ಕೊರೊನವೈರಸ್: ಕ್ರೂಸ್ ಹಡಗಿನಲ್ಲಿದ್ದ 119 ಭಾರತೀಯರು ಜಪಾನ್ನಿಂದ ತವರಿಗೆ ವಾಪಸ್

ನವದೆಹಲಿ, ಫೆ 27 :   ಕೊರೊನ ವೈರಸ್ ಸೋಂಕಿನಿಂದ ಜಪಾನ್‌ನ ಯೊಕೊಹಾಮಾ ಬಂದರಿನಲ್ಲಿ ನಿರ್ಬಂಧಿತವಾಗಿದ್ದ ಡೈಮಂಡ್ ಪ್ರಿನ್ಸೆಸ್ ಕ್ರೂಸ್ ಹಡಗಿನಲ್ಲಿದ್ದ  119 ಭಾರತೀಯ ಪ್ರಜೆಗಳನ್ನು ವಿಶೇಷ ಏರ್ ಇಂಡಿಯಾ ವಿಮಾನ ಮೂಲಕ ಗುರುವಾರ ತವರಿಗೆ ವಾಪಸ್ ಕರೆ ತರಲಾಗಿದೆ. 

  ಸ್ಥಳಾಂತರಗೊಂಡವರಲ್ಲಿ 113 ಸಿಬ್ಬಂದಿ ಮತ್ತು ಆರು ಪ್ರಯಾಣಿಕರು ಸೇರಿದ್ದಾರೆ.

  ‘ಭಾರತದ ನೆರೆಹೊರೆಯ ನೀತಿ ಮತ್ತು ಭಾರತ-ಪೆಸಿಫಿಕ್ ದೃಷ್ಟಿಗೆ ಅನುಗುಣವಾಗಿ ವಿಶೇಷ ವಿಮಾನ 5 ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸಿದೆ. ಅಲ್ಲದೆ, ಶ್ರೀಲಂಕಾದ ಇಬ್ಬರು,  ನೇಪಾಳ,  ದಕ್ಷಿಣ ಆಫ್ರಿಕಾ ಮತ್ತು ಪೆರು ದೇಶದ ತಲಾ ಒಬ್ಬರನ್ನು ವಿಶೇಷ ವಿಮಾನ ಸ್ಥಳಾಂತರಿಸಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.  

 ಹರಿಯಾಣದ ಮಾನೇಸರ್‌ನಲ್ಲಿ ಭಾರತೀಯ ಸೇನೆ ಸ್ಥಾಪಿಸಿರುವ ಸಂಪರ್ಕ ತಡೆ ಶಿಬಿರಗಳಲ್ಲಿ  ಸ್ಥಳಾಂತರಗೊಂಡ ಎಲ್ಲರನ್ನೂ ಇರಿಸಲಾಗುವುದು. ಇವರೆಲ್ಲ 14 ದಿನಗಳ ಸಂಪರ್ಕತಡೆಗೆ ಒಳಗಾಗಲಿದ್ದಾರೆ.  

 ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಒಟ್ಟು 138 ಭಾರತೀಯ ಪ್ರಜೆಗಳ ಪೈಕಿ, 16 ಭಾರತೀಯರಿಗೆ   ಕರೋನವೈರಸ್ ಸೋಂಕು ದೃಢಪಟ್ಟಿದೆ. ಜಪಾನ್‌ನ ಕಡಲಾಚೆಯ ವೈದ್ಯಕೀಯ ಸೌಲಭ್ಯಗಳ ಮೂಲಕ ಇವರು ಅಗತ್ಯ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಟೋಕಿಯೊದಲ್ಲಿನ ಭಾರತೀಯ ರಾಯಭಾರ ಕಚೇರಿ ಈಗಾಗಲೇ ಈ ವ್ಯಕ್ತಿಗಳೊಂದಿಗೆ ಸಂಪರ್ಕವನ್ನು ಸಾಧಿಸಿದ್ದು, ಅವರ ಚೇತರಿಕೆಗಾಗಿ ನಿರಂತರ ನಿಗಾ ಇಟ್ಟಿದೆ. 

  ಹಡಗಿನಿಂದ ಇಳಿದ ಪ್ರಯಾಣಿಕರಲ್ಲಿ ಒಬ್ಬರಿಗೆ ವೈರಸ್ ಸೋಂಕು ದೃಢಪಟ್ಟಿದ್ದರಿಂದ 

 ಫೆ 5 ರಂದು ಫೆ 19 ರವರೆಗೆ 14 ದಿನಗಳ ಕಾಲ ಜಪಾನ್ ಸರ್ಕಾರ ಈ ಹಡಗನ್ನು ಸಂಪರ್ಕತಡೆಗೆ ಒಳಪಡಿಸಲಾಗಿತ್ತು.  ಈ ಅವಧಿಯನ್ನು 14 ದಿನಗಳ ಜಪಾನ್ ಸರ್ಕಾರ ಮತ್ತೆ 14 ದಿನ ವಿಸ್ತರಿಸಿತ್ತು. 

  ಕ್ರೂಸ್ ಹಡಗಿನ ಪ್ರಕರಣಗಳ ಹೊರತಾಗಿ, ಜಪಾನ್ ನಲ್ಲಿ ಗುರುವಾರದವರೆಗೆ 186 ಪ್ರಕರಣಗಳು ಪತ್ತೆಯಾಗಿವೆ. ಚೀನಾದ ವುಹಾನ್ ನಿಂದ ವಾಪಾಸು ಕಳುಹಿಸಿದ ಜನರು ಸೇರಿದಂತೆ ಒಟ್ಟು 844 ಪ್ರಕರಣಗಳೊಂದಿಗೆ ಜಪಾನ್ ವೈರಸ್ ಪ್ರಕರಣಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಇದೆ.