6 ಕೋಟಿ ಜನರನ್ನು ಕಡುಬಡತನಕ್ಕೆ ನೂಕಲಿದೆ ಕರೋನ ಸೋಂಕು..!

ವಾಷಿಂಗ್ಟನ್,  ಮೇ, 20,ಚೀನಾದ ವುಹಾನ್ ನಲ್ಲಿ ಜನ್ಮತಾಳಿ ನಂತರ  ವಿಶ್ವದ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ಸೋಂಕಿನಿಂದ   ಜಗತ್ತಿನ ಸುಮಾರು 6 ಕೋಟಿಗೂ ಅಧಿಕ ಹೆಚ್ಚು ಜನರು ಕಡು ಬಡತನಕ್ಕೆ ಜಾರಲಿದ್ದಾರೆ ಎಂದು ವಿಶ್ವ ಬ್ಯಾಂಕ್ ಆತಂಕ ವ್ಯಕ್ತಪಡಿಸಿದೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ  ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್ಪಾಸ್ ಅವರು, 'ಕೋವಿಡ್-19 ಪಿಡುಗು ವಿಶ್ವದ ವಿವಿಧ ದೇಶಗಳಲ್ಲಿ 6 ಕೋಟಿ ಮಂದಿಯನ್ನು 'ಅತಿ ಬಡತನ'ಕ್ಕೆ ದೂಡಲಿದ್ದು,  ಮೂರು ವರ್ಷಗಳ ದುಡಿಮೆಯನ್ನು ಈ ಪಿಡುಗು ಕಿತ್ತುಕೊಂಡಿದೆ ಎಂದು ಹೇಳಿದ್ದಾರೆ.'ವಿಶ್ವದ ಆರ್ಥಿಕತೆ ಈ ವರ್ಷ ಶೇ 5ರಷ್ಟು ಕಡಿಮೆಯಾಗಬಹುದು ಎಂದ ಅವರು ವಿಶೇಷವಾಗಿ ಬಡ ದೇಶಗಳ ಮೇಲೆ ಈ ಪರಿಣಾಮ ಕೆಟ್ಟದಾಗಿರಲಿದೆ. ಕಳೆದ ಮೂರು ವರ್ಷಗಳಲ್ಲಿ ಬಡತನ ನಿರ್ಮೂಲನ ಕಾರ್ಯಕ್ರಮಗಳ ಮೂಲಕ ಸಾಧಿಸಲಾದ ಪ್ರಗತಿಯನ್ನು ಕೊರೊನಾ ನಾಶ ಮಾಡಲಿದೆ. ಅತ್ಯಂತ ಕೆಟ್ಟ ಆರ್ಥಿಕ ಹಿಂಜರಿತ ಜಗತ್ತನ್ನು ಕಾಡಲಿದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.