ವಿಶ್ವದಲ್ಲಿ 54 ಲಕ್ಷ ದಾಟಿದ ಕೊರೊನಾ ಸೋಂಕಿತರು, 3.45 ಲಕ್ಷ ಮಂದಿ ಸಾವು

ನವದೆಹಲಿ, ಮೇ 25, ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್ (ಕೋವಿಡ್ 19) ವಿಶ್ವಾದ್ಯಂತ ಹರಡುತ್ತಿದ್ದು, ವಿಶ್ವದಲ್ಲಿ ಸೋಂಕಿತರ ಸಂಖ್ಯೆ 54 ಲಕ್ಷಕ್ಕೂ ಹೆಚ್ಚು ತಲುಪಿದೆ ಮತ್ತು ಇಲ್ಲಿಯವರೆಗೆ 3.45 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.ಅಮೆರಿಕದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್ಎಸ್ಇ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ವಿಶ್ವಾದ್ಯಂತ ಒಟ್ಟು ಸೋಂಕಿತರ ಸಂಖ್ಯೆ 54,06,537 ಕ್ಕೆ ಏರಿದೆ ಮತ್ತು 3,45,036 ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.
 ವಿಶ್ವದಾದ್ಯಂತ ಹೆಚ್ಚು ಪೀಡಿತ ರಾಷ್ಟ್ರಗಳಲ್ಲಿ ಅಮೇರಿಕ ಮೊದಲ ಸ್ಥಾನದಲ್ಲಿದ್ದು, ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ, ರಷ್ಯಾ ಮೂರನೇ ಸ್ಥಾನದಲ್ಲಿದೆ.ಭಾರತದಲ್ಲಿ, ಕರೋನಾ ವೈರಸ್ ತೀವ್ರತೆಯು ಹೆಚ್ಚುತ್ತಿದ್ದು, ಸೋಂಕಿತರ ಸಂಖ್ಯೆ ಕಳೆದ 24 ಗಂಟೆಗಳಲ್ಲಿ ಸುಮಾರು ಏಳು ಸಾವಿರ ಹೆಚ್ಚಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ದೇಶದಲ್ಲಿ ಸೋಂಕಿನಿಂದ 1,38,845 ಜನರು ಮತ್ತು 4021 ಜನರು ಸಾವನ್ನಪ್ಪಿದ್ದಾರೆ.ಕೊರೊನಾ ವೈರಸ್ ಸೋಂಕಿತರ ಸಂಖ್ಯೆ  ಅಮೆರಿಕದಲ್ಲಿ 16 ಲಕ್ಷಕ್ಕೆ ಏರಿದ್ದು, 97 ಜನ ಮೃತ ಪಟ್ಟಿದ್ದಾರೆ. ಏತನ್ಮಧ್ಯೆ, ಬ್ರೆಜಿಲ್ ನಲ್ಲಿ, 3,63,211 ಕ್ಕೆ ಏರಿದ್ದು, ಸಾವಿನ ಸಂಖ್ಯೆ 22,666 ಕ್ಕೆ ಏರಿದೆ. ರಷ್ಯಾದಲ್ಲಿ ಇಲ್ಲಿಯವರೆಗೆ 3,44,481 ಜನರು ಇದಕ್ಕೆ ಬಲಿಯಾಗಿದ್ದಾರೆ ಮತ್ತು 3541 ಜನರು ಸಾವನ್ನಪ್ಪಿದ್ದಾರೆ.ಇಂಗ್ಲೆಂಡ್ ನಲ್ಲಿ 2,60,916 ಜನರು ಬಾಧಿತರಾಗಿದ್ದಾರೆ ಮತ್ತು ಇದುವರೆಗೆ 36,875 ಜನರು ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ 32,785 , ಚೀನಾದಲ್ಲಿ 4638,  ಫ್ರಾನ್ಸ್ ನಲ್ಲಿ 28,370,  ಜರ್ಮನಿಯಲ್ಲಿ 8,283, ಬೆಲ್ಜಿಯಂನಲ್ಲಿ 9280 ಜನರು, ಮೆಕ್ಸಿಕೊದಲ್ಲಿ 7394, ಕೆನಡಾದಲ್ಲಿ 6533, ನೆದರ್ಲ್ಯಾಂಡ್ಸ್ ನಲ್ಲಿ 5841, ಸ್ವೀಡನ್ ನಲ್ಲಿ 3998, ಪೆರುವಿನಲ್ಲಿ 3456, ಈಕ್ವೆಡಾರ್ ನಲ್ಲಿ 3108, ಸ್ವಿಟ್ಜರ್ಲೆಂಡ್ ನಲ್ಲಿ 1906, ಐರ್ಲೆಂಡ್ ನಲ್ಲಿ 1,608 ಮತ್ತು ಪೋರ್ಚುಗಲ್ ನಲ್ಲಿ 1316 ಜನರು ಸಾವನ್ನಪ್ಪಿದ್ದಾರೆ.