ಕೊರೊನಾವೈರಸ್; ಅಮೇರಿಕಾದಲ್ಲಿ ಸೋಂಕಿನ ಪ್ರಕರಣ ಸಂಖ್ಯೆ 13,000ಕ್ಕೂ ಮೀರಿದ್ದು, ಸಾವಿನ ಸಂಖ್ಯೆ 200ಕ್ಕೇರಿದೆ

ವಾಷಿಂಗ್ಟನ್, ಮಾರ್ಚ್ 20 , ಅಮೇರಿಕಾದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 13,680ಕ್ಕೆ ತಲುಪಿದ್ದು, 200 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯವು ಶುಕ್ರವಾರ ಅಂಕಿಅಂಶಗಳನ್ನು ಪ್ರಕಟಿಸಿದೆ.ಒಂದು ದಿನ ಮುಂಚಿತವಾಗಿ, ವಿಶ್ವವಿದ್ಯಾನಿಲಯವು ಸುಮಾರು 9,345 ಪ್ರಕರಣಗಳನ್ನು, ದೃಢಪಡಿಸಿ, 150 ಜನರು ಸಾವಿಗೀಡಾಗಿದ್ದಾರೆ ಎಂದು ವರದಿ ನೀಡಿತ್ತುವಾಶಿಂಗ್ಟನ್ ರಾಜ್ಯದಲ್ಲೇ 74 ಜನರು ಕೊರೊನಾವೈರಸ್ ಸೋಂಕಿಗೆ ಬಲಿಯಾಗಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆ ಮಾರ್ಚ್ 11 ರಂದು ಕೊರೊನಾವೈರಸ್ ಅನ್ನು ಏಕಾಏಕಿ ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು. ವಿಶ್ವಾದ್ಯಂತ 2,40,000 ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದು, 9,800 ಕ್ಕೂ ಹೆಚ್ಚು ಸಾವುನೋವುಗಳು ಸಂಭವಿಸಿವೆ.