ಮುಂಬೈ, ಮಾರ್ಚ್ 19, ಮಾರಕ ಕೊರೊನಾವೈರಸ್ (ಕೊವಿದ್ -19) ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್ 31 ರವರೆಗೆ ತಮ್ಮ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಕಚೇರಿಗಳಿಗೆ ಮನೆ ಊಟ ತಲುಪಿಸುವಲ್ಲಿ ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿರುವ ಮುಂಬೈನ ಡಬ್ಬಾವಾಲಾಗಳು ಹೇಳಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರದಿಂದ ಊಟ ಪೂರೈಕೆ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಮುಂಬೈ ಡಬ್ಬಾವಾಲಾ ಸಂಘದ ವಕ್ತಾರ ಸುಭಾಷ್ ತಾಲೇಕರ್ ಹೇಳಿದ್ದಾರೆ.
ಕೊರೋನವೈರಸ್ ತಡೆಯಲು ಸ್ಥಳೀಯ ರೈಲುಗಳಲ್ಲಿ ಜನದಟ್ಟಣೆ ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಯವರ ಮನವಿಗೆ ಸ್ಪಂದಿಸಿರುವ ಸಂಘವು ಊಟ ಪೂರೈಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.. ಡಬ್ಬಾವಾಲಗಳು ಮುಂಬೈ ಮಹಾನಗರದ ಜೀವನಾಡಿಯಾಗಿದ್ದಾರೆ. ನಗರದ ಸಹಸ್ರಾರು ಜನರಿಗೆ ಸ್ಥಳೀಯ ರೈಲುಗಳಲ್ಲಿ ಅವರದೇ ಮನೆಗಳಿಂದ ಕಚೇರಿಗಳಿಗೆ ಊಟ ಪೂರೈಕೆ ಸೇವೆಯನ್ನು ಒದಗಿಸುತ್ತಿದ್ದಾರೆ. .ಮಾರಣಾಂತಿಕ ಸೋಂಕು ಬೆದರಿಕೆಯಿಂದಾಗಿ ಡಬ್ಬಾವಾಲಗಳ ಸೇವೆಯಲ್ಲಿನ ಅಡಚಣೆ ಅನಿವಾರ್ಯವಾಗಿದ್ದರೂ ಸಹಸ್ರಾರು ಜನರು ತೊಂದರೆಗೊಳಗಾಗುವ ಸಾಧ್ಯತೆಯಿದೆ.
ಬಿಕ್ಕಟ್ಟಿನ ಸಂದರ್ಭಗಳಲ್ಲಿ ಸೇವೆ ಡಬ್ಬಾವಾಲಾಗಳು ಹೆಸರಾಗಿದ್ದಾರೆ. ಪ್ರವಾಹದ ಸಂದರ್ಭಗಳಲ್ಲಿ ಅಡಿಗಳಷ್ಟು ನಿಂತ ನೀರಿನಲ್ಲಿ ಡಬ್ಬಾಗಳನ್ನು ತಲೆಯ ಮೇಲೆ ಹೊತ್ತು ನಿರ್ದಿಷ್ಟ ಸ್ಥಳಗಳಲ್ಲಿನ ಕಚೇರಿಗಳಿಗೆ ತಿಂಡಿ-ಊಟದ ಬಾಕ್ಸ್ ಗಳನ್ನು ತಲುಪಿಸಿದ್ದಾರೆ,