ಬಳ್ಳಾರಿಯಲ್ಲಿ ಕೊರೋನಾ ಅಟ್ಟಹಾಸ: ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆ - ತೀವ್ರ ಕಟ್ಟೆಚ್ಚರ

ಬಳ್ಳಾರಿ, ಏ 17,ಗಡಿ ನಾಡು ಬಳ್ಳಾರಿಯಲ್ಲಿ ಕೊರೋನಾ ವೈರಸ್ ಅಟ್ಟಹಾಸ ತೀವ್ರಗೊಂಡಿದ್ದು, ಗಣಿ ನಾಡನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.  ಬಳ್ಳಾರಿಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 6ರಲ್ಲೇ ನಿಯಂತ್ರಣದಲ್ಲಿತ್ತು. ಇಂದು ಒಂದೇ ಕುಟುಂಬದ ಏಳು ಜನರಲ್ಲಿ ಕೊರೋನಾ ಸೋಂಕು ಕಂಡು ಬಂದಿರುವುದು ತೀವ್ರ ಆತಂಕ ಮೂಡಿಸಿದೆ. ಹೀಗಾಗಿ ತೀವ್ರ ನಿಗಾ ವಹಿಸಲಾಗಿದೆ. ಹೊಸಪೇಟೆ ನಗರದ ಒಂದೇ ಕಟುಂಬದ ಏಳು ಜನರಲ್ಲಿ ಈ ಸೋಂಕು ಕಂಡು ಬಂದಿರುವುದರಿಂದ ಈಗ ಹೊಸಪೇಟೆ ನಗರ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ.ಕಳೆದ ಎರಡು ವಾರಗಳಲ್ಲಿ ಜಿಲ್ಲೆಯಲ್ಲಿ ಹೊಸ ಪ್ರಕರಣಗಳು ವರದಿಯಾಗಿರಲಿಲ್ಲ. ಜತೆಗೆ ಲಾಕ್‍ಡೌನ್ ಸಮಯದಲ್ಲಿ ಜನತೆ ಮನೆಯಲ್ಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ಸೋಂಕು ಹರಡಂದಂತೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಗೆ ಜನತೆ ಉತ್ತಮ ಸಹಕಾರ ನೀಡಿದ್ದರು. ಮಾರ್ಚ್ 30 ರಂದು ಹೊಸಪೇಟೆಯ ಎಸ್.ಆರ್. ನಗರದ ಗಂಡ ,ಹೆಂಡತಿ, ಮಗಳಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಇವರು ಯಾರು ವಿದೇಶದಿಂದ ಬಂದವರ ಸಂಪರ್ಕದಲ್ಲಿದ್ದರು. ಇದೀಗ ಹೊಸದಾಗಿ ಸೋಂಕು ಪತ್ತೆಯಾದವರನ್ನು ಕ್ವಾರೆಂಟೇನ್ ನಲ್ಲಿಟ್ಟು ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ.