ವಾಷಿಂಗ್ಟನ್, ಮೇ ೨೨, ದೇಶದಲ್ಲಿ ಒಂದೊಮ್ಮೆ ಕೊರೊನಾ ವೈರಸ್ ಹಾವಳಿಯ ಎರಡನೇ ಹಂತ ಎದುರಾದರೂ ಯಾವುದೇ ಕಾರಣಕ್ಕೂ ಲಾಕ್ ಡೌನ್ ನಿರ್ಬಂಧಗಳನ್ನು ಜಾರೊಗೊಳಿಸುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಎರಡನೇ ಹಂತ ಎದುರಾಗುವುದು ವಿಭಿನ್ನ ಸಾಧ್ಯತೆ ಎಂದು ಜನರು ಹೇಳುತ್ತಿದ್ದಾರೆ. ಇದು ಪ್ರಮಾಣಿತವಾಗಿದೆ. ನಾವು ಬೆಂಕಿಯನ್ನು ನಂದಿಸಲಿದ್ದೇವೆ. ಆದರೆ, ದೇಶವನ್ನು ಮುಚ್ಚಲು ಹೋಗುವುದಿಲ್ಲ ಎಂದು ಟ್ರಂಪ್ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮಿಚಿಗನ್ ರಾಜ್ಯದ ಫೋರ್ಡ್ ಉತ್ಪಾದನಾ ಘಟಕದ ಪ್ರವಾಸದ ಸಮಯದಲ್ಲಿ ಮಾಧ್ಯಮ ಪ್ರಶ್ನೆಗಳಿಗೆ ಈ ಉತ್ತರ ನೀಡಿದ್ದಾರೆ.
ಆರೋಗ್ಯಕರ ದೇಶ ಅಥವಾ ಆರೋಗ್ಯ ರಾಜ್ಯಕ್ಕೆ ಶಾಶ್ವತ ಲಾಕ್ ಡೌನ್ ಜಾರಿ ಕಾರ್ಯತಂತ್ರವಲ್ಲ, ದೇಶವನ್ನು ಮುಚ್ಚುವುದಿಲ್ಲ. ಅಂತ್ಯಗೊಳ್ಳದ ಲಾಕ್ ಡೌನ್ ಕ್ರಮಗಳಿಂದಾಗಿ ಸಾರ್ವಜನಿಕ ಆರೋಗ್ಯಕ್ಕೆ ಅನಾಹುತವಾಗಲಿದೆ. ನಮ್ಮ ಜನರ ಆರೋಗ್ಯ ರಕ್ಷಣೆ ಮಾಡಲು ಕಾರ್ಯಶೀಲ ಆರ್ಥಿಕತೆಯನ್ನು ಮುಂದುವರಿಸಲಾಗುವುದು ಎಂದು ಟ್ರಂಪ್ ಹೇಳಿದರು.ಕೊರೊನಾ ವೈರಸ್ ಹರಡುವುದನ್ನು ತಡೆಯಲು ವಿಧಿಸಿದ್ದ ನಿರ್ಬಂಧಗಳನ್ನು ತೆರವುಗೊಳಿಸಲು ಎಲ್ಲ ೫೦ ರಾಜ್ಯಗಳು ಯೋಜನೆ ಆರಂಭಿಸಿವೆ. ಆರ್ಥಿಕತೆಗಳನ್ನು ವಿವಿಧ ವೇಗದಲ್ಲಿ ಮುಕ್ತಗೊಳಿಸಲಿವೆ. ಚಳಿಗಾಲದಲ್ಲಿ ಕೊರೊನಾ ವೈರಸ್ ನ ಎರಡನೆ ಹಂತದ ಸಾಧ್ಯತೆಯಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೊರೊನಾದಿಂದ ೧.೫ ಮಿಲಿಯನ್ ಅಮೆರಿಕಾ ಜನರು ಬಾಧಿತಗೊಂಡಿದ್ದು, ಈವರೆಗೆ ೯೦ ಸಾವಿರ ಮಂದಿ ಮೃತಪಟ್ಟಿದ್ದಾರೆ. ಜೂನ್ ಆರಂಭದ ವೇಳೆಗೆ ಸಾವಿನ ಸಂಖ್ಯೆ ೧ ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ರೋಗ ನಿಯಂತ್ರಣ ಕೇಂದ್ರಗಳ ಅಂದಾಜಿಸಿವೆ.