ಸವಳು-ಜವಳು ಡ್ರೇನೆಜ್ ಕಾಮಗಾರಿ ವೀಕ್ಷಣೆ

ಲೋಕದರ್ಶನ ವರದಿ

ಕಾಗವಾಡ 12:  ಕಳೆದ ಅನೇಕ ವರ್ಷಗಳಿಂದ ಚುನಾಯಿತ ಸದಸ್ಯರಿಗೆ ಮೇಲಿಂದ ಮೇಲೆ ಬೇಡಿಕೆ ಸಲ್ಲಿಸುತ್ತಾ ಕಾಗವಾಡ ತಾಲೂಕಿನ ಜುಗೂಳ ಗ್ರಾಮದ 3 ಎಕರೆ ಕ್ಷೇತ್ರ ಸವಳು-ಜವಳು ಮುಕ್ತಗೊಳಿಸುವ ಡ್ರೇನೆಜ್ ಹಾಕಿಸಲು ಪ್ರಯತ್ನಿಸಿದ್ದೇವೆ. ಆ ಕನಸ್ಸು ಕಾಗವಾಡ ಕ್ಷೇತ್ರ ಶಾಸಕರು, ರಾಜ್ಯದ ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ ನನಸು ಮಾಡುತ್ತಿದ್ದರಿಂದ ಜುಗೂಳ ಗ್ರಾಮದ ರೈತರಲ್ಲಿ ಹರ್ಷ ಮೂಡಿದೆ ಎಂದು ಗ್ರಾಮದ ಹಿರಿಯರು, ಚಿಕ್ಕೋಡಿ ಡಿಕೆಎಸ್ಎಸ್ ಸಕ್ಕರೆ ಕಾಖರ್ಾನೆ ಸಂಚಾಲಕ ಅಣ್ಣಾಸಾಹೇಬ ಪಾಟೀಲ ಸಂತಸ ಹಂಚಿಕೊಂಡರು.

ಮಂಗಳವಾರ ರಂದು ಜುಗೂಳ ಗ್ರಾಮದಲ್ಲಿ ಸಚಿವ ಶ್ರೀಮಂತ ಪಾಟೀಲ ಇವರು ಇಲ್ಲಿಯ ಜನರ ಬೇಡಿಕೆದಂತೆ 10 ಕಿ.ಮೀ. ಅಂತರದಲ್ಲಿಯ ಸವಳು-ಜವಳುಗೊಂಡ ಜಮೀಣದಲ್ಲಿ ಡ್ರೇನೆಜ್ ಮುಖಾಂತರ ನೀರು ತೆಗೆದು ಕೃಷ್ಣಾ ನದಿಗೆ ಹರಿಸುವ ಯೋಜನೆ ಪ್ರಾರಂಭಿಸಿದ್ದು, ಅದನ್ನು ವೀಕ್ಷಿಸುತ್ತಿರುವಾಗ ಅಣ್ಣಾಸಾಹೇಬ ಪಾಟೀಲ ಹಾಗೂ ಜುಗೂಳದ ಗ್ರಾಮಸ್ಥರು ಸಚಿವರ ಕಾರ್ಯಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಡಿಕೆಎಸ್ಎಸ್ ಸಕ್ಕರೆ ಕಾಖರ್ಾನೆ ಸಂಚಾಲಕ ಅಣ್ಣಾಸಾಹೇಬ ಪಾಟೀಲ ಮಾತನಾಡಿ, ಜುಗೂಳ ಗ್ರಾಮದಲ್ಲಿ 4 ಸಾವಿರ ಎಕರ ಜಮೀಣವಿದೆ. ಇದರಲ್ಲಿಯ 3 ಸಾವಿರ ಎಕರ ಸವಳು-ಜವಳುಗೊಂಡಿದೆ. ರೈತರ ಉತಾರಾ ಮೇಲೆ ಮಾತ್ರ ಜಮೀಣವಿದೆ, ಅದರ ಸುಖ ಅವರಿಗೆ ಇಲ್ಲಾ. ಗ್ರಾಮದಲ್ಲಿ 2700 ಕುಟುಂಬಗಳಿದ್ದು, ಅದರಲ್ಲಿ ಎಲ್ಲರು ಕೃಷಕರಿದ್ದಾರೆ. ಕಳೇದ 15 ವರ್ಷಗಳಿಂದ ಚುನಾಯಿತ ಸದಸ್ಯರಿಗೆ ಈ ಸಮಸ್ಯೆ ಗಮನಕ್ಕೆ ತಂದಿದ್ದರೂ, ಯಶ ದೊರೆಯಲಿಲ್ಲಾ. ಈ ಸಮಸ್ಯೆ ಸಚಿವರ ಗಮನಕ್ಕೆ ತಂದಾಗ ಕೂಡಲೆ ಸ್ಪಂದಿಸಿ, ಕಾರ್ಯರೂಪದಲ್ಲಿ ತರುತ್ತಿದ್ದಾರೆ. ಇದ್ದರಿಂದ ನಮಗೆ ತೃಪ್ತಿತಂದಿದೆ ಎಂದರು.

ಕಾಗವಾಡ ಶಾಸಕರು, ರಾಜ್ಯದ ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ ಮಾತನಾಡುವಾಗ, ಕಾಗವಾಡ ಮತಕ್ಷೇತ್ರದ ಮಂಗಾವತಿ, ಜುಗೂಳ, ಶಹಾಪುರ, ಮೊಳವಾಡ, ಕುಸನಾಳ, ಐನಾಪೂರ ಈ ಗ್ರಾಮದ ರೈತರಿಗೆ ಸವಳು-ಜವಳದಿಂದ ಅವರ ಸಾವಿರಾರು ಎಕರ ಕ್ಷೇತ್ರ ನೀರಿನಲ್ಲಿ ಮುಳುಗಿ ಬರಡವಾಗಿವೆ. ಇದರಿಂದ ಮುಕ್ತಿಗೊಳಿಸಲು ಬಹಳ ದಿನಗಳಿಂದ ಬೇಡಿಕೆಯಿಡುತ್ತಿದ್ದಾರೆ. ಈ ಸಮಸ್ಯೆ ಸಕರ್ಾರದ ಮುಂದೆ ಮಂಡಿಸಿದ್ದೇನೆ. ಜುಗೂಳ ಗ್ರಾಮದ ರೈತರ ಸಮಸ್ಯೆ ಅರಿತು ನಾನು ಸ್ವ-ಖಚರ್ಿನಿಂದ ಈ ಕೆಲಸ ಪ್ರಾರಂಭಿಸಿದ್ದೇನೆ. ಈ ಮುಂದೆಯೂ ರೈತರ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದರು.

ಕೆಂಪವಾಡ ಸಕ್ಕರೆ ಕಾಖರ್ಾನೆಯ ಎಂ.ಡಿ. ಶ್ರೀನಿವಾಸ ಪಾಟೀಲ, ರೈತ ಮುಖಂಡರಾದ ಶಿವಾನಂದ ಪಾಟೀಲ, ಅಣ್ಣಾಸಾಹೇಬ ಪಾಟೀಲ, ಕಾಕಾಸಾಹೇಬ ಪಾಟೀಲ, ಸುಧಾಕರ ಗಣೇಶವಾಡಿ, ಅರುಣ ಗಣೇಶವಾಡಿ, ಬಾಬಾಸಾಹೇಬ ಪಾಟೀಲ, ಸುರೇಶ ಪಾಟೀಲ, ರವಿ ವ್ಹಾಂಟೆ, ಅನೀಲ ಕಡೋಲೆ, ಅನೀಲ ಸುಂಕೆ, ಸೇರಿದಂತೆ ಅನೇಕ ರೈತರು ಇದ್ದರು.