ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ: ಕೊಲೆ ಶಂಕೆ

ಕಲಬುರಗಿ, ನ. 18:     ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೋರ್ವನ ಶವ  ಜಿಲ್ಲೆಯ ಚಿಂಚೋಳಿ ರಸ್ತೆಯ ರುದ್ನೂರ ಗೇಟ್ ಬಳಿ ಪತ್ತೆಯಾಗಿದೆ. 

ಕಾಳಗಿ  ತಾಲೂಕಿನ ಕೊಡದೂರ ನಿವಾಸಿ ಹಾವಪ್ಪ ಕುಕ್ಕುಂದಿ (32) ಸಾವನ್ನಪ್ಪಿರುವ ವ್ಯಕ್ತಿ.  ರುದ್ನೂರ ಗೇಟ್ ನ ಮಹಾದ್ವಾರಕ್ಕೆ ನೇಣು ಬಿಗಿಯಲಾಗಿದ ಸ್ಥಿತಿಯಲ್ಲಿ  ಅವರ ಮೃತದೇಹ  ಪತ್ತೆಯಾಗಿದೆ.  

ಅವರ ತಲೆಯ ಮೇಲೆ ಹಲವು ಗಾಯಗಳು ಕಂಡುಬಂದಿದೆ. ದುಷ್ಕಮರ್ಿಗಳು ಅವರನ್ನು ಬೇರೆಗೆ ಕೊಂದು ಇಲ್ಲಿಗೆ ತಂದು ನೇಣು ಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 

ಮೃತ ಹಾವಪ್ಪ, ಮೂರ್ನಾಲ್ಕು ದಿನಗಳ ಹಿಂದಷ್ಟೇ ಗಂಡು ಮಗುವಿನ ತಂದೆಯಾಗಿದ್ದ ಎಂದು ತಿಳಿದು ಬಂದಿದೆ. 

ಘಟನೆಗೆ ಸಂಬಂಧಿಸಿದಂತೆ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.