ನವದೆಹಲಿ, ಜ 30 : ವುಹಾನ್ ವಿಶ್ವವಿದ್ಯಾಲಯದ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಮಾರಣಾಂತಿಕ ಕರೋನವೈರಸ್ ಸೋಂಕು ದೃಢಪಡುವುದರೊಂದಿಗೆ ಭಾರತದಲ್ಲಿ ಧೃಡಪಟ್ಟ ಮೊದಲ ಪ್ರಕರಣ ಇದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
‘ವುಹಾನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗೆ ಕೊರೊನಾ ವೈರಸ್ ಧೃಡಪಟ್ಟಿರುವುದು ಕೇರಳದಿಂದ ವರದಿಯಾಗಿದೆ.’ ಎಂದು ರೋಗಿಯ ಒಂದು ಸಕಾರಾತ್ಮಕ ಪ್ರಕರಣ ಕೇರಳದಲ್ಲಿ ವರದಿಯಾಗಿದೆ" ಎಂದು ಕೇಂದ್ರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
‘ರೋಗಿಗೆ ಕರೋನ ವೈರಸ್ ಸೋಂಕು ಇರುವುದು ಪರೀಕ್ಷೆಯಿಂದ ಗೊತ್ತಾಗಿದೆ. ಆತನನ್ನು ಪತ್ಯೇಕ ವಾರ್ಡ್‍ನಲ್ಲಿ ಇರಿಸಲಾಗಿದೆ. ರೋಗಿಯ ಆರೋಗ್ಯ ಸ್ಥಿರವಾಗಿದ್ದು, ಆರೋಗ್ಯ ಸ್ಥಿತಿಯನ್ನು ನಿಕಟವಾಗಿ ಗಮನಿಸಲಾಗುತ್ತಿದೆ.’ ಎಂದು ಸಚಿವಾಲಯ ತಿಳಿಸಿದೆ. ವರದಿಗಳಂತೆ, ಕೇರಳದ ಮುಂಜಾಗ್ರತಾ ಕ್ರಮವಾಗಿ ವಿವಿಧ ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್‍ಗಳಲ್ಲಿ ಸದ್ಯ, 10 ಜನರನ್ನು ಇರಿಸಲಾಗಿದೆ.