ಕರೋನ ಭೀತಿ: ದೇಶೀಯ ವಿಮಾನಗಳ ಹಾರಾಟ ಸ್ಥಗಿತಕ್ಕೆ ಮಮತಾ ಆಗ್ರಹ

ನವದೆಹಲಿ, ಮಾರ್ಚ್ 23, ದೇಶದಲ್ಲಿ  ಕರೋನ  ವ್ಯಾಪಕವಾಗಿ ಹರಡುತ್ತಿರುವ ಕಾರಣ ಕೂಡಲೆ ದೇಶದ ಎಲ್ಲಾ ವಿಮಾನಯಾನ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಆಗ್ರಹಪಡಿಸಿದ್ದಾರೆ .
ಈ ಕುರಿತು ಅವರು ಇಂದು ಪ್ರಧಾನಿ ಅವರಿಗೆ  ಪತ್ರ ಬರೆದಿದ್ದು, ಬಂಗಾಳದಲ್ಲಿ ಯಾವುದೇ ವಿಮಾನಗಳನ್ನು ಇಳಿಯಲು ಅನುಮತಿ ಕೊಡುವುದಿಲ್ಲ  ದಯವಿಟ್ಟು ದೇಶದಲ್ಲಿ ಎಲ್ಲಾ ರೀತಿಯ ವಿಮಾನ ಹಾರಾಟ  ಕಾರ್ಯಾಚರಣೆಯನ್ನು ನಿಲ್ಲಿಸುವುದಕ್ಕೆ ಕೂಡಲೇ   ಕ್ರಮ ಕೈಗೊಳ್ಳಿ ಎಂದು ಅವರು ಒತ್ತಾಯ ಮಾಡಿದ್ದಾರೆ. ಯಾವುದೇ ಭಾರತೀಯ ವಿಮಾನ ನಿಲ್ದಾಣದ ಒಳಗೆ ಮತ್ತು ಹೊರಗೆ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಬರುವ 29 ರವರೆಗೆ ಇಳಿಯಲು  ಅನುಮತಿ ನೀಡಲಾಗಿಲ್ಲ  ದೇಶಿಯ ವಿಮಾನಗಳು  ದೆಹಲಿ ವಿಮಾನ ನಿಲ್ದಾಣ ಮತ್ತು ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುಲು ಅನುಮತಿ ಕೊಡಲಾಗಿದೆ. ವಿಮಾನ ನಿಲ್ದಾಣಗಳು ದೆಹಲಿ ಸರ್ಕಾರ ಘೋಷಿಸಿದ ರಾಷ್ಟ್ರೀಯ ರಾಜಧಾನಿ ಲಾಕ್‌ಡೌನ್‌ನ ಭಾಗವಾಗಿಲ್ಲ ಎಂಬುದನ್ನು  ಅವರು ಗಮನಕ್ಕೆ ತಂದಿದ್ದಾರೆ.