ಬೈಲಹೊಂಗಲ12,- ತಾಲೂಕಿನ ನೇಸರಗಿ ಗ್ರಾಮದ ವ್ಯಾಪಾರಿಯೊಬ್ಬರಿಗೆ ಕೊರೊನಾ ಸೊಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ರವಿವಾರ ಆತನ ಪತ್ನಿ, ಮಗಳನ್ನು ಬೈಲಹೊಂಗಲ ಕೊರಂಟೈನ್ ವಸತಿಗೃಹಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಕಳಿಸಲಾಗಿದೆ.
ನೇಸರಗಿ ಗ್ರಾಮದ ವ್ಯಾಪಾರಿಯೊಬ್ಬರು ಗುಜರಾತ, ಆಂದ್ರ, ತೆಲಂಗಾನ ಗೋವಾ ರಾಜ್ಯಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಕಳೆದ 15 ದಿನಗಳ ಹಿಂದೆ ವಿಪರೀತ ಕೆಮ್ಮು, ಜ್ವರ ಬಂದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಚಿಕಿತ್ಸೆಪಡೆದಾಗ ಡೆಂಗ್ಯೂ ದೃಡಪಟ್ಟು, ಅವರನ್ನು ಬೆಳಗಾವಿಯಲ್ಲಿ ಕ್ವಾರಂಟೈನ ಮಾಡಿ ಗಂಟಲು ದೃವ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ರವಿವಾರ ಆತನಿಗೆ ಕರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆತನ ಪತ್ನಿ, ಮಗಳನ್ನು ನೇಸರಗಿ ವಾಸಸ್ಥಳದಿಂದ ಬೈಲಹೊಂಗಲ ಕೊರೈಂಟನ್ ಕೇಂದ್ರಕ್ಕೆ ಕಳಿಸಲಾಗಿದೆ.
ಇದರಿಂದ ಗ್ರಾಮದಲ್ಲಿ ಆತಂಕದ ಛಾಯೆ ಮೂಡಿದೆ. ಆತನ ಮನೆಯ ವಾಸಸ್ಥಳದ ಹತ್ತಿರದ 17 ಜನರನ್ನು ಹೊಂ ಕೊರೈಂಟನ್ ಮಾಡಲಾಗಿದೆ. ಅವರ ಮನೆಯ ಬೀದಿಗೆ ಔಷದ ಸಿಂಪರಣೆ ಮಾಡಿದ್ದು, ಸೊಂಕಿತ ವ್ಯಕ್ತಿಯ ಓಣಿಯನ್ನು ಸೀಲ್ ಡೌನ ಮಾಡಲಾಗಿದೆ.
ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಸಿದ್ದನ್ನವರ,ಪಿಎಸ್ಐ ವಾಯ್.ಎಲ್.ಶಿಗಿಹಳ್ಳಿ, ಗ್ರಾ.ಪಂ ಅಧ್ಯಕ್ಷ ಸತಾರ ಮೋಕಾಶಿ, ಪಿಡಿಓ ಸೌಮ್ಯಾ, ಗ್ರಾ.ಪಂ ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಪೋಲಿಸ್ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕತರ್ೆರು, ಅಂಗನವಾಡಿ ಕಾರ್ಯಕತರ್ೆಯರು,
ಉಪಸ್ಥಿತರಿದ್ದರು.