ಜೆರುಸಲೆಮ್, ಮಾರ್ಚ್ 23 ಇಸ್ರೇಲ್‌ನಲ್ಲಿ ಭಾನುವಾರ ಒಂದೇ ದಿನ 188 ಜನರು ಕರೋನ ಸೋಂಕಿಗೆ ತುತ್ತಾಗಿದ್ದು, ಪರಿಣಾಮ ದೇಶದಲ್ಲಿ ಒಟ್ಟು ಪ್ರಕರಣಗಳನ್ನು ದೃಡಪಸಿದ ಪ್ರಕರಣಗಳ ಸಂಖ್ಯೆ 1,071 ಕ್ಕೆ ತಲುಪಿದೆ ಎಂದು ಇಸ್ರೇಲ್ ಆರೋಗ್ಯ ಸಚಿವಾಲಯ ತಿಳಿಸಿದೆ.ಇಸ್ರೇಲ್‌ನಾದ್ಯಂತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 314 ರೋಗಿಗಳ ಪೈಕಿ 18 ಮಂದಿ ಗಂಭೀರ ಸ್ಥಿತಿಯಲ್ಲಿದ್ದರೆ, 30 ಮಂದಿ ಮಧ್ಯಮ ಸ್ಥಿತಿಯಲ್ಲಿದ್ದಾರೆ.ಇತರ 757 ರೋಗಿಗಳಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ, 344 ಮಂದಿ ಮನೆಯಲ್ಲೆ ಕ್ಯಾರೆಂಟೈನ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. 97 ಹೋಟೆಲ್‌ಗಳನ್ನು ಚಿಕಿತ್ಸಾ ಸೌಲಭ್ಯಗಳಾಗಿ ಪರಿವರ್ತಿಸಲಾಗಿದೆ, 37 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು ಉಳಿದ 278 ಜನರಿಗೆ ಶೀಘ್ರದಲ್ಲೇ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಪ್ರಕಾರ ಮನೆ, ಹೋಟೆಲ್ ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು.