ಬೆಳಗಾವಿ 15: ಜನವರಿ 16, 2025 ರಂದು, ಛತ್ರಪತಿ ಶಂಭುರಾಜರ 344 ನೇ ಪಟ್ಟಾಭಿಷೇಕ ಸಮಾರಂಭವನ್ನು ಧರ್ಮವೀರ್ ಸಂಭಾಜಿರಾಜೆ ಸೌಂದರ್ಯೀಕರಣ ಸಮಿತಿಯು ಆಯೋಜಿಸಿತ್ತು. ಈ ಕಾರ್ಯಕ್ರಮದ ನೇತೃತ್ವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ಅನಿಲ ಬೆನಕೆ ವಹಿಸಿದ್ದರು. ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸಿ ಸಮಾರಂಭವನ್ನು ಆಚರಿಸಲಾಯಿತು. ಗುರುವಾರ ಬೆಳಿಗ್ಗೆ 6 ಗಂಟೆಗೆ ಧರ್ಮವೀರ್ ಸಂಭಾಜಿಚೌಕ್ನಲ್ಲಿ ಮಾಜಿ ಶಾಸಕ ಅನಿಲ ಬೆನಕೆ ಅವರು ಛತ್ರಪತಿ ಸಂಭಾಜಿ ಮಹಾರಾಜರ ವಿಗ್ರಹಕ್ಕೆ ಅಭಿಷೇಕ ನೆರವೇರಿಸಿ, ಧಾರ್ಮಿಕ ಪೂಜೆಸಲ್ಲಿಸಿದ ನಂತರ ಮಾಲಾರೆ್ಣ ಮಾಡಿದರು.
ಈ ಸಂದರ್ಭದಲ್ಲಿ ಧರ್ಮವೀರ ಸಂಭಾಜಿ ರಾಜೇಸೌಂದರ್ಯೀಕರಣ ಸಮಿತಿಯ ಅಧ್ಯಕ್ಷ ಸುನೀಲ್ ಜಾಧವ್, ಕಾರ್ಯದರ್ಶಿ ಪ್ರಸಾದ್ಮೋರೆ, ಕಾರ್ೊರೇಟರ್ ಶಂಕರ್ ಪಾಟೀಲ್, ಶ್ರೀನಾಥ್ಪವಾರ್, ನಿಶಾಂತಖುಡೆ, ಜಯತೀರ್ಥ ಸವದತ್ತಿ ಮತ್ತು ಶಂಭು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.