ಬಾಗಲಕೋಟೆ, ಎ 9, ಮಾರಕ ಕೊರೊನಾ ಸೋಂಕಿಗೆ ರಾಜ್ಯ ತಲ್ಲಣ ಗೊಂಡಿದೆ ಬಾಗಲಕೋಟೆಯಲ್ಲಿ ಮೂವರು ಮಕ್ಕಳಲ್ಲಿ ಸೋಂಕು ದೃಢಪಟ್ಟಿರುವುದು ಜಿಲ್ಲೆಯ ಜನರ ಆತಂಕ ಹೆಚ್ಚಿಸಿದೆ.
ಇಂದು ಬೆಳಗ್ಗೆ 10 ಗಂಟೆಯವರೆಗೆ ರಾಜ್ಯದಲ್ಲಿ ಹೊಸದಾಗಿ 10 ಮಂದಿಯಲ್ಲಿ ಸೋಂಕಿನ ಪಾಸಿಟಿವ್ ವರದಿ ಬಂದಿದ್ದು , ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 191ಕ್ಕೆ ಏರಿಕೆಯಾಗಿದೆ.
ಈ ಪೈಕಿ ಬಾಗಲಕೋಟೆಯಲ್ಲಿ ಮೂವರು ಮಕ್ಕಳಲ್ಲಿ ಮಾರಕ ಸೋಂಕು ದೃಢಪಟ್ಟಿರುವುದು ಜನರಲ್ಲಿ ಭೀತಿ, ಆತಂಕ ಮನೆ ಮಾಡಿದೆ. ಬಾಗಲಕೋಟೆಯ ನಾಲ್ಕು ವರ್ಷದ ಬಾಲಕನಲ್ಲೂ ಸೋಂಕಿನ ಪಾಸಿಟಿವ್ ಬಂದಿದೆ. ಜಿಲ್ಲೆಯಲ್ಲಿ ಹೆಚ್ಚು ಆತಂಕ ಎದುರಾಗಿದೆ. ಸೋಂಕಿತರು ಕಂಡುಬಂದಿರುವ ಪ್ರದೇಶವನ್ನು ಈಗಾಗಲೇ ಕಂಟೈನ್ ಮೆಂಟ್ ಜೋನ್ ಎಂದು ಘೋಷಿಸಲಾಗಿದ್ದು, ನೆರೆಹೊರೆಯವರ ವಿಶೇಷ ನಿಗಾ ಇಡಲಾಗಿದೆ .