ನವದೆಹಲಿ, ಮಾ.19 ಕೊರೊನಾ ವೈರಸ್ ಭೀತಿ ಹಿನ್ನೆಲೆ ರೈಲು ಪ್ರಯಾಣಿಕರು ಟಿಕೆಟ್ ರದ್ದು ಪಡಿಸಿದರೆ, ಯಾವುದೇ ಶುಲ್ಕ ವಿಧಿಸದೆ ಪ್ರತಿಷತ ನೂರಕ್ಕೆ ನೂರುರಷ್ಟು ಹಣವನ್ನು ಹಿಂದಿರುಗಿಸುವ ಬಗ್ಗೆ ಗುರುವಾರ ಸರ್ಕಾರ ಪ್ರಕಟಿಸಿದೆ. ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಲೋಕಸಭೆಯ ಶೂನ್ಯ ವೇಳೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. “ಈಗಾಗಲೇ ಸುತ್ತೋಲೆ ಹೊರಡಿಸಲಾಗಿದ್ದು, ರೈಲು ಟಿಕೆಟ್ ರದ್ದು ಮಾಡಿದ ಪ್ರಯಾಣಿಕರು ಪೂರ್ತಿ ಹಣವನ್ನು ವಾಪಸ್ ನೀಡುವುದಾಗಿ” ತಿಳಿಸಿದ್ದಾರೆ. ರೈಲ್ವೆ ಸಾರಿಗೆ ಇಲಾಖೆ ಈ ಕುರಿತ ಸಂಸದೀಯ ಸ್ಥಾಯಿ ಸಮಿತಿಗೆ ಮಾಹಿತಿ ನೀಡಿದೆ. ಕೊರೊನಾ ವೈರಸ್ ಭೀತಿಯಿಂದ ಬುಧವಾರ ಶೇಕಡಾ 63 ರಷ್ಟು ಟಿಕೆಟ್ ಗಳು ರದ್ದಾಗಿವೆ ಎಂದು ಪ್ರವಾಸೋದ್ಯ ಮತ್ತ ಸಂಸ್ಕೃತಿ ಇಲಾಖೆ ತಿಳಿಸಿದೆ. ಅವಶ್ಯಕತೆ ಇದ್ದರೆ ಮಾತ್ರ ಪ್ರಯಾಣಿಸಿ ಎಂದು ದೇಶದ ಜನರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡಿದ್ದಾರೆ. ಅಲ್ಲದೆ ಕೋವಿಡ್-19 ಬಗ್ಗೆ ಸಂಸದರು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಬಗ್ಗೆ ವಿಶೇಷವಾಗಿ ಗಮನ ಹರಿಸಲಾಯಿತು.