ನವದೆಹಲಿ, ಮೇ 2,ವಿಶ್ವದಲ್ಲಿ ಕೊರೊನಾ ವೈರಸ್ ವೇಗವಾಗಿ ಹರಡುತ್ತಿದೆ. ಈ ಸೋಂಕು ಹಲವು ದೇಶಗಳ ನಿದ್ದೆಗೆಡಿಸಿದೆ. ಈ ವೈರಸ್ ನಿಂದ ಸಾವನ್ನಪ್ಪಿದವರ ಸಂಖ್ಯೆ 2,38,096 ತಲುಪಿದ್ದು, ವಿಶ್ವಾದ್ಯಂತ 33,38,788 ಜನರು ಈ ಸೋಂಕಿಗೆ ಒಳಗಾಗಿದ್ದಾರೆ. ಕೊರೊನಾ ವೈರಸ್ ಭಾರತದಲ್ಲಿ ವೇಗವಾಗಿ ಹರಡುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ದೇಶದಲ್ಲಿ 37,336 ಜನರು ಪೀಡಿತರಾಗಿದ್ದು, 1,218 ಜನ ಸಾವನ್ನಪ್ಪಿದ್ದಾರೆ. ಅಲ್ಲದೆ 9,951 ಜನರು ಇದರ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
ಅಮೆರಿಕದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್ಎಸ್ಇ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಅಮೆರಿಕಾದಲ್ಲಿ 11.03 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದು, 64,804 ಜನರು ಸಾವನ್ನಪ್ಪಿದ್ದಾರೆ.
ಯುರೋಪ ಖಂಡದಲ್ಲೂ ವೈರಸ್ ತಲ್ಲಣ ಸೃಷ್ಟಿಸಿದೆ. ಇಟಲಿಯಲ್ಲಿ ಸಾಂಕ್ರಾಮಿಕ ರೋಗವು ಈವರೆಗೆ 28,236 ಜನರನ್ನು ಬಲಿ ಪಡೆದಿದ್ದು ಮತ್ತು ಈವರೆಗೆ 2,07,428 ಜನರು ಸೋಂಕಿಗೆ ಒಳಗಾಗಿದ್ದಾರೆ. ಕೋವಿಡ್ -19 ಸೋಂಕಿನಿಂದ ಹೆಚ್ಚು ಬಾಧಿತ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ನಂತರ ಸ್ಪೇನ್ ಎರಡನೇ ಸ್ಥಾನದಲ್ಲಿದೆ. ಇಲ್ಲಿಯವರೆಗೆ ಸ್ಪೇನ್ ನಲ್ಲಿ 2,15,216 ಜನರು ತುತ್ತಾಗಿದ್ದು, 24,824 ಜನರು ಈ ಕಾರಣದಿಂದಾಗಿ ಸಾವನ್ನಪ್ಪಿದ್ದಾರೆ.ಫ್ರಾನ್ಸ್‌ನಲ್ಲಿ ಈವರೆಗೆ 1,67,299 ಜನರು ಸೋಂಕಿಗೆ ಒಳಗಾಗಿದ್ದು, 24,594 ಜನರು ಸಾವನ್ನಪ್ಪಿದ್ದಾರೆ. ಜರ್ಮನಿಯಲ್ಲಿ, 1,60,758 ಜನರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಮತ್ತು 6,481 ಜನರು ಸಾವನ್ನಪ್ಪಿದ್ದಾರೆ. ಇಂಗ್ಲೆಂಡ್ ನಲ್ಲಿ 1,77,454 ಜನರು ಬಾಧಿತರಾಗಿದ್ದಾರೆ ಮತ್ತು ಇದರಿಂದಾಗಿ 27510 ಜನರು ಸಾವನ್ನಪ್ಪಿದ್ದಾರೆ. ಟರ್ಕಿಯಲ್ಲಿ ಕರೋನಾ ಸೋಂಕಿನ ಸಂಖ್ಯೆ 1,22,392 ಕ್ಕೆ ಏರಿದೆ ಮತ್ತು 3,258 ಜನರು ಸಾವನ್ನಪ್ಪಿದ್ದಾರೆ.ಕೊಲ್ಲಿ ರಾಷ್ಟ್ರ ಇರಾನ್‌ನಲ್ಲಿ 6,091, ರಷ್ಯಾದಲ್ಲಿ 11,693, ,ಬೆಲ್ಜಿಯಂನಲ್ಲಿ 7,703, ಬ್ರೆಜಿಲ್ನಲ್ಲಿ 6,329, ನೆದರ್ಲ್ಯಾಂಡ್ ನಲ್ಲಿ 4,893, ಕೆನಡಾದಲ್ಲಿ 3,391, ಸ್ವೀಡನ್ ನಲ್ಲಿ 2,653, ಸ್ವಿಟ್ಜರ್ಲೆಂನಡ್ ನಲ್ಲಿ 1,749, ಮೆಕ್ಸಿಕೊದಲ್ಲಿ 1,972, ಐರ್ಲೆಂಡ್ ನಲ್ಲಿ 1,265 ಮತ್ತು ಪೋರ್ಚುಗಲ್ ನಲ್ಲಿ 1,007 ಜನರು ಸಾವನ್ನಪ್ಪಿದ್ದಾರೆ.ಈ ಜಾಗತಿಕ ಸಾಂಕ್ರಾಮಿಕ ರೋಗ ಚೀನಾದಲ್ಲಿ ಕಾಣಿಸಿಕೊಂಡಿದ್ದು, ಇಲ್ಲಿಯವರೆಗೆ 82,874 ಜನರು ಸೋಂಕಿಗೆ ಒಳಗಾಗಿದ್ದು, ಮತ್ತು 4,633 ಮಂದಿ ಸಾವನ್ನಪ್ಪಿದ್ದಾರೆ.