ಪಾಕಿಸ್ತಾನ ಮಾಜಿ ಕ್ರಿಕೆಟರ್ ಷಾಹಿದ್ ಆಫ್ರಿದಿಗೆ ಕೊರೊನಾ ಸೋಂಕು

ಇಸ್ಲಾಮಾಬಾದ್, ಜೂನ್ ೧೩,ಜಗತ್ತಿನೆಲ್ಲೆಡೆ ಕೊರೊನಾ ಸಾಂಕ್ರಾಮಿಕ ರುದ್ರ ನರ್ತನ ಮಾಡುತ್ತಿದೆ. ಜನ ಸಾಮಾನ್ಯರು  ಮಾತ್ರವಲ್ಲ  ಸೆಲೆಬ್ರೇಟಿಗಳನ್ನು ಈ ಸೋಂಕು  ಬಿಡುತ್ತಿಲ್ಲ.ಈಗ  ಪಾಕಿಸ್ತಾನ ಮಾಜಿ ಕ್ರಿಕೆಟರ್  ಷಾಹಿದ್  ಆಫ್ರಿದಿ  ಅವರಿಗೂ   ಕೊರೊನಾ  ಸೋಂಕು ತಗುಲಿದೆ. ಈವರೆಗೆ ಪ್ರಪಂಚದೆಲ್ಲೆಡೆ ಬಹಳಷ್ಟು  ಸೆಲೆಬ್ರೆಟಿಗಳು ಕೊರೊನಾ ಸೋಂಕಿಗೊಳಗಾಗಿದ್ದಾರೆ.   ಹೊಸದಾಗಿ  ಪಾಕಿಸ್ತಾನ ಮಾಜಿ ಕ್ರಿಕೆಟರ್ ಷಾಹಿದ್  ಆಫ್ರಿದಿ  ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.ಈ ವಿಷಯವನ್ನು  ಅವರೇ ಸ್ವಯಂ ಬಹಿರಂಗಪಡಿಸಿದ್ದಾರೆ.  ಗುರುವಾರದಿಂದ  ಮನೆಯಲ್ಲಿ  ಸ್ವಯಂ ನಿರ್ಬಂಧಕ್ಕೆ ಒಳಗಾಗಿದ್ದೇನೆ.  ಪರೀಕ್ಷೆಗೆ ಒಳಗಾದ ನಂತರ   ತಮಗೆ  ಕೊರೊನಾ ವೈರಸ್   ಸೋಂಕು  ಇರುವುದು ದೃಢಪಟ್ಟಿದೆ  ಎಂದು  ಆಫ್ರಿದಿ  ಟ್ವೀಟ್ ಮಾಡಿದ್ದಾರೆ.ಪ್ರತಿಯೊಬ್ಬರೂ ತಮ್ಮ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. . ಕೊರೊನಾ ಸೋಂಕಿಗೆ ಒಳಗಾದ  ಅಂತರಾಷ್ಟ್ರೀಯ ಕ್ರಿಕೆಟರ್ ಗಳಲ್ಲಿ ಆಫ್ರಿದಿ  ಎರಡನೇ ವ್ಯಕ್ತಿಯಾಗಿದ್ದಾರೆ. ಈವರೆಗೆ  ಪಾಕಿಸ್ತಾನದಲ್ಲಿ  ಆರಂಭಿಕ ಆಟಗಾರ  ತೌಫಿಕ್ ಉಮರ್  ಕೊರೊನಾ  ಸೋಂಕಿಗೆ ಒಳಗಾಗಿದ್ದರು.ಸೂಕ್ತ  ಚಿಕಿತ್ಸೆ ಪಡೆದುಕೊಂಡು ಈಗ  ಕೊರೊನೊದಿಂದ  ಚೇತರಿಸಿಕೊಂಡಿದ್ದಾರೆ.