ನವದೆಹಲಿ, ಮೇ 2, ಕರೋನ ಬಿಕ್ಕಟ್ಟಿನಿಂದ ಪಾರಾಗಿ, ಅರ್ಥವ್ಯವಸ್ಥೆಗೆ ಪುನಶ್ಚೇತನ ನೀಡಲು ನೀತಿ ಆಯೋಗ ಸರ್ಕಾರಕ್ಕೆ ಮಹತ್ವದ ಹಲವು ಪ್ರಸ್ತಾವನೆಗಳನ್ನು ಸಲ್ಲಿಸಿದೆ. ಜೊತೆಗೆ ಲಾಕ್ಡೌನ್ ಅನ್ನು ಹೀಗೆಯೇ ಮುಂದುವರೆಸಿಕೊಂಡು ಹೋದರೆ ಜಾಗತಿಕವಾಗಿ ಸಾಕಷ್ಟು ಹಿಂದುಳಿಯಬೇಕಾದೀತು ಎಂಬ ಅಸಮ್ಮತಿ ತೋಡಿಕೊಂಡಿದೆ ಎನ್ನಲಾಗಿದೆ. ಸಾಫ್ಟ್ ವೇರ್ ರಂಗದ ಉದ್ಯಮ ಪತಿ ಎನ್ . ಆರ್ ನಾರಾಯಣಮೂರ್ತಿ ನಂತರ ನೀತಿ ಆಯೋಗ ಸಹ ಲಾಕ್ ಡೌನ್ ಮುಂದುವರೆಸುವ ಕ್ರಮದ ಬಗ್ಗೆ ಅಸಮಾಧಾನ ಹೊರಹಾಕಿದೆ. ಕೊರೊನಾ ಸೋಂಕು ತಡೆಗಟ್ಟಲು ದೇಶದಲ್ಲಿ ಇದೇ 17 ರವೆರೆಗೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿದ್ದರೂ ಸರ್ಕಾರದ ಚಿಂತಕರ ಚಾವಡಿ ಎನ್ನಲಾದ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು ಕೊರೊನಾ ಬಿಕ್ಕಟ್ಟಿನಿಂದ ಪಾರಾಗಲು ಪ್ರಮುಖವಾಗಿ 6 ಅಂಶಗಳ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.
ಸೋಂಕಿನ ತೀವ್ರತೆ ಹೆಚ್ಚಿರುವ ಪ್ರದೇಶಗಳನ್ನ ಗುರುತಿಸಿ ಸಂಪೂರ್ಣ ಕಟ್ಟುನಿಟ್ಟಾಗಿ ನಿರ್ಬಂಧ ಹೇರಬೇಕು. ರೆಡ್ ಝೋನ್ನಲ್ಲಿ ಕಟ್ಟುನಿಟ್ಟಿನ ಕಂಟೈನ್ಮೆಂಟ್ ಮಾಡಬೇಕು.-ಜನರು ಮಾಸ್ಕ್ ಧರಿಸುವುದು ಮತ್ತು ಹೊರಗೆ ದೈಹಿಕ ಅಂತರ ಪಾಲಿಸುವುದು ಕಡ್ಡಾಯವಾಗಬೇಕು. ಮತ್ತೆ ಕೆಲಸಕ್ಕೆ ತೆರಳುವುದು ಸಾಧ್ಯವಾದರೆ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ಕೊರೊನಾ ಸೋಂಕು ಯಾವಾಗ ಬೇಕಾದರೂ ಪುನರಾವರ್ತನೆಯಾಗಬಹುದು ಈ ಕುರಿತು ಜ್ಞರು, ವಿಶ್ವ ಆರೋಗ್ಯ ಸಂಸ್ಥೆ ಕೂಡ ಮತ್ತೆ ಮತ್ತೆ ಎಚ್ಚರಿಕೆ ನೀಡುತ್ತಿದೆ. ಲಾಕ್ಡೌನ್ ನಂತರವೂ ಇದು ಮತ್ತೆ ತಲೆ ಎತ್ತಬಹುದು ಎನ್ನಲಾಗಿದೆ.60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಸತತ ಗಮನ ಕೊಡುವುದು ಅತಿಮುಖ್ಯ. ಇವರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಿರುವ ಕಾರಣ ಕೊರೊನಾ ಇವರಿಗೆ ಮಾರಣಾಂತಿಕ ಆಗಬಹುದು.-ಕರೋನ ಈವರೆಗೆ ಲಸಿಕೆ ಕಂಡು ಹಿಡಿದಿಲ್ಲ. ಹೀಗಾಗಿ ಮದ್ದು ಸಿದ್ದಗೊಳ್ಳುವವರೆಗೆ ಕೊರೊನಾ ವಿರುದ್ಧ ಹೋರಾಡುವುದು ಅನಿವಾರ್ಯ. ಲಾಕ್ಡೌನ್ ಅನ್ನು ಹೀಗೆಯೇ ಮುಂದೂಡುತ್ತಾ ಹೋದರೆ. ಜಾಗತಿಕವಾಗಿ ನಾವು ಸಾಕಷ್ಟು ಹಿಂದುಳಿದುಬಿಡುತ್ತೇವೆ. ಹೀಗಾಗಿ ಆರ್ಥಿಕತೆಗೆ ಹಸಿರು ವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಮರುಚಾಲನೆ ನೀಡಬೇಕು ಎಂಬ ಅಂಶಗಳನ್ನು ನೀತಿ ಆಯೋಗ ಕೇಂದ್ರದ ಮುಂದಿಟ್ಟಿದೆ ಎನ್ನಲಾಗಿದೆ.