ಮಾಸ್ಕೋ, ಮೇ 18,ಬ್ರೆಜಿಲ್ ನಲ್ಲಿ ಮತ್ತೆ 7938 ಜನರಲ್ಲಿ ಕೊರೊನಾ ವೈರಾಣು ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 2,41,080 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಇದೇ ಅವಧಿಯಲ್ಲಿ 485 ಜನರು ಮೃತಪಟ್ಟಿದ್ದು ಒಟ್ಟು 16,118 ಜನರು ಮೃತಪಟ್ಟಿದ್ದಾರೆ. ಒಟ್ಟು 94,122 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.ಕೊರೊನಾದಿಂದ ಅತಿ ಹೆಚ್ಚು ಬಾಧಿತವಾಗಿರುವ ನಾಲ್ಕನೇ ರಾಷ್ಟ್ರ ಬ್ರೆಜಿಲ್ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.ಕೊರೊನಾ ಬಿಕ್ಕಟ್ಟಿನ ನಡುವೆಯೇ ಆರ್ಥಿಕತೆಗೆ ಪುನಶ್ಚೇತನ ನೀಡಲು ಮೇ ತಿಂಗಳ ಆರಂಭದಲ್ಲಿ ಜಿಮ್, ಬ್ಯೂಟಿ ಪಾರ್ಲರ್, ಸಲೂನ್ ಗಳನ್ನು ತೆರೆಯಲು ಅಧ್ಯಕ್ಷ ಜೈರ್ ಬೋಲ್ಸನಾರೋ ಅನುಮತಿ ನೀಡಿದ್ದರು.ಕೊರೊನಾ ಮಹಾಮಾರಿಯನ್ನು ಅಧ್ಯಕ್ಷ ಬೊಲ್ಸನಾರೋ ಲಘುವಾಗಿ ಪರಿಗಣಿಸಿದ್ದು ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಅನೇಕರಿಂದ ಟೀಕೆ ವ್ಯಕ್ತವಾಗಿದೆ. ಆದಾಗ್ಯೂ ಅಲ್ಲಿ ಲಾಕ್ ಡೌನ್ ನಂತಹ ಕಟ್ಟುನಿಟ್ಟನ ನಿಯಮಗಳು ಸದ್ಯ ಜಾರಿಯಲ್ಲಿಲ್ಲ.