ಗದಗ 14: ಇತ್ತೀಚೆಗೆ ವಿಕಲಚೇತನರು ಹೊಸದಾಗಿ ವಿಶಿಷ್ಠ ಗುರುತಿನ ಚೀಟಿ (ಯುಡಿಐಡಿ ಕಾರ್ಡ)ಯನ್ನು ಪಡೆಯುವಲ್ಲಿ ಸಂಭಂಧಿಸಿದ ತಾಲೂಕಾ ಆಸ್ಪತ್ರೆಯ ವೈದ್ಯರಾಗಲೀ, ಜಿಲ್ಲಾಸ್ಪತ್ರೆಯ ವೈದ್ಯರಾಗಲೀ ವಿಳಂಬ ಮಾಡಿ ವಿಕಲಚೇತನರಿಗೆ ತೊಂದರೆ ಮಾಡಿದ ವೈದ್ಯರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಹೇಳಿದರು.
ಅವರು ಗದಗ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲಿನಲ್ಲಿ ಜರುಗಿದ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಉಪನಿಯಮ 72ರಡಿ ರಚಿತವಾದ ಜಿಲ್ಲಾ ಮಟ್ಟದ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಾ, ಅಂಕಿ ಅಂಶಗಳ ಪ್ರಕಾರ ವಿಕಲಚೇತನರಿಗೆ ನೀಡಬೇಕಾದ 10.000 ವಿಶಿಷ್ಠ ಗುರುತಿನ ಚೀಟಿ ಹಂಚಿಕೆ ಕಾರ್ಯ ತುಂಬಾ ವಿಳಂಬವಾಗುತ್ತಿದ್ದು, ಇದರಿಂದ ಸಾಕಷ್ಟು ವಿಕಲಚೇತನರು ತೊಂದರೆ ಅನುಭವಿಸುತ್ತಿದ್ದು, ಈ ಸಂಬಂಧವಾಗಿ ಆದಷ್ಟು ಬೇಗ ಆಯಾ ತಾಲೂಕಾ ಮಟ್ಟದಲ್ಲಿ ಗುರುತಿನ ಚೀಟಿ ಹಂಚಿಕೆ ಕಾರ್ಯ ಪ್ರಾರಂಭವಾಗಬೇಕು, ಒಂದು ವೇಳೆ ಆಯಾ ತಾಲೂಕಾ ಮಟ್ಟದಲ್ಲಿ ಸಂಭಂಧಿಸಿದ ವೈಧ್ಯಾಧಿಕಾರಿಗಳು ಲಭ್ಯವಿಲ್ಲದಿದ್ದಲ್ಲಿ ಅಲ್ಲಿನ ಮೇಲಾಧಿಕಾರಿಗಳು ಜಿಲ್ಲಾಸ್ಪತ್ರೆಗೆ ಆಯಾ ವಿಕಲತೆಗೆ ಸಂಭಂದಿಸಿದಂತೆ ವೈಧ್ಯರನ್ನು ಸಂಪರ್ಕಿಸಲು ವಿನಂತಿ ಪತ್ರವನ್ನು ಕೊಟ್ಟು ಕಳುಹಿಸುವಂತೆ ವ್ಯವಸ್ಥೆ ಕಲ್ಪಿಸಿ ವಿಕಲಚೇತನರ ಗುರುತಿನ ಚೀಟಿ ನೀಡಲು ವಿಳಂಬ ಮಾಡದಂತೆ ಸೂಚನೆ ನೀಡಿದರು.
ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಆಶು ನದಾಫ್ ಅವರು ವಿಕಲಚೇತನರ ಯೋಜನೆಗಳು, ಸಾರ್ವಜನಿಕ ಉಪಯೋಗಿ ಕಟ್ಟಡಗಳಲ್ಲಿ ಕಡ್ಡಾಯವಾಗಿ ರ್ಯಾಂಪ್ಸ್ ಹಾಗೂ ಬ್ರೈಲ್ ಲಿಪಿ ಅಳವಡಿಕೆ, ಎಲ್ಲಾ ಸಕರ್ಾರಿ ಇಲಾಖೆಗಳಲ್ಲಿ ಕಡ್ಡಾಯವಾಗಿ 5% ಹಣವನ್ನು ವಿಕಲಚೇತನರ ಕ್ಷೇಮಾಭಿವೃದ್ಧಿಗೆ ತೆಗೆದಿರಿಸುವುದು, ಸಕರ್ಾರ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ದೈಹಿಕ ವಿಕಲಚೇತನರಿಗಾಗಿ ಉಚಿತ ತ್ರಿಚಕ್ರ ವಾಹನಗಳನ್ನು ವಿತರಿಸುವ ರೀತಿಯಲ್ಲಿ ಕಿವುಡ ಮತ್ತು ಮೂಕ ವಿಕಲತೆ ಹೊಂದಿದ ವ್ಯಕ್ತಿಗಳಿಗೆ ವಿಶೇಷ ಆ್ಯಪ್ ಹೊಂದಿದ ಮೋಬೈಲ್ ನೀಡುವಿಕೆ, ಬುದ್ಧಿ ಮಾಂದ್ಯ ಮಕ್ಕಳ ಆರೈಕೆಯನ್ನು ಮಾಡುವ ವ್ಯಕ್ತಿಗಳಿಗೆ ಯಾವ ರೀತಿ ತರಬೇತಿ ಹೊಂದಿರಬೇಕು, ಹೊಸದಾಗಿ ಎಂಆರ್ಡಬ್ಲ್ಯೂ, ಯುಆರ್ಡಬ್ಲ್ಯೂ, ವ್ಹಿಆರ್ಡಬ್ಲ್ಯೂಗಳ ಆಯ್ಕೆ ಮತ್ತು ಹೊಸದಾಗಿ ರಚಿತವಾದ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅನ್ನದಾನ ವಿಜಯ ವಿದ್ಯಾ ಸಮಿತಿ ರೋಣ, ಶ್ರೀ ಮಂಜು ಶಿಕ್ಷಣ ಸಂಸ್ಥೆ ಬೆಟಗೇರಿ, ಶಶಿಧರ ಶಿರಸಂಗಿ ಯಳವತ್ತಿ ಶಿರಹಟ್ಟಿ ತಾಲೂಕಾ, ಸುರೇಶ ಹಡಪದ ರೋಣ ತಾಲೂಕಾ, ರಾಘವೇಂದ್ರ ಪಾಟೀಲ ಮುಂಡರಗಿ ತಾಲೂಕಾ, ಶಿದ್ದಪ್ಪ ಮರಚಕ್ಕನವರ ನರಗುಂದ ತಾಲೂಕಾ, ಪರಶುರಾಮ ಹಬೀಬ ಗದಗ ತಾಲೂಕಾ ಹಾಗೂ ಶ್ರೀನಾಥ ಕುಲಕಣರ್ಿ ಹೊಂಬಳ ಇವರನ್ನು ಆಯ್ಕೆ ಮಾಡಲಾಗಿದೆ ಇವರೆಲ್ಲರೂ ಆಯಾ ತಾಲೂಕುಗಳಲ್ಲಿನ ವಿಕಲಚೇತನರ ಸಮಸ್ಯೆಗಳನ್ನು ಪರಿಹರಿಸುವ ಪ್ರತಿನಿಧಿಗಳಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.
ಈ ಸಭೆಯಲ್ಲಿ ಪೋಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನ್ಯಾಯಂಗ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.