ಕೊರೋನಾ ವೈರಾಣು: ಉತ್ತರಪ್ರದೇಶದಲ್ಲಿ 132 ಚೀನಾ ಪ್ರವಾಸಿಗರ ತಪಾಸಣೆ

ಖುಷಿನಗರ, ಫೆ 3 :       ಚೀನಾದಲ್ಲಿ ಕಾಣಿಸಿಕೊಂಡಿರುವ ಮಾರಕ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಆರೋಗ್ಯ ಇಲಾಖೆ 132 ಚೀನಾ ಪ್ರವಾಸಿಗರನ್ನು ತಪಾಸಣೆಗೊಳಪಡಿಸಿದೆ. 

ಶನಿವಾರ ರಾತ್ರಿ ಚೀನಾದ 132 ಪ್ರವಾಸಿಗರ ಮೂರು ತಂಡ ಖುಷಿನಗರ ತಲುಪಿದ್ದಾರೆ. ಸೋಮವಾರ ಬೆಳಗ್ಗೆ ಅವರನ್ನು ತಪಾಸಣೆಗೊಳಪಡಿಸಲಾಗಿದೆ. 

ವೈದ್ಯಕೀಯ ಅಧಿಕಾರಿಗಳು ಅವರು ತಂಗಿರುವ ಹೋಟೆಲ್ ಗಳಿಗೆ ಭೇಟಿ ನೀಡಿ ಪ್ರತಿ ಪ್ರವಾಸಿಗನ ತಾಸಣೆ ನಡೆಸಿದ್ದಾರೆ. ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ. 

ಈ ನಡುವೆ, ಎಲ್ಲಾ ಪ್ರವಾಸಿಗರು ಆರೋಗ್ಯವಾಗಿದ್ದು, ಮಾಸ್ಕ್ ಧರಿಸಿಯೇ ಹೊರಹೋಗುವಂತೆ  ಸೂಚನೆ ನೀಡಲಾಗಿದೆ ಎಂದು ಜಿಲ್ಲೆಯ ಮಲೇರಿಯ ಅಧಿಕಾರಿ ತಿಳಿಸಿದ್ದಾರೆ.