ನವದೆಹಲಿ, ಏ ೨೮,ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ‘ಲಾಕ್ ಡೌನ್’ ತೀರ್ಮಾನ ಅತ್ಯುತ್ತಮ ಪರಿಣಾಮ ಉಂಟು ಮಾಡುತ್ತಿದ್ದು, ಇದರಿಂದಾಗಿ ಹೊಸದಾಗಿ ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ನೀತಿ ಆಯೋಗದ ಸದಸ್ಯ ಹಾಗೂ ವೈದ್ಯಕೀಯ ನಿರ್ವಹಣಾ ಸಮಿತಿ ಅಧ್ಯಕ್ಷ ವಿಕೆ ಪಾಲ್ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದರು. ಪ್ರಧಾನಿ ಮೋದಿ ಜಾರಿಗೊಳಿಸಿರುವ ಲಾಕ್ ಡೌನ್ ಮುಗಿಯಲಿರುವ ಮೇ ೩ರಿಂದ ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಮತ್ತಷ್ಟು ತಗ್ಗಲಿದೆಯೆಂದೂ, ಮೇ ೧೬ರಿಂದ ಒಂದೇ ಒಂದು ಹೊಸ ಪ್ರಕರಣ ದಾಖಲಾಗಲು ಆಸ್ಪದವಾಗುವುದಿಲ್ಲ ಎಂದು ವಿ.ಕೆ.ಪಾಲ್ ಹೇಳಿದ್ದರು.
ಮೇ ೩ ರಿಂದ ಹೊಸ ಪ್ರಕರಣಗಳು ಇಳಿಯಲಿವೆ ಎಂದು ಹೇಳುವುದು ಸಮಂಜಸವಲ ಎಂದು ವೈದ್ಯಕೀಯ ನಿರ್ವಹಣಾ ಸಮಿತಿಯ ಸ್ವತಂತ್ರ ಸದಸ್ಯರೊಬ್ಬರು ಹೇಳಿದ್ದಾರೆ. ಈ ವಿಷಯವನ್ನು “ದಿ ಹಿಂದೂ” ದೈನಿಕ ವರದಿಮಾಡಿದ್ದು, ಮುಂಬೈನಲ್ಲಿ ಮೇ ೧೫ರ ವೇಳೆಗೆ ಕೊರೊನಾ ವೈರಾಣು ಪ್ರಕರಣಗಳು ಏರುಮುಖಗೊಳ್ಳಲಿವೆ, ದಿನ ದಿನಕ್ಕೂ ಏರಿಕೆ ಕಂಡು ಪ್ರಕರಣಗಳ ಸಂಖ್ಯೆ ಶೇ. ೨೦ರಷ್ಟು ಹೆಚ್ಚಳಗೊಳ್ಳಬಹುದು ಕೇಂದ್ರ ಸರ್ಕಾರ ಏಪ್ರಿಲ್ ೨೨ ರಂದು ನೀಡಿದ್ದ ಮಾಹಿತಿಗೆ ಇದು ಸಂಪೂರ್ಣವಾಗಿ ವಿರುದ್ದವಾಗಿದೆ.ಇನ್ನೂ ... ಕೇಂದ್ರ ಸರ್ಕಾರ ಭಾನುವಾರ ರಾಜ್ಯಗಳ ಮುಖ್ಯಕಾರ್ಯದರ್ಶಿಗಳೊಂದಿಗೆ ನಡೆಸಿದ ಸಭೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಮತ್ತಷ್ಟು ಹೆಚ್ಚಬಹುದು. ಆಗಸ್ಟ್ ೧೫ರವೇಳೆಗೆ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ೨.೭೪ ಕೋಟಿಗೆ ಏರಬಹುದು ಎಂದು ಅಂದಾಜಿಸಿತ್ತು.ಕೊರೊನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಲೆಕ್ಕಾಚಾರಗಳು ಗೊಂದಲಮಯವಾಗಿ, ಪರಸ್ಪರ ವಿರೋಧಭಾಸವಾಗಿ ಇರುವುದರ ಅರ್ಥ ಏನು..? ಯಾವ ಆಧಾರಗಳ ಮೇಲೆ ಕೇಂದ್ರ ಸರ್ಕಾರ ಈ ಅಂದಾಜು ಮಾಡಿದೆ?. ಯಾರಿಗೂ ಅಸಲಿ ವಿಷಯ ಮನವರಿಕೆಯಾದಂತೆ ಕಾಣುತ್ತಿಲ್ಲ. ಯಾರಿಗೆ ಏನು ಅನಿಸುತ್ತಿದೆಯೋ ಅದನ್ನು ಅವರು ಹೇಳುತ್ತಿದ್ದಾರೆ. ಲಾಕ್ ಡೌನ್ ಮೇ ೩ರ ನಂತರವೂ ವಿಸ್ತರಿಸಲಿದ್ದಾರೆಯೋ.. ಇಲ್ಲವೋ ಎಂಬ ಬಗ್ಗೆ ಒಮ್ಮತವಿಲ್ಲ. ಕೆಲವರು ವಿಸ್ತರಿಸಬೇಕು ಎಂದು ಸಲಹೆ ನೀಡಿದ್ದಾರೆ. ಇತರರು ಮುಂದುವರಿಕೆ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಜನರು ಮಾತ್ರ... ಹೊಟ್ಟೆ ತುಂಬಿದವರು ಕೊರೊನಾ ಸೋಂಕು ತಗುಲಿ ಎಲ್ಲಿ ಸಾಯಲಿದ್ದೇವೋ ಎಂಬ ಭಯದಿಂದ ಲಾಕ್ ಡೌನ್ ಮುಂದುವರಿಸಬೇಕೆಂದು ಕೋರುತ್ತಿದ್ದಾರೆ. ಹಸಿವಿನಿಂದ ಬಳಲುತ್ತಿರುವವರು ಲಾಕ್ ಡೌನ್ ತೆರವುಗೊಳಿಸಬೇಕು ಎಂದು ಬಯಸುತ್ತಿದ್ದಾರೆ.