನ್ನಗಿರಿಯ ಶಿವಲಿಂಗೇಶ್ವರ ಪ್ರಥಮ ದಜರ್ೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಸುನೀತಾ. ಎನ್. ಎಂ ಹೇಳಿದರು.

      ನಗರದ ಎಸ್ಜೆಎಂವಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವೇದಿಕೆ ಅಡಿಯಲ್ಲಿ ವಿಭಾಗದ ವಿದ್ಯಾಥರ್ಿನಿಯರಿಗೆ ಏರ್ಪಡಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಈ ಹಿಂದೆ ಎರಡು ಬಾರಿ ಅನಾಣ್ಯೀಕರಣಕ್ಕಿಂತ 2016 ನ. 8 ರಂದು ಆದ ಘಟನೆ ಆಥರ್ಿಕತೆಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿತು ಎಂದರು. 

ಪ್ರಾಚಾರ್ಯ ಡಾ| ಜಿ.ಇ. ವಿಜಯಕುಮಾರ ಮಾತನಾಡಿ,  ಅನಾಣ್ಯೀಕರಣದಿಂದ ದೇಶದ ಆಥರ್ಿಕತೆಯಲ್ಲಿದ್ದ ಕಪ್ಪುಹಣವು ಹೊರ ಬಂದಿತಲ್ಲದೇ ದಾಖಲೆ ಇಲ್ಲದ ಎಷ್ಟೋ ನೋಟುಗಳನ್ನು ನಾಶವಾಗಲು ಕಾರಣವಾಯಿತು. ಇದರಿಂದ ದೇಶದಲ್ಲಿದ್ದ ಕಪ್ಪುಹಣ ಮತ್ತು ಭಯೋತ್ಪಾದನೆ ಗಣನೀಯ ಪ್ರಮಾಣದಲ್ಲಿ ಇಳಿಯಲು ಕಾರಣವಾಯಿತು ಎಂದರು.

ಇದೇ ಸಂದರ್ಭದಲ್ಲಿ ಹಿಂದಿನ ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿನಿಯರಾದ ಪೂಜಾ ದೊಡ್ಡಗೌಡರ, ಸುಧಾ ಮಡಿವಾಳರ, ಪವಿತ್ರಾ ಪಾಳೇದ, ಸೀಮಾಬಾನು ಹುಬ್ಬಳ್ಳಿ, ಯಶೋಧಾ ಬೆನ್ನೂರು, ಅಶ್ವಿನಿ ಎನ್. ನವಲೆ, ಮಮತಾ ಬಣಕಾರ, ಸಿಂಧು ಕನ್ನಪ್ಪಳವರ, ದ್ರಾಕ್ಷಾಯಣಿ ಎಂ ಚೂರಿ, ಮಾದವಿ ಉಪ್ಪಾರ, ಚಂದ್ರಕಲಾ ಎಂ ಗಂಜಿ, ಅಂಜಲಿ ಹುಣಸಿಕಾಯಿ, ಶಿಲ್ಪಾ ಮತ್ತು ಕವಿತಾ ಎಲಿಗಾರ  ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

  ಪ್ರೊ. ಎನ್. ಜಿ. ರಮೇಶ, ಪ್ರೊ. ಕೆ. ಶಿವರಾಜಕುಮಾರ,  ಯಶೋಧಾ ಬೆನ್ನೂರು, ಸುಧಾ ಮಡಿವಾಳರ,  ಗೌರಮ್ಮ ಏ.ಕೆ,  ಗಿರಿಜಾ ಐರಣಿಮಠ,  ಪವಿತ್ರಾ ಪಾಳೇದ, ವೀಣಾ ರವದಿಗೌಡ್ರ,  ಪ್ರೊ. ಕಿರಣಕುಮಾರ ಇದ್ದರು.