ನವದೆಹಲಿ , ಮಾ27 ದೇಶಾದ್ಯಂತ ಗುರುವಾರ ಕರೋನ ಸೋಂಕಿನಿಂದ ಏಳು ಮಂದಿ ಮೃತಪಟ್ಟಿದ್ದಾರೆ . ಈ ಮಾರಕ ಸೋಂಕಿಗೆ ಇದುವರೆಗೆ ಬಲಿಯಾದವರ ಒಟ್ಟು ಸಂಖ್ಯೆ 20ಕ್ಕೆ ಹಾಗೂ ಸೋಂಕಿತರ ಸಂಖ್ಯೆ 749 ಕ್ಕೆ ಏರಿಕೆಯಾಗಿದೆ. ಆದರೆ
ಆರೋಗ್ಯ ಸಚಿವಾಲಯ ಕರೋನ ಸೋಂಕಿನಿಂದ ಆರು ಮಂದಿ ಮೃತಪಟ್ಟಿರುವುದನ್ನಷ್ಟೇ
ದೃಢಪಡಿಸಿದೆ. ಸಚಿವಾಲಯದ ವರದಿಯ ಪ್ರಕಾರ ದೃಢಪಡಿಸಿದ ಸಾವಿನ ಸಂಖ್ಯೆ ಈಗ 17 ಆಗಿದೆ
. ಹೊಸದಾಗಿ 88 ಪ್ರಕರಣಗಳು ಪತ್ತೆಯಾಗಿದೆ , ಜೊತೆಗೆ 694 ಮಂದಿಗೆ ಸೋಂಕು
ತಗುಲಿದೆ ಎಂದೂ ಸಚಿವಾಲಯ ಹೇಳಿದೆ.