ಪ್ರಪಂಚದಾದ್ಯಂತ 47 ಲಕ್ಷ ಜನರಿಗೆ ಕೊರೊನಾ ಸೋಂಕು

ನ್ಯೂಯಾರ್ಕ್, ಮೇ 18,ಪ್ರಪಂಚದಾದ್ಯಂತ 47 ಲಕ್ಷಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.ಭಾನುವಾರದ ವೇಳೇಗೆ ಒಟ್ಟು 47,08,415 ಜನರಲ್ಲಿ ಸೋಂಕು ದೃಢಪಟ್ಟಿದ್ದು 3,14,950 ಜನರು ಈ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಅಂಕಿಅಂಶಗಳು ತಿಳಿಸಿವೆ.ಅಮೆರಿಕದಲ್ಲಿ ಅತಿ ಹೆಚ್ಚು 14,86,375 ಪ್ರಕರಣಗಳು ವರದಿಯಾಗಿದ್ದು 89,549 ಮಂದಿ ಮೃತಪಟ್ಟಿದ್ದಾರೆ.ರಷ್ಯಾ, ಬ್ರಿಟನ್, ಬ್ರೆಜಿಲ್, ಸ್ಪೇನ್ ಮತ್ತು ಇಟಲಿಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.