ಅಮೆರಿಕದಲ್ಲಿ 16 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ನ್ಯೂಯಾರ್ಕ್, ಮೇ 23, ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 16,00,481 ಕ್ಕೆ ಏರಿಕೆಯಾಗಿದ್ದು ಮೃತರ ಸಂಖ್ಯೆ 95,921 ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.ನ್ಯೂಯಾರ್ಕ್ ನಲ್ಲಿ ಅತಿ ಹೆಚ್ಚು 3,58,154 ಪ್ರಕರಣಗಳು ದಾಖಲಾಗಿದ್ದು 28,853 ಜನರು ಮೃತಪಟ್ಟಿದ್ದಾರೆ. ನ್ಯೂಜರ್ಸಿ, ಇಲಿನೋಸ್, ಮಸಾಚುಟೆಸ್, ಕ್ಯಾಲಿಫೋರ್ನಿಯಾ, ಪೆನಿಸ್ಲೆವೇನಿಯಾ, ಮಿಚಿಗನ್ ಮತ್ತು ಟೆಕ್ಸಾಸ್ ಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ ಎಂದು ವರದಿ ಅಂಕಿಅಂಶ ನೀಡಿದೆ.

ಕುಸಿಯುತ್ತಿರುವ ಆರ್ಥಿಕತೆ ತಡೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಶಯದಂತೆ ಎಲ್ಲೆಡೆ ಚಟುವಟಿಕೆಗಳನ್ನು ಪುನರಾರಂಭಿಸಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಹೆಚ್ಚು ಜನರಿಗೆ ಸೋಂಕು ತಗುಲಲಿದೆ ಮತ್ತು ಇನ್ನೂ ಅನೇಕ ಜನರು ಅಸುನೀಗಲಿದ್ದಾರೆ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.ಕೋವಿಡ್ – 19 ರ ಎರಡನೇ ಹಂತ ಮತ್ತೆ ಕಾಣಿಸಿಕೊಂಡಲ್ಲಿ ಅಮೆರಿಕದಲ್ಲಿ ಲಾಕ್ ಡೌನ್ ಜಾರಿ ಮಾಡಲಾಗುವುದಿಲ್ಲ ಎಂದು ಗುರುವಾರವಷ್ಟೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.