ಕೊರೊನವೈರಸ್‍: ತಮಿಳುನಾಡಿನಲ್ಲಿ ಮೂರನೇ ಪ್ರಕರಣ ದೃಢ

ಚೆನ್ನೈ, ಮಾರ್ಚ್ 19, ತಮಿಳುನಾಡಿನಲ್ಲಿ ಮಾರಕ ಕೊರೊನವೈರಸ್‍ನ ಮೂರನೇ ಪ್ರಕರಣ ವರದಿಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಡಾ. ಸಿ ವಿಜಯಬಾಸ್ಕರ್ ಇಂದು ದೃಢಪಡಿಸಿದ್ದಾರೆ.
ಸೋಂಕು ದೃಢಪಟ್ಟ ರೋಗಿ ಐರ್ಲೆಂಡ್‌ ರಾಜಧಾನಿ ಡಬ್ಲಿನ್‍ ನಿಂದ ಹಿಂತಿರುಗಿದ 21 ವರ್ಷದ ವಿದ್ಯಾರ್ಥಿಯಾಗಿದ್ದಾನೆ. ಮಾರ್ಚ್ 17 ರಂದು ಚೆನ್ನೈಗೆ ಆಗಮಿಸಿದ ವಿದ್ಯಾರ್ಥಿಯನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಿ, ಆತನ ಮನೆಯಲ್ಲಿ ಸಂಪರ್ಕ ತಡೆ ವಿಧಿಸಲಾಗಿತ್ತು. ಯುವಕ ರಾಜೀವ್ ಗಾಂಧಿ ಸರ್ಕಾರಿ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿದ್ದ. ನಿನ್ನೆ ಪರೀಕ್ಷೆಗೆ ಕಳುಹಿಸಲಾಗಿದ್ದ ಆತನ ರಕ್ತ ಮಾದರಿ ಪರೀಕ್ಷೆಗಳಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಯುವಕನನ್ನು ಪ್ರತ್ಯೇಕ ವಾರ್ಡ್‍ನಲ್ಲಿ ಇರಿಸಲಾಗಿದ್ದು, ಆತನ ಆರೋಗ್ಯ ಸ್ಥಿರವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.