ಕೊರೋನಾವೈರಸ್ ಭೀತಿ: ಮಣಿಪುರದಲ್ಲಿ ಮುನ್ನೆಚ್ಚರಿಕಾ ಕ್ರಮ

ಇಂಫಾಲ, ಜ 29:     ಮಾರಣಾಂತಿಕ ಕೊರೋನೊವೈರಸ್ ಮಣಿಪುರಕ್ಕೆ ಬರದಂತೆ ತಡೆಯಲು ಮಣಿಪುರ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. 

 ಹಾಂಗ್‌ಕಾಂಗ್‌ನಿಂದ ಹಿಂದಿರುಗಿದ ಬಾಲಕಿಯನ್ನು ರಿಮ್ಸ್ ಆಸ್ಪತ್ರೆಗೆ  ದಾಖಲಿಸಿದ್ದರಿಂದ  ಸೋಂಕಿನ ಆತಂಕ ಎದುರಾಗಿತ್ತು. 

 ಬಾಲಕಿಯು ಜನವರಿ 20 ರಂದು ಹಾಂಗ್‍ಕಾಂಗ್ ನಿಂದ ಹಿಂತಿರುಗಿದ ಬಳಿಕ  ಜನವರಿ 27 ರಂದು ತಲೆನೋವು, ಸೀನುವಿಕೆ, ಮೂಗು ಸೋರುವಿಕೆಯ ಚಿಕಿತ್ಸೆಗಾಗಿ ಆಗಮಿಸಿದ್ದರು.  ಈ ಹಿನ್ನೆಲೆಯಲ್ಲಿ ಆಕೆಯನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ನಿಗಾ ವಹಿಸಲಾಗಿದೆ. 

  ಮುನ್ನೆಚ್ಚರಿಕೆಯ ಕ್ರಮವಾಗಿ, ಗಡಿ ಪ್ರದೇಶಗಳಲ್ಲಿ ಮ್ಯಾನ್ಮಾರ್ ಜನರ ಚಲನೆಯನ್ನು ನಿಲ್ಲಿಸಿದ್ದು ವೈದ್ಯಕೀಯ ತಂಡವು ತಪಾಸಣೆ ಮಾಡಿದ ನಂತರವೇ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ.