ಕೊರೋನಾ ವೈರಸ್: ಭಾರತೀಯ ವೈದ್ಯಕೀಯ ಸಂಘದಿಂದ ಜನ ಜಾಗೃತಿ

ಬೆಂಗಳೂರು, ಮಾ 19, ರಾಜ್ಯದಲ್ಲಿ ಮಹಾಮಾರಿಯಾಗಿ ಪರಿಣಮಿಸಿರುವ ಕೊರೋನಾ ವೈರಸ್ ನಿಯಂತ್ರಣ ಕುರಿತ ಜನ ಜಾಗೃತಿ ಮೂಡಿಸಲು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕ ಕಾರ್ಯ ಪ್ರವೃತ್ತವಾಗಿದೆ.ಕೊರೋನಾ ವೈರಸ್ ಪ್ರಕರಣಗಳ  ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಕೊರೋನಾ ನಿಯಂತ್ರಣ ಮತ್ತು‌ ಮುಂಜಾಗ್ರತಾ ಕ್ರಮಗಳನ್ನು‌ ಕೈಗೊಳ್ಳುವಲ್ಲಿ ಭಾರತೀಯ ವೈದ್ಯಕೀಯ ಸಂಘ ಜನಜಾಗೃತಿ ಆರಂಭಿಸಿದೆ.
ಸಂಘದ ರಾಜ್ಯಾಧ್ಯಕ್ಷ  ಡಾ.ಮಧುಸೂಧನ ಕಾರಿಗನೂರು‌ ಈ ಕುರಿತು ಮಾಹಿತಿ ನೀಡಿ, " ನಮ್ಮ ಸಂಘದ 179 ಶಾಖೆಗಳ‌ ಮೂಲಕ ಕೊರೊನಾ ವೈರಸ್ ಬಗ್ಗೆ ಜನರಲ್ಲಿ‌ ಅರಿವು ಮೂಡಿಸಲಾಗುತ್ತಿದೆ. ಕರಪತ್ರ, ಬ್ಯಾನರ್ ಹಂಚುವ ಜತೆಗೆ ವೈರಸ್ ನಿಂದಾಗುವ ಪರಿಣಾಮಗಳ ಬಗ್ಗೆ ಉಪನ್ಯಾಸ ನೀಡಲಾಗುತ್ತಿದೆ" ಎಂದರು.
ಕೆಮ್ಮು, ಜ್ವರ‌‌,  ನೆಗಡಿ ಇರುವವರು ಆಸ್ಪತ್ರೆಗಳಿಗೆ ಬಂದರೆ ಪ್ರತ್ಯೇಕ ವಾರ್ಡಗಳ‌ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.  ಸರ್ಕಾರಿ  ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ತಮಗೆ ಆಹ್ವಾನ ಸಂತೋಷದಿಂದ ತೆರಳುವುದಾಗಿ ಹೇಳಿದರು.